Personal Finance
ಎಲ್‌ಐಸಿ ಪಾಲಿಸಿದಾರರಿಗೆ ಇಲ್ಲಿ ಮಹತ್ವದ ಸಿಹಿ ಸುದ್ದಿ ಇದೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ಶನಿವಾರ ಲ್ಯಾಪ್ಸ್ ಆದ ವೈಯಕ್ತಿಕ ವಿಮೆಯನ್ನು ಮತ್ತೆ ರಿನಿವಲ್ ಅಥವಾ ಪುನರುಜ್ಜೀವನಗೊಳಿಸುವ ಅಭಿಯಾನವನ್ನು ಪ್ರಾರಂಭ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ), ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ಲ್ಯಾಪ್ಸ್ ಆಗಿರುವ ಮತ್ತು ಪಾಲಿಸಿ ಅವಧಿಯನ್ನು ಪೂರ್ಣಗೊಳಿಸದ ಪಾಲಿಸಿಗಳು ಈ ಅಭಿಯಾನದಲ್ಲಿ ಪುನರ್ ಆರಂಭ ಮಾಡಲು ಅರ್ಹವಾಗಿರಲಿದೆ ಎಂದು ಹೇಳಿದೆ. ಈ ಅಭಿಯಾನವು ಫೆಬ್ರವರಿ 7 ರಿಂದ ಮಾರ್ಚ್ 25, 2022 ರವರೆಗೆ ನಡೆಯಲಿದೆ.
ಮಾರ್ಚ್‌ನಲ್ಲಿ ನೀಡಲಿರುವ ಎಲ್‌ಐಸಿ ಐಪಿಒದಲ್ಲಿ ಶೇ 5ರಷ್ಟು ಪಾಲು ಮಾರಾಟ
ಇನ್ನು ಈ ಕೊರೊನಾ ಸಾಂಕ್ರಾಮಿಕ ಸಂದರ್ಭವನ್ನು ಗಣನೆಗೆ ತೆಗೆದುಕೊಂಡು ಎಲ್‌ಐಸಿ ಈ ಕ್ರಮವನ್ನು ಕೈಗೊಂಡಿದೆ. “ಪ್ರಸ್ತುತ ಕೊರೊನಾ ವೈರಸ್ ಸಾಂಕ್ರಾಮಿಕ ಸನ್ನಿವೇಶವು ಸಾವಿನಿಂದ ರಕ್ಷಣೆ ಪಡೆಯುವ ಅಗತ್ಯವನ್ನು ಒತ್ತಿಹೇಳಿದೆ. ಈ ಅಭಿಯಾನವು ಎಲ್ಐಸಿಯ ಪಾಲಿಸಿದಾರರಿಗೆ ತಮ್ಮ ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಲು, ಜೀವಿತಾವಧಿಯನ್ನು ಮತ್ತೆ ರಿನಿವಲ್ ಮಾಡಲು ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ,” ತಿಳಿಸಿದೆ.

ವಿಳಂಬ ಶುಲ್ಕದಲ್ಲಿ ರಿಯಾಯಿತಿ ನೀಡಲು ಮುಂದಾದ ಎಲ್‌ಐಸಿ
ಇನ್ನು ವಿಳಂಬ ಶುಲ್ಕದಲ್ಲಿ ರಿಯಾಯಿತಿ ನೀಡಲು ಕೂಡಾ ಎಲ್‌ಐಸಿ ಮುಂದಾಗಿದೆ. ಪಾವತಿಸಿದ ಒಟ್ಟು ಪ್ರೀಮಿಯಂಗಳ ಆಧಾರದ ಮೇಲೆ ಟರ್ಮ್ ಅಶ್ಯೂರೆನ್ಸ್ ಮತ್ತು ಹೈ-ರಿಸ್ಕ್ ಪ್ಲಾನ್‌ಗಳನ್ನು ಹೊರತುಪಡಿಸಿ ಇತರ ವಿಳಂಬ ಶುಲ್ಕದಲ್ಲಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ ಎಂದು ಎಲ್ಐಸಿ ಹೇಳಿದೆ. ಆದರೆ ಈ ಸಂದರ್ಭದಲ್ಲೇ ವೈದ್ಯಕೀಯ ಅವಶ್ಯಕತೆಗಳ ಮೇಲೆ ಯಾವುದೇ ರಿಯಾಯಿತಿಗಳಿಲ್ಲ ಎಂದು ತಿಳಿಸಿದೆ. ಅರ್ಹ ಆರೋಗ್ಯ ಮತ್ತು ಸೂಕ್ಷ್ಮ ವಿಮಾ ಯೋಜನೆಗಳು ವಿಳಂಬ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಅರ್ಹತೆ ಹೊಂದಿದೆ ಎಂದು ಮಾಹಿತಿ ನೀಡಿದೆ.
