Karnataka news paper

ಕುವೈತ್: ಮಹಿಳೆಯರ ಯೋಗ ಶಿಬಿರಕ್ಕೆ ಅನೈತಿಕತೆಯ ಹಣೆಪಟ್ಟಿ; ಕಾರ್ಯಕ್ರಮ ಮುಂದೂಡಿಕೆ


The New Indian Express

ಕುವೈತ್ ಸಿಟಿ: ನಗರದಲ್ಲಿ ಆಯೋಜನೆಗೊಂಡಿದ್ದ ಮಹಿಳಾ ಯೋಗ ಶಿಬಿರ ವಿರುದ್ಧ ದೇಶದಲ್ಲಿ ಅಕ್ಷೇಪ ಕೇಳಿಬಂದಿದ್ದು ವಿವಾದಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: ಪಾಕಿಸ್ತಾನ: ಇಮ್ರಾನ್ ಖಾನ್ ರನ್ನು ಟೀಕಿಸಿದ ಒಲಿಂಪಿಕ್ಸ್ ಗೋಲ್ಡ್ ಮೆಡಲ್ ವಿಜೇತ ಹಿರಿಯ ಹಾಕಿ ಅಟಗಾರನಿಗೆ ನಿಷೇಧ

ಮಹಿಳಾ ಯೋಗ ಶಿಬಿರ ಅನೈತಿಕ ಚಟುವಟಿಕೆಯಾಗಿದ್ದು ಅದಕ್ಕೆ ನಿರ್ಬಂಧ ಹೇರಬೇಕೆಂಬ ಒತ್ತಾಯಗಳು ಕೇಳಿಬಂದಿದ್ದವು. ಈ ವೇಳೆಗೆ ಅಧಿಕಾರಿಗಳು ಕಾರ್ಯಕ್ರಮ ಆಯೋಜನೆಗೆ ಪರವಾನಗಿ ಅಗತ್ಯವಿದೆ ಎಂದು ಆಯೋಜಕರ ಬೆನ್ನುಬಿದ್ದಿದ್ದರು. ಇದರಿಂದಾಗಿ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.

ಯೋಗ ತರಬೇತುದಾರಳಾಗಿರುವ ಇಮಾನ್ ಎಂಬುವವರು ತಮ್ಮ ಕಾರ್ಯಕ್ರಮ ವಿರುದ್ಧ ಮಾಧ್ಯಮಗಳು ತಿರುಗಿಬಿದ್ದಿರುವುದಾಗಿ ಆರೋಪಿಸಿದ್ದಾರೆ. 

ಇದನ್ನೂ ಓದಿ:  ಇಮ್ರಾನ್ ಸರ್ಕಾರಕ್ಕೆ ಅಮೆರಿಕದಲ್ಲಿ ಛೀಮಾರಿ! ಭಾರತದ ಮೇಲೆ ಕೆಂಡ ಕಾರಿದ ಪಾಕಿಸ್ತಾನ: ಇಂಡಿಯಾ ವಿರುದ್ಧ ಆಕ್ರೋಶ ಏಕೆ?

ಕಾರ್ಯಕ್ರಮ ಆಯೋಜನೆ ಮಾಡಲು ಪರವಾನಗಿ ಅಗತ್ಯವಿದೆ ಎನ್ನುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಈಗ ಯೋಗ ಕಾರ್ಯಕ್ರಮಕ್ಕೆ ತಡೆಯೊಡ್ಡಲು ಹುನ್ನಾರ ನಡೆಸಲಾಗುತ್ತಿದೆ ಎಂದು ಇಮಾನ್ ದೂರಿದ್ದಾರೆ. 

ಕುವೈತ್ ಇತರೆ ಗಲ್ಫ್ ದೇಶಗಳಿಗಿಂತ ಭಿನ್ನವಾಗಿದೆ. ಇಲ್ಲಿ ಸಚಿವರು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯ ಹೊಂದಿದ್ದಾರೆ.

ಇದನ್ನೂ ಓದಿ:  ವಿಯೆಟ್ನಾಂ: ಜೆನ್ ಮಾಸ್ಟರ್, ಶಾಂತಿ ದೂತ ತಿಕ್ ನಾತ್ ಹಾನ್ ಅಂತ್ಯಕ್ರಿಯೆ; ಸಾವಿರಾರು ಜನರಿಂದ ಭಾವಪೂರ್ಣ ವಿದಾಯ



Read more

[wpas_products keywords=”deal of the day”]