Karnataka news paper

ಹೈದರಾಬಾದ್‌ನಲ್ಲಿ ನಿರ್ಮಿಸಲಾದ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ’ ಬಗ್ಗೆ ನಿಮಗೆಷ್ಟು ಗೊತ್ತು?


Online Desk

ಹೈದರಾಬಾದ್: 11ನೇ ಶತಮಾನದ ಸಮಾಜ ಸುಧಾರಕ ಮತ್ತು ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ ತೆಲಂಗಾಣದ ಹೈದರಾಬಾದ್‌ನಲ್ಲಿ ನಿರ್ಮಾಣಗೊಂಡಿರುವ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ ಶನಿವಾರ ಲೋಕಾರ್ಪಣೆಗೊಳ್ಳಲಿದೆ. ಬಹು ಎತ್ತರದ ದೈತ್ಯ ಪ್ರತಿಮೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ 5 ಗಂಟೆಗೆ ಅನಾವರಣಗೊಳಿಸಲಿದ್ದಾರೆ.

ಚಿನ್ನ ಜೀಯರ್ ಸ್ವಾಮೀಜಿ ಅವರ ಆಶ್ರಮದ ಹೇಳಿಕೆಯ ಪ್ರಕಾರ, ಕುಳಿತುಕೊಂಡಿರುವ ಭಂಗಿಯಲ್ಲಿರುವ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ವಿಶ್ವದ ಎರಡನೇ ಅತಿದೊಡ್ಡ ಪ್ರತಿಮೆಯಾಗಿದೆ. ಇದನ್ನು ನಗರದ ಹೊರವಲಯದಲ್ಲಿರುವ 45 ಎಕರೆ ಸಂಕೀರ್ಣ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ಇದನ್ನು ಓದಿ: ಹೈದರಾಬಾದ್: 216 ಅಡಿ ಎತ್ತರದ ರಾಮಾನುಜಾಚಾರ್ಯ ಪ್ರತಿಮೆ ಇಂದು ಪ್ರಧಾನಿ ಮೋದಿ ಲೋಕಾರ್ಪಣೆ

1,000-ಕೋಟಿ ಯೋಜನೆ ಇದಾಗಿದ್ದು, ಜಾಗತಿಕವಾಗಿ ಭಕ್ತರ ದೇಣಿಗೆಯಿಂದ ಹಣವನ್ನು ಸಂಗ್ರಹಿಸಿ ಪ್ರತಿಮೆ ನಿರ್ಮಿಸಲಾಗಿದೆ. ಶ್ರೀ ರಾಮಾನುಜಾಚಾರ್ಯರು ಜೀವಿಸಿದ 120 ವರ್ಷಗಳ ನೆನಪಿಗಾಗಿ ಶ್ರೀ ರಾಮಾನುಜಾಚಾರ್ಯರ ಒಳಾಂಗಣ ಮೂರ್ತಿಯನ್ನು 120 ಕೆಜಿ ಚಿನ್ನದಿಂದ ನಿರ್ಮಿಸಲಾಗಿದೆ. ಈ ಮೂರ್ತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಫೆಬ್ರವರಿ 13 ರಂದು ಅನಾವರಣಗೊಳಿಸಲಿದ್ದಾರೆ.

ಸಮಾನತೆಯ ಪ್ರತಿಮೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

  • ಹೊರಾಂಗಣದಲ್ಲಿ ನಿರ್ಮಿತವಾಗಿರುವ 216 ಅಡಿ ಸಮಾನತೆಯ ಪ್ರತಿಮೆಯು ಕುಳಿತುಕೊಳ್ಳುವ ಭಂಗಿಯನ್ನು ಹೊಂದಿರುವ ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದೆ. ಥೈಲ್ಯಾಂಡ್‌ನಲ್ಲಿರುವ ಬುದ್ಧನ ಪ್ರತಿಮೆಯು ಕುಳಿತಿರುವ ಭಂಗಿಯಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಹೇಳಲಾಗುತ್ತದೆ.
  • 2.45 ಬೇಸ್ ಕಟ್ಟಡದ ಮೇಲೆ ಪ್ರತಿಮೆ ನಿರ್ಮಿಸಲಾಗಿದ್ದು, ಇದಕ್ಕೆ ಭದ್ರಾ ವೇದಿಕೆ ಎಂದು ಹೆಸರಿಡಲಾಗಿದೆ. ಇನ್ನು ನೆಲಮಾಳಿಗೆಯಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗಿದ್ದು, ಇಲ್ಲಿ ಪ್ರಾಚೀನ ಭಾರತೀಯ ಗ್ರಂಥಗಳು, ರಾಮಾನುಜಾಚಾರ್ಯರ ಅನೇಕ ಕೃತಿಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
  • ತೆಲಂಗಾಣದ ಮುಚಿಂತಲ್ ಎಂಬ ಹಳ್ಳಿಯಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಯು ಶಂಶಾಬಾದ್ ನಲ್ಲಿರುವ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲಿದೆ.
  • ಇದು ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವನ್ನು ಒಳಗೊಂಡಿರುವ ಐದು ಲೋಹಗಳ ಸಂಯೋಜನೆಯಾದ ಪಂಚಲೋಹದ ಪ್ರತಿಮೆಯಾಗಿದೆ.
  • ಶ್ರೀ ರಾಮಾನುಜಾಚಾರ್ಯರು 120 ವರ್ಷಗಳ ಕಾಲ ಜೀವಿಸಿರುವುದರ ನೆನಪಿಗಾಗಿ ಒಳಾಂಗಣ ದೇವರನ್ನು 120 ಕೆಜಿ ಚಿನ್ನದಿಂದ ಮಾಡಲಾಗಿದೆ.
  • ರೂ 1,000 ಕೋಟಿ ಯೋಜನೆಗೆ ಜಾಗತಿಕವಾಗಿ ಭಕ್ತರ ದೇಣಿಗೆಯಿಂದ ಹಣವನ್ನು ಪಡೆಯಲಾಗಿದೆ.
  • ಈ ಪ್ರತಿಮೆಯು ಶ್ರೀ ರಾಮಾನುಜಾಚಾರ್ಯರ ಆಶ್ರಮದ ಶ್ರೀ ಚಿನ್ನ ಜೀಯರ್ ಸ್ವಾಮಿಗಳ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದೆ.



Read more

[wpas_products keywords=”deal of the day”]