Karnataka news paper

U19 ಕ್ರಿಕೆಟ್ ವಿಶ್ವಕಪ್: ವಿಶ್ವವಿಜೇತ ಟೀಂ ಇಂಡಿಯಾದ ಆಟಗಾರರಿಗೆ ಬಿಸಿಸಿಐ 40 ಲಕ್ಷ ರೂ. ನಗದು ಬಹುಮಾನ ಘೋಷಣೆ! 


PTI

ನವದೆಹಲಿ: ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ವಿಶ್ವಕಪ್ ಮುಡಿಗೇರಿಸಿಕೊಂಡ ಟೀಂ ಇಂಡಿಯಾದ ಯುವ ಆಟಗಾರರಿಗೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಣೆ ಮಾಡಿದೆ.

India U19 – The FIVE-TIME World Cup Winners #U19CWC #BoysInBlue pic.twitter.com/DiE53Sdu0Y

ಹೌದು… ಟೀಂ ಇಂಡಿಯಾದ ಕಿರಿಯರ ತಂಡವು 5ನೇ ಬಾರಿಗೆ ವಿಶ್ವಕಪ್​ ಟ್ರೋಫಿ(U19 Cricket World Cup) ಜಯಿಸಿದ್ದು, ನಿನ್ನೆ ನಡೆದ(ಫೆ.5) ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಅಂಡರ್ 19 ವಿಶ್ವಕಪ್ ನಲ್ಲಿ ಇದು ಭಾರತದ ಸತತ ಮೂರನೇ ಪ್ರಶಸ್ತಿಯಾಗಿದೆ. ಇದೀಗ ವಿಶ್ವ ವಿಜೇತ ಭಾರತ ತಂಡ(Team India)ಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಐತಿಹಾಸಿಕ ಸಾಧನೆ ಮಾಡಿರುವ ತಂಡದ ಆಟಗಾರರಿಗೆ ಬಿಸಿಸಿಐ ನಗದು ಬಹುಮಾನ ಘೋಷಿಸಿದೆ.

ಮಹತ್ವದ ಫೈನಲ್ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆಯೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಮತ್ತು ಕಾರ್ಯದರ್ಶಿ ಜೈ ಶಾ(Jay Shah) ಟ್ವೀಟ್ ಮಾಡುವ ಮೂಲಕ ಆಟಗಾರರು, ಸಿಬ್ಬಂದಿ ಹಾಗೂ ಆಯ್ಕೆಗಾರರನ್ನು ಅಭಿನಂದಿಸಿದ್ದಾರೆ. ಇದರ ಜೊತೆಗೆ ತಂಡದ ಪ್ರತಿಯೊಬ್ಬ ಆಟಗಾರರಿಗೆ ತಲಾ 40 ಲಕ್ಷ ರೂ. ಹಾಗೂ ತಂಡದ ಸಿಬ್ಬಂದಿಗೆ ತಲಾ 25 ಲಕ್ಷ ರೂ. ನಗದು ಬಹುಮಾನ(BCCI Cash Reward) ನೀಡುವುದಾಗಿ ತಿಳಿಸಿದ್ದಾರೆ.





Read more…

[wpas_products keywords=”deal of the day sports items”]