Karnataka news paper

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಂಕಿತಾ ಉದ್ಯಮಿ ವಿಕ್ಕಿ ಜೈನ್


ಮುಂಬೈ: ಬಾಲಿವುಡ್‌ ನಟಿ ಅಂಕಿತಾ ಲೋಖಂಡೆ ಹಾಗೂ ಉದ್ಯಮಿ ವಿಕ್ಕಿ ಜೈನ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಂಗಳವಾರ ವಿಕ್ಕಿ ಜೈನ್‌ ಅವರು ಮುಂಬೈನಲ್ಲಿ ಅದ್ದೂರಿ ಮದುವೆ ಸಮಾರಂಭದಲ್ಲಿ ಅಂಕಿತಾ ಅವರನ್ನು ಮದುವೆಯಾದರು. ಈ ಸಮಾರಂಭದಲ್ಲಿ ಬಾಲಿವುಡ್‌ ಹಾಗೂ ಕಿರುತೆರೆ ಗಣ್ಯರು. ರಾಜಕಾರಣಿಗಳು ಹಾಗೂ ಉದ್ಯಮಿಗಳು ಭಾಗವಹಿಸಿ ವಧು–ವರರಿಗೆ ಶುಭಾಶಯ ಕೋರಿದರು. 

ನಟಿ ಕಂಗನಾ, ಸ್ಥಳೀಯ ರಾಜಕಾರಣಿಗಳು ಹಾಗೂ ವಿಕ್ಕಿ ಅವರ ಗೆಳೆಯರು ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು. ಅರಿಷಿಣ ಶಾಸ್ತ್ರ, ಮೆಹೆಂದಿ, ಮದುವೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.

ಬಂಗಾರದ ಬಣ್ಣದ ಡ್ರೆಸ್‌ನಲ್ಲಿ ಅಂಕಿತಾ ಮಿಂಚಿದರೆ, ವಿಕ್ಕಿ ಕೂಡ ಕುರ್ತಾ ಪೈಜಾಮ್ ಹಾಕಿದ್ದರು. ಮದುವೆ ಸುಂದರವಾದ ಮಂಟಪವನ್ನು ನಿರ್ಮಾಣ ಮಾಡಲಾಗಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಆರತಕ್ಷತೆಯನ್ನು ರದ್ದು ಮಾಡಲಾಗಿದೆ ಎನ್ನಲಾಗಿದೆ. 

ಬಾಲಿವುಡ್‌ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಹಾಗೂ ಅಂಕಿತಾ ಅವರು ’ಪವಿತ್ರ ರಿಷ್ತಾ’ ಧಾರವಾಹಿಯಲ್ಲಿ ನಟಿಸುತ್ತಿದ್ದರು. ನಂತರ ಅವರು ಪರಸ್ಪರ ಪ್ರೀತಿಸುತ್ತಿದ್ದರು. 4 ವರ್ಷಗಳ ಹಿಂದೆ ಅವರಿಂದ ದೂರವಾಗಿದ್ದರು.

ಮೂರು ವರ್ಷಗಳಿಂದ ಅಂಕಿತಾ ಹಾಗೂ ವಿಕ್ಕಿ ಜೈನ್‌ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಬಾಲಿವುಡ್‌ನ ಮನರಂಜನೆ ವಾಹಿನಿಗಳು ವರದಿ ಮಾಡಿವೆ.



Read More…Source link