ಎಷ್ಟು ವಿನಾಯಿತಿ ಲಭ್ಯ?
ಒಂದು ಲಕ್ಷದವರೆಗಿನ ಪ್ರೀಮಿಯಂನೊಂದಿಗೆ ಸಾಂಪ್ರದಾಯಿಕ ಮತ್ತು ಆರೋಗ್ಯ ಪಾಲಿಸಿಗಳಿಗೆ, ವಿಮಾದಾರರು ವಿಳಂಬ ಶುಲ್ಕದಲ್ಲಿ 20 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು. ಗರಿಷ್ಠ ರಿಯಾಯಿತಿ ಮಿತಿ 2,000 ರೂಪಾಯಿ ಆಗಿದೆ. ಅದೇ ರೀತಿ, 3 ಲಕ್ಷಕ್ಕಿಂತ ಹೆಚ್ಚಿನ ಪ್ರೀಮಿಯಂ ಮೊತ್ತಕ್ಕೆ, 30 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಅಂದರೆ ಮೂರು ಸಾವಿರ ರೂಪಾಯಿಯಷ್ಟು ವಿನಾಯಿತಿ ನೀಡಲಾಗುತ್ತದೆ.
ಸೂಕ್ಷ್ಮ ವಿಮಾ ಯೋಜನೆಗಳಿಗೆ ವಿಮಾದಾರರು ವಿಳಂಬ ಶುಲ್ಕದಲ್ಲಿ ಸಂಪೂರ್ಣ ರಿಯಾಯಿತಿಯನ್ನು ಪಡೆಯಬಹುದು. ಅಭಿಯಾನದ ಹೊರತಾಗಿ, ಕೆಲವು ನಿಯಮಗಳು ಮತ್ತು ಷರತ್ತುಗಳು ಕೂಡಾ ಇದೆ. ಮೊದಲ ಪಾವತಿಸದ ಪ್ರೀಮಿಯಂ ದಿನಾಂಕದಿಂದ ಐದು ವರ್ಷಗಳೊಳಗೆ ನಿರ್ದಿಷ್ಟ ಅರ್ಹ ಯೋಜನೆಗಳ ಪಾಲಿಸಿಗಳನ್ನು ಮಾತ್ರ ಪುನರುಜ್ಜೀವನಗೊಳಿಸಬಹುದು ಎಂದು ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಹೇಳಿದೆ.
Budget 2022: ಶೀಘ್ರದಲ್ಲೇ ಎಲ್‌ಐಸಿ ಐಪಿಒ ಎಂದ ವಿತ್ತ ಸಚಿವೆ
ಶೀಘ್ರದಲ್ಲೇ ಎಲ್‌ಐಸಿ ಐಪಿಒ
ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಬಹು ನಿರೀಕ್ಷಿತ ಐಪಿಒ ಶೀಘ್ರದಲ್ಲೇ ಆರಂಭ ಆಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ದೇಶದಲ್ಲಿ ಅತೀ ದೊಡ್ಡ ವಿಮಾ ಕಂಪನಿಯಾದ ಎಲ್‌ಐಸಿಯ ಐಪಿಒ ಶೀಘ್ರದಲ್ಲೇ ನಡೆಯಲಿದೆ ಎಂದು ಈ ಹಿಂದೆ ವರದಿ ಆಗಿತ್ತು. “ತಮ್ಮ ಸರ್ಕಾರವು ಹೊಸ ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಇ) ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಏರ್ ಇಂಡಿಯಾದ ಮಾಲೀಕತ್ವ ವರ್ಗಾವಣೆ ಪೂರ್ಣ ಮಾಡಲಾಗಿದೆ. ಹಣಕಾಸು ವರ್ಷ 2022 ರಲ್ಲಿ ವಿತರಣಾ ಗುರಿಗಳನ್ನು ಸಾಧಿಸಲು ಎಲ್‌ಐಸಿ ಐಪಿಒ ನಿರ್ಣಾಯಕವಾಗಿದೆ,” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
English summary
LIC Allows Customers To Revive Lapsed Policies, Offers Concession In Late Fee
Good News For Policyholders: LIC Allows Customers To Revive Lapsed Policies, Offers Concession In Late Fee.
Story first published: Sunday, February 6, 2022, 13:52 [IST]
Read more…
[wpas_products keywords=”deal of the day”]