Karnataka news paper

ಚಿತ್ರಗಳು: ಅರಿಶಿನದಲ್ಲಿ ಮಿಂದೆದ್ದ ನವ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್


ಹೈಲೈಟ್ಸ್‌:

  • ವೈವಾಹಿಕ ಬದುಕಿಗೆ ನಾಂದಿ ಹಾಡಿದ ವಿಕ್ಕಿ ಕೌಶಲ್ – ಕತ್ರಿನಾ ಕೈಫ್
  • ಅರಿಶಿನ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡ ವಿಕ್ಕಿ ಕೌಶಲ್ – ಕತ್ರಿನಾ ಕೈಫ್
  • ವಿಕ್ಕಿ-ಕ್ಯಾಟ್ ಮದುವೆಯ ಹಳದಿ ಶಾಸ್ತ್ರದ ಫೋಟೋಗಳು ಇಲ್ಲಿವೆ ನೋಡಿ

ತಮ್ಮ ಲವ್ ಸ್ಟೋರಿ ಬಗ್ಗೆ ಎಂದೂ ತುಟಿ ಎರಡು ಮಾಡಿರದ ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಹಾಗೂ ನಟ ವಿಕ್ಕಿ ಕೌಶಲ್ (Vicky Kaushal) ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆ ಬಗ್ಗೆ ಮೌನ ವಹಿಸಿದ್ದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹ ರಾಜಸ್ಥಾನದಲ್ಲಿ (Rajasthan) ರಾಯಲ್ ಆಗಿ ನೆರವೇರಿದೆ. ಡಿಸೆಂಬರ್ 9 ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಕಲ್ಯಾಣ ಅದ್ಧೂರಿಯಾಗಿ, ಅಷ್ಟೇ ಸಾಂಪ್ರದಾಯಿಕವಾಗಿ ಜರುಗಿದೆ.

ಡಿಸೆಂಬರ್ 9 ರಂದು ತಮ್ಮ ಮದುವೆಯ ಶಾಸ್ತ್ರಗಳು ಪೂರ್ಣಗೊಂಡ ನಂತರ ವಿವಾಹದ ಫೋಟೋಗಳನ್ನು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮಗೆ ಆಶೀರ್ವಾದ ಮಾಡುವಂತೆ ನವ ದಂಪತಿಗಳಾದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಕೋರಿಕೊಂಡಿದ್ದರು. ನವ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದವು.

Vicky Kaushal-Katrina Kaif Wedding: ಮದುವೆಯ ಫೋಟೋಗಳನ್ನು ಹಂಚಿಕೊಂಡ ಕತ್ರಿನಾ, ವಿಕ್ಕಿ
ಇದೀಗ ತಮ್ಮ ಅರಿಶಿನ ಶಾಸ್ತ್ರದ (Haldi Ceremony) ಫೋಟೋಗಳನ್ನು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಹಳದಿ ಶಾಸ್ತ್ರದ ಫೋಟೋಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನೆಲೆಸಿರುವ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಲಿದ್ದಾರೆ ವಿಕ್ಕಿ-ಕತ್ರಿನಾ!
ಅರಿಶಿನ ಶಾಸ್ತ್ರಕ್ಕೆ ವರ ವಿಕ್ಕಿ ಕೌಶಲ್ ಬಿಳಿ ಬಣ್ಣದ ಕುರ್ತಾ ಧರಿಸಿದ್ದರೆ, ವಧು ಕತ್ರಿನಾ ಕೈಫ್ ಬಿಳಿ ಬಣ್ಣದ ಲೆಹಂಗಾ ತೊಟ್ಟಿದ್ದರು. ಅರಿಶಿನದ ನೀರಿನಲ್ಲಿ ಮಿಂದೆದ್ದ ನವ ಜೋಡಿಯ ಸಂಭ್ರಮದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರಿನ್ಸೆಸ್ ಡಯಾನಾರ ಉಂಗುರದಿಂದ ಸ್ಫೂರ್ತಿ ಪಡೆದ ಕತ್ರಿನಾರ ನಿಶ್ಚಿತಾರ್ಥದ ರಿಂಗ್‌ನ ಬೆಲೆ ಇಷ್ಟೊಂದಾ.!
ದುಬಾರಿ ಮೌಲ್ಯದ ಲೆಹಂಗಾ, ಉಂಗುರ ತೊಟ್ಟಿದ್ದ ಕತ್ರಿನಾ ಕೈಫ್
ಹೆರಿಟೇಜ್ ಹೋಟೆಲ್ ಆಗಿ ಬದಲಾಗಿರುವ ರಾಜಸ್ಥಾನದ ಐತಿಹಾಸಿಕ ಬಾರ್ವಾರ ಕೋಟೆಯಲ್ಲಿ ಮದುವೆಯಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್.. ಮದುವೆಯ ಉಡುಪಿನಲ್ಲಿ ಥೇಟ್ ರಾಜ ರಾಣಿಯಂತೆಯೇ ಕಾಣುತ್ತಿದ್ದರು. ಪಂಜಾಬಿ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆದಿದ್ದು, ಮದುವೆಗೆ ಕೆಂಪು ಬಣ್ಣದ ಸಬ್ಯಸಾಚಿ ಡಿಸೈನರ್ ಲೆಹೆಂಗಾವನ್ನು ಕತ್ರಿನಾ ಕೈಫ್ ಧರಿಸಿದ್ದರು. ಇನ್ನೂ, ವರ ವಿಕ್ಕಿ ಕೌಶಲ್ ಐವೆರಿ ಹಾಗೂ ಗೋಲ್ಡ್ ಬಣ್ಣದ ಶೇರ್ವಾನಿ ತೊಟ್ಟಿದ್ದರು. ವರದಿಗಳ ಪ್ರಕಾರ, ಮದುವೆಗೆ ವಧು ಕತ್ರಿನಾ ಕೈಫ್ ತೊಟ್ಟಿದ್ದ ಕೆಂಪು ಬಣ್ಣದ ಸಬ್ಯಸಾಚಿ ಲೆಹೆಂಗಾದ ಬೆಲೆ ಬರೋಬ್ಬರಿ 17 ಲಕ್ಷ ರೂಪಾಯಿ.

ರಾಜಸ್ಥಾನದಲ್ಲಿ ರಾಯಲ್ ವೆಡ್ಡಿಂಗ್: ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಮದುವೆಯ ಸೂಪರ್ ಸ್ಪೆಷಾಲಿಟಿಗಳು
ಇನ್ನೂ, ಮದುವೆಗೆ ವಧು ಕತ್ರಿನಾ ಕೈಫ್ ವಜ್ರಖಚಿತ ನೀಲಮಣಿಯ ಉಂಗುರವನ್ನು ಧರಿಸಿದ್ದರು. ಅದೇ ಕತ್ರಿನಾ ಕೈಫ್ ಅವರ ಎಂಗೇಜ್‌ಮೆಂಟ್ ರಿಂಗ್ ಎನ್ನಲಾಗಿದೆ. ನೀಲಮಣಿ (ಸಫೈರ್) ಮತ್ತು ವಜ್ರಗಳನ್ನು ಒಳಗೊಂಡಿರುವ ಕತ್ರಿನಾ ಕೈಫ್ ತೊಟ್ಟಿದ್ದ ಆ ಉಂಗುರ ಪ್ರಿನ್ಸೆಸ್ ಡಯಾನಾ ಅವರ ಐಕಾನಿಕ್ ನೀಲಮಣಿ ಉಂಗುರದಿಂದ ಪ್ರೇರಿತವಾಗಿದೆ. ಇದರ ಬೆಲೆ ಬರೋಬ್ಬರಿ 7.41 ಲಕ್ಷ ರೂಪಾಯಿ ಎಂದು ವರದಿಯಾಗಿದೆ.



Read more

Leave a Reply

Your email address will not be published. Required fields are marked *