ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಉಸ್ಮಾನಗಣಿ ವಿರುದ್ಧ 110 ಮತ್ತು 151 ಸಿ.ಆರ್.ಪಿ.ಸಿ ಅಡಿಯಲ್ಲಿ ಮುಂಜಾಗ್ರತಾ ವರದಿ ಅಡಿ ಕೇಸ್ ದಾಖಲಿಸಲಾಗಿತ್ತು. ಘಟನೆ ಬೆನ್ನಲ್ಲೆ ಉಸ್ಮಾನಗಣಿ ಹುಮ್ನಾಬಾದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಉಸ್ಮಾನಗಣಿ ಕ್ಷಮೆ ಯಾಚಿಸುವಂತೆ ಆಗ್ರಹ ವ್ಯಕ್ತವಾಗಿತ್ತು. ಜನರ ಆಕ್ರೋಶ ಬೆನ್ನಲ್ಲೇ ಉಸ್ಮಾನಗಣಿ ತಲೆಮರೆಸಿಕೊಂಡಿದ್ದ್.
ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಉಸ್ಮಾನಗಣಿಯನ್ನು ಬಂಧಿಸಿದ್ದಾರೆ. ಬಳಿಕ ರಾತ್ರಿ ತಹಸೀಲ್ದಾರ್ ಬಸವರಾಜ್ ಮುಂದೆ ಹಾಜರುಪಡಿಸಿದ್ದಾರೆ. ಇನ್ನು ನಿರೀಕ್ಷಣಾ ಜಾಮೀನು 110 ಕಲಂನಡಿ ನಿರಾಕರಿಸಿದ ತಹಸೀಲ್ದಾರ್ ಫೆ.9ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ. ಬಾಗಲಕೋಟೆಯ ನವನಗರದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಉಸ್ಮಾನಗಣಿ ಹುಮ್ನಾಬಾದ್ ನನ್ನು ಕಳುಹಿಸಲಾಗಿದೆ.
ಉಸ್ಮಾನಗಣಿ ಹೇಳಿದ್ದೇನು?
ಬೋಲೋ ಭಾರತ ಮಾತಾ ಕೀ ಜೈ ಅನ್ನೋದು ಅನ್ ಸೈಂಟಿಪಿಕ್ ವರ್ಡ್ (ಅವೈಜ್ಞಾನಿಕ ಪದ) ಎಂದು ಭಾಷಣದಲ್ಲಿ ಹೇಳಿದ್ದರು. ಬೇರೆಯವರು ಇದನ್ನೆಲ್ಲ ಬರೀ ಮಾತಿಗೆ ಹೇಳ್ತಾರೆ. ನಾನು ಎಂಐಎಂ ರಾಜ್ಯಾಧ್ಯಕ್ಷನಾಗಿ ಹೇಳ್ತೇನೆ. ಒಂದು ಮಗುವಿಗೆ ಜನ್ಮ ಕೊಡಲು ತಾಯಿಗಳು ಎಷ್ಟು ಬೇಕು…? ಒಬ್ಬ ತಾಯಿ ಸಾಕಲ್ವಾ? ಮತ್ತೆ ಈ ಭಾರತ್ ಮಾತಾ, ಗಂಗಾ ಮಾತಾ, ಗಾಯ್ ಮಾತಾ ಎಲ್ಲಿ ಬರ್ತಾಳೆ. ಕಂಡ ಕಂಡವರಿಗೆ ತಾಯಿ ಅನ್ನುತ್ತಾ ಹೋದರೆ ಮುಂದೆ ದೇಶದ ಗತಿ ಏನು…? ಇವು ಅನ್ ಸೈಂಟಿಪಿಕ್ ವರ್ಡ್ ಎಂದು ಭಾರತಮಾತೆಗೆ ಅವಮಾನಿಸುವಂತ ಹೇಳಿಕೆ ನೀಡಿದ್ದರು.
Read more
[wpas_products keywords=”deal of the day sale today offer all”]