Karnataka news paper

ವಾಲಿಮೈ ಶೂಟಿಂಗ್ ಸಂದರ್ಭ ಬೈಕ್‌ನಿಂದ ಬಿದ್ದ ನಟ ಅಜಿತ್: ವಿಡಿಯೊ ಬಿಡುಗಡೆ


ಬೆಂಗಳೂರು: ನಟ ಅಜಿತ್ ಕುಮಾರ್ ಅಭಿನಯದ ವಾಲಿಮೈ ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ವಾಲಿಮೈ ಚಿತ್ರದ ಶೂಟಿಂಗ್ ಸಂದರ್ಭದ ವಿಡಿಯೊ ಮತ್ತು ಅಜಿತ್ ಕುಮಾರ್ ಅವರ ಬೈಕ್ ಸ್ಟಂಟ್ ರೋಚಕ ದೃಶ್ಯ ಹಾಗೂ ಚಿತ್ರೀಕರಣದ ಅವಧಿಯಲ್ಲಿ ಬೈಕ್ ಸ್ಕಿಡ್ ಆಗಿ ಕೆಳಕ್ಕೆ ಬಿದ್ದ ಅಜಿತ್.. ಹೀಗೆ ಹಲವು ದೃಶ್ಯಗಳು ಮೇಕಿಂಗ್ ವಿಡಿಯೊದಲ್ಲಿವೆ.

ಬೈಕ್‌ನಲ್ಲಿ ಸಾಹಸ ದೃಶ್ಯ ಚಿತ್ರೀಕರಿಸುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಅಜಿತ್, ರಸ್ತೆ ಮೇಲೆ ಬಿದ್ದಿದ್ದರು. ಈ ದೃಶ್ಯಗಳ ಸಹಿತ ವಿವಿಧ ಸನ್ನಿವೇಶಗಳನ್ನು ಒಟ್ಟುಗೂಡಿಸಿ ಸಿನಿಮಾದ ಮೇಕಿಂಗ್ ವಿಡಿಯೊವನ್ನು ಸೋನಿ ಪಿಕ್ಚರ್ಸ್ ಬಿಡುಗಡೆ ಮಾಡಿದೆ.

ವಾಲಿಮೈ ಚಿತ್ರದಲ್ಲಿ ಹುಮಾ ಖುರೇಷಿ, ಕಾರ್ತಿಕೇಯ, ಬನಿ, ಸುಮಿತ್ರಾ ಮತ್ತು ಯೋಗಿ ಬಾಬು ಸಹಿತ ಹಲವು ನಟ–ನಟಿಯರು ಕಾಣಿಸಿಕೊಂಡಿದ್ದಾರೆ.

ಝೀ ಸ್ಟುಡಿಯೋಸ್ ಮತ್ತು ಬೋನಿ ಕಪೂರ್ ಅವರು ಚಿತ್ರದ ನಿರ್ಮಾಪಕರಾಗಿದ್ದಾರೆ.





Read More…Source link