The New Indian Express
ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾರ್ಡ್ ನಂಬರ್ 4,15,51,128 ಮತ್ತು 149ರಲ್ಲಿ ಕಲ್ಲಿದ್ದಲು, ಕಡಿಮೆ ಸಾಮಾಜಿಕ-ಆರ್ಥಿಕ ಪ್ರದೇಶಗಳಲ್ಲಿ ಮರ, ಪೀಣ್ಯ-ದಾಸರಹಳ್ಳಿ ಕೈಗಾರಿಕಾ ಕ್ಲಸ್ಟರ್‌ಗಳಲ್ಲಿನ ಇಂಧನ ಸುಡುವುದು ಮತ್ತು ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಬೆಂಗಳೂರಿನಲ್ಲಿ ಶೇಕಡಾ 2-7 ರಷ್ಟು ವಾಯುಮಾಲಿನ್ಯಕ್ಕೆ ಕೊಡುಗೆ ನೀಡುತ್ತದೆ ಎಂದು ವರದಿ ಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬಿಡುಗಡೆ ಮಾಡಿದ ವರದಿ ಪ್ರಕಾರ, ವಾಹನಗಳಿಂದ ಅತಿ ಹೆಚ್ಚು ಶೇಕಡಾ 40-51 ರಷ್ಟು ವಾಯು ಮಾಲಿನ್ಯವಾಗುತ್ತಿದೆ. ರಸ್ತೆಯಲ್ಲಿನ ದೂಳಿಯಿಂದ ಶೇಕಡಾ 17-51 ರಷ್ಟು ಹಾಗೂ ನಿರ್ಮಾಣ ಕ್ಷೇತ್ರದಿಂದ ಶೇ. 6-11 , ಡೀಸೆಲ್, ಜನರೇಟರ್ ಗಳ ಕೊಡುಗೆಯಿಂದ ಶೇ. 9 ರಷ್ಟು ವಾಯು ಮಾಲಿನ್ಯವಾಗುತ್ತಿದೆ.
ವರದಿ ಪ್ರಕಾರ ಬೆಳ್ಳಂದೂರು ವಾರ್ಡ್ ನಲ್ಲಿ ಸುಮಾರು 6 ಸಾವಿರ ಬಹು ಅಂತಸ್ತಿನ ಕಟ್ಟಡಗಳು ಹಾಗೂ ಐಟಿ ಪಾರ್ಕ್ ಗಳಿಂದ ಶೇ. 11 ರಷ್ಟು ವಾಯುಮಾಲಿನ್ಯವಾಗುತ್ತಿದೆ. ಐಟಿ ಪಾರ್ಕ್ ಗಳು, ಕೈಗಾರಿಕೆಗಳು ಮತ್ತು ಕಮರ್ಷಿಯಲ್ ಸ್ಥಳಗಳಿಂದಲೂ ಹೆಚ್ಚಿನ ರೀತಿಯ ವಾಯು ಮಾಲಿನ್ಯವಾಗುತ್ತಿದೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾರ್ಷಿಕ ವರದಿ ಮತ್ತು ಪರಿಸರ ರಿಪೋರ್ಟ್ ಕಾರ್ಡ್ ನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.
ನಗರದಲ್ಲಿ ಇದೇ ಮೊದಲ ಬಾರಿಗೆ ಮೂಲ ಹಂಚಿಕೆ ಅಧ್ಯಯನ ಮಾಡಲಾಗಿದೆ. ಸಮಸ್ಯೆಗಳು ಇದೀಗ ಗೊತ್ತಾಗಿದ್ದು, ಸರ್ಕಾರದ ಎಲ್ಲಾ ಇಲಾಖೆಗಳ ನೆರವಿನೊಂದಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೆಎಸ್ ಪಿಸಿಬಿ ಅಧ್ಯಕ್ಷ ಶಾಂತಾ ಎ ತಿಮ್ಮಯ್ಯ ಹೇಳಿದರು. ರಾಷ್ಟ್ರೀಯ ಶುದ್ದ ಗಾಳಿ ಕಾರ್ಯಕ್ರಮದಡಿ 2024ರೊಳಗೆ ವಾಯು ಮಾಲಿನ್ಯವನ್ನು ಶೇ. 25 ರಷ್ಟು ಕಡಿಮೆಗೊಳಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಸಿ- ಸ್ಟೆಪ್ ನಿಂದ ಈ ಅಧ್ಯನ ಮಾಡಲಾಗಿದೆ. ಹುಬ್ಬಳ್ಳಿ- ಧಾರವಾಡ, ಕಲಬುರಗಿ ಮತ್ತು ದಾವಣಗೆರೆಯಲ್ಲಿ ಇದೇ ರೀತಿಯ ಅಧ್ಯಯನ ಮಾಡಲು ಐಐಟಿ-ಚೆನ್ನೈನೊಂದಿಗೆ ಕೆಎಸ್ ಪಿಸಿಬಿ ಒಪ್ಪಂದ ಮಾಡಿಕೊಂಡಿದೆ. ಪರಿಸರವನ್ನು ಸಂರಕ್ಷಿಸಬೇಕಾದ ತುರ್ತು ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Read more
[wpas_products keywords=”deal of the day”]