ಮೆಟಾ ಮಾಲೀಕತ್ವದ ವಾಟ್ಸಾಪ್ ವಿಶ್ವದ ಅತ್ಯಂತ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ಆಗಿ ಕಾಣಿಸಿಕೊಂಡಿದೆ. ಟೆಕ್ಸ್ಟ್ ಮೆಸೆಜ್ ಸೇರಿದಂತೆ ಫೋಟೊ, ವಿಡಿಯೋ ಹಂಚಿಕೊಳ್ಳಬಹುದಾದ ಅವಕಾಶ ವಾಟ್ಸಾಪ್ ವೇದಿಕೆಗಳಲ್ಲಿ ಲಭ್ಯ. ಬಳಕೆದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಈಗಾಗಲೇ ವಾಟ್ಸಾಪ್ ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ವಿಶೇಷ ಐಕಾನ್, ಇಮೋಜಿ, ಸ್ಟಿಕ್ಕರ್ ಆಯ್ಕೆಗಳಿಂದಲೂ ಬಳಕೆದಾರರ ಗಮನ ಸೆಳೆದಿದೆ. ಇದೀಗ ಕ್ರಿಸ್‌ಮಸ್ ಹತ್ತಿರದಲ್ಲಿದ್ದು, ಬಳಕೆದಾರರು ಅವರ ವಾಟ್ಸಾಪ್ ಐಕಾನ್ ಅನ್ನು ಕ್ರಿಸ್‌ಮಸ್ ಥೀಮ್ ಐಕಾನ್‌ಗೆ ಬದಲಾಯಿಸಬಹುದಾಗಿದೆ.

ಹೌದು, ವಾಟ್ಸಾಪ್ ಅತೀ ಹೆಚ್ಚಿನ ಬಳಕೆದಾರರನ್ನು ಒಳಗೊಂಡಿದೆ. ಹಬ್ಬದ ದಿನ ಶುಭಾಶಯ ತಿಳಿಸಲು ವಾಟ್ಸಾಪ್ ಪ್ರಮುಖ ಪ್ಲಾಟ್‌ಫಾರ್ಮ್ ಆಗಿದೆ. ಹೊಸ ಲಾಂಚರ್ ಅನ್ನು ಬಳಸಿಕೊಂಡು ಬಳಕೆದಾರರು ಮೂಲ ವಾಟ್ಸಾಪ್ ಐಕಾನ್ ಅನ್ನು ಕ್ರಿಸ್‌ಮಸ್ ಥೀಮ್ ಐಕಾನ್‌ಗೆ ಬದಲಾಯಿಸಬಹುದು. ಈ ಕ್ರಿಸ್‌ಮಸ್ ಥೀಮ್ ಐಕಾನ್‌ನಲ್ಲಿ, ಬಳಕೆದಾರರ ಸ್ಮಾರ್ಟ್‌ಫೋನಿನ ವಾಟ್ಸಾಪ್ ಐಕಾನ್‌ಗೆ ಕ್ರಿಸ್‌ಮಸ್ ಟೋಪಿ ಕಾಣಿಸಿಕೊಳ್ಳಲಿದೆ. ಹಾಗಾದರೇ ವಾಟ್ಸಾಪ್ ಐಕಾನ್ ಅನ್ನು ಕ್ರಿಸ್‌ಮಸ್ ಥೀಮ್ ಐಕಾನ್‌ಗೆ ಬದಲಾಯಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್ ಐಕಾನ್ ಅನ್ನು ಕ್ರಿಸ್‌ಮಸ್ ಥೀಮ್ ಐಕಾನ್‌ಗೆ ಬದಲಾಯಿಸಲು ಹೀಗೆ ಮಾಡಿ:
* ಯಾವುದೇ ಬ್ರೌಸರ್‌ನಿಂದ PNG ಸ್ವರೂಪದಲ್ಲಿ ಕ್ರಿಸ್‌ಮಸ್ ಟೋಪಿಯೊಂದಿಗೆ ವಾಟ್ಸಾಪ್ ಚಿತ್ರವನ್ನು ಸರ್ಚ್ ಮಾಡಿ ಮತ್ತು ಸೇವ್ ಮಾಡಿ.
* ಗೂಗಲ್ ಪ್ಲೇ ಸ್ಟೋರ್ (Google Play Store) ನಿಂದ Nova Launcher ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ.
* ಲಾಂಚರ್ ಅನ್ನು ಪ್ರಾರಂಭಿಸಿ ಮತ್ತು ಅಪ್ಲಿಕೇಶನ್ ಸೂಚಿಸಿದ ನಿಯಮಗಳನ್ನು ಸ್ವೀಕರಿಸಿ.
