Karnataka news paper

ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಬಂದಾಗಿನಿಂದ ಸುಮಾರು 300 ಮಾಧ್ಯಮ ಸಂಸ್ಥೆಗಳು ಬಂದ್: ವರದಿ


The New Indian Express

ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಾಗಿನಿಂದಲೂ ಅಲ್ಲಿನ 34 ಪ್ರಾಂತ್ಯಗಳ ಪೈಕಿ 33ರಲ್ಲಿ ಸುಮಾರು 318 ಮಾಧ್ಯಮ ಸಂಸ್ಥೆಗಳು ಬಾಗಿಲು ಬಂದ್ ಮಾಡಿರುವುದಾಗಿ ವರದಿಯೊಂದು ಹೇಳಿದೆ.

51 ಟಿವಿ ಸ್ಟೇಷನ್ಸ್, 132 ರೇಡಿಯೋ ಸ್ಟೇಷನ್ಸ್ ಮತ್ತು 49 ಆನ್ ಲೈನ್ ಮೀಡಿಯಾ ಸಂಸ್ಥೆಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದಾಗಿ ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಐಎಫ್ ಜೆ) ಗುರುವಾರ ವರದಿಯೊಂದರಲ್ಲಿ ಹೇಳಿದೆ. ಅದರಲ್ಲೂ ಸುದ್ದಿ ಪತ್ರಿಕೆಗಳ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದೆ. 114 ಪತ್ರಿಕೆಗಳ ಪೈಕಿ ಕೇವಲ 20 ಮಾತ್ರ ಮುದ್ರಣವನ್ನು ಮುಂದುವರೆಸಿವೆ ಎಂದು ಟೊಲೊ ನ್ಯೂಸ್ ವರದಿ ಮಾಡಿದೆ.

ಅಫ್ಘನ್ ಮಾಧ್ಯಮ ಸಮುದಾಯದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಐಎಫ್ ಜೆ, ತಾಲಿಬಾನ್ ತೆಕ್ಕೆಗೆ ಬೀಳುವ 5069 ಪತ್ರಕರ್ತರು ಕೆಲಸ ಮಾಡುತ್ತಿದ್ದರು. ಈಗ ಕೇವಲ 2,334 ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಶೇಕಡಾ 72 ರಷ್ಟು ಮಹಿಳಾ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. 243 ಮಹಿಳಾ ಪತ್ರಕರ್ತರು ಈಗಲೂ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.

ಪತ್ರಕರ್ತರು ಉದ್ಯೋಗ ಕಳೆದುಕೊಂಡಿರುವುದು ಮಾತ್ರವಲ್ಲದೇ, ಅವರ ಪಲಾಯನಕ್ಕೆ ಒತ್ತಾಯಿಸಲಾಗಿದೆ. ಅಲ್ಲದೇ, ನಾಗರಿಕರಿಗೆ ಮಾಹಿತಿ ದೊರೆಯದಂತೆ ನಿರಾಕರಿಸಲಾಗಿದೆ ಎಂದು ಐಎಫ್ ಜೆ ಪ್ರಧಾನ ಕಾರ್ಯದರ್ಶಿ ಆಂಟೊನಿ ಬೆಳ್ಳಂಜೆರ್ ಹೇಳಿದ್ದಾರೆ.  ಅಫ್ಘಾನಿಸ್ತಾನದಲ್ಲಿನ ಮಾಧ್ಯಮಗಳ ಪರಿಸ್ಥಿತಿಯನ್ನು ಬಗೆಹರಿಸುವಂತೆ ಕೆಲ ಪತ್ರಕರ್ತರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ.



Read more

[wpas_products keywords=”deal of the day”]