ಸುಳ್ಯ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘಕ್ಕೆ ಡಿ.12 ರಂದು ನಡೆದ ಚುನಾವಣೆಯಲ್ಲಿ ದ.ಕ.ಮತ ಕ್ಷೇತ್ರದ ಚುನಾವಣೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಗೆಲುವು ಸಾಧಿಸಿದ್ದಾರೆ.
ಡಾ.ರೇಣುಕಾ ಪ್ರಸಾದ್ ಅವರಿಗೆ 3295 ಮತ, ಡಾ.ಕೆ.ವಿ.ಚಿದಾನಂದ ಅವರಿಗೆ 1741 ಮತ ಹಾಗೂ ಹೇಮಾನಂದ ಹಲ್ದಡ್ಕ 346 ಮತ ಪಡೆದಿದ್ದಾರೆ. 30 ಮತಗಳು ಅಸಿಂಧುವಾಗಿದೆ.
ಡಾ.ರೇಣುಕಾ ಪ್ರಸಾದ್ ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದು ಭರ್ಜರಿ ಗೆಲುವಿನೊಂದಿಗೆ ಒಕ್ಕಲಿಗರ ಸಂಘದ ನಿರ್ದೇಶಕನಾಗಿ ಆಯ್ಕೆಯಾಗಿದ್ದಾರೆ.