* ವಾಟ್ಸಾಪ್ ಅಪ್ಲಿಕೇಶನ್ ಅನ್ನು ಸರ್ಚ್ ಮಾಡಿ ಮತ್ತು ಕೆಲವು ಸೆಕೆಂಡುಗಳ ಕಾಲ ಅದನ್ನು ಟ್ಯಾಪ್ ಮಾಡಿ.
* ಈಗ, ಗ್ಯಾಲರಿಯಿಂದ, ನೀವು ಸೇವ್ ಮಾಡಿದ ಕ್ರಿಸ್‌ಮಸ್ ಟೋಪಿಯೊಂದಿಗೆ ವಾಟ್ಸಾಪ್ ಚಿತ್ರವನ್ನು ಆಯ್ಕೆಮಾಡಿ.
ವಾಟ್ಸಾಪ್‌ನಲ್ಲಿ ಕ್ರಿಸ್‌ಮಸ್ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ?
ವಾಟ್ಸಾಪ್ ಸ್ಟಿಕ್ಕರ್‌ಗಳು ಸಾಕಷ್ಟು ಜನಪ್ರಿಯವಾಗಿವೆ ಏಕೆಂದರೆ ಅವುಗಳು ಸಂಪೂರ್ಣ ಹೊಸ ಅಭಿವ್ಯಕ್ತಿ ವಿಧಾನವನ್ನು ನೀಡುತ್ತವೆ. ಇನ್ನು ವಾಟ್ಸಾಪ್ ಅಪ್ಲಿಕೇಶನ್ ತನ್ನದೇ ಆದ ಕ್ರಿಸ್‌ಮಸ್ ಸ್ಟಿಕ್ಕರ್‌ಗಳನ್ನು ನೀಡುವುದಿಲ್ಲ, ಬದಲಿಗೆ ವಾಟ್ಸಾಪ್‌ನಲ್ಲಿ ಸ್ಟಿಕ್ಕರ್‌ಗಳು ಲಭ್ಯವಾಗಲು ಬಳಕೆದಾರರು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

ಕ್ರಿಸ್ಮಸ್ ಸ್ಟಿಕ್ಕರ್‌ಗಳನ್ನು ಕಳುಹಿಸಲು ಈ ಕ್ರಮ ಅನುಸರಿಸಿ:
ಹಂತ 1: ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ.
ಹಂತ 2: ‘ವಾಟ್ಸಾಪ್ ಕ್ರಿಸ್‌ಮಸ್ ಸ್ಟಿಕ್ಕರ್ ಅಪ್ಲಿಕೇಶನ್‌ಗಳಿಗಾಗಿ ಹುಡುಕಿ.
ಹಂತ 3: ನಿಮ್ಮ ಆಯ್ಕೆಯ ಅಪ್ಲಿಕೇಶನ್ ಆಯ್ಕೆಮಾಡಿ ಮತ್ತು ನೀವು ಇಷ್ಟಪಡುವದನ್ನು ಡೌನ್‌ಲೋಡ್ ಮಾಡಿ.
ಹಂತ 4: ಡೌನ್‌ಲೋಡ್ ಮಾಡಿದ ನಂತರ, ಅಪ್ಲಿಕೇಶನ್ ತೆರೆಯಿರಿ ಮತ್ತು ಡೌನ್‌ಲೋಡ್ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ನೀವು ಇಷ್ಟಪಡುವ ಕ್ರಿಸ್ಮಸ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಿ.
ಹಂತ 5: ಈಗ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ತೆರೆಯಿರಿ.
ಹಂತ 6: ಸ್ನೇಹಿತರ ಚಾಟ್ ವಿಂಡೋವನ್ನು ತೆರೆಯಿರಿ.
ಹಂತ 7: ಎಮೋಜಿಸ್ ಆಯ್ಕೆಯನ್ನು ಟ್ಯಾಪ್ ಮಾಡಿ ನಂತರ ಸ್ಟಿಕ್ಕರ್ಸ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 8: ಇದರಲ್ಲಿ ಹೊಸ ಕ್ರಿಸ್‌ಮಸ್ ಜೊತೆಗೆ ಅಸ್ತಿತ್ವದಲ್ಲಿರುವ ಎಲ್ಲಾ ಸ್ಟಿಕ್ಕರ್‌ಗಳನ್ನು ಹೊಂದಿರುತ್ತದೆ. ಅವುಗಳನ್ನು ಡೌನ್‌ಲೋಡ್ ಮಾಡಿ ಮತ್ತು ನೀವು ಬಯಸುವ ಜನರಿಗೆ ಕಳುಹಿಸಿರಿ.
Best Mobiles in India
English summary
How to add a Christmas Hat to WhatsApp icon on Your Phone: Follow These Steps.
Story first published: Wednesday, December 15, 2021, 15:59 [IST]