ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನದ ಹೆಸರು ರಾತ್ರೋರಾತ್ರಿ ಬದಲು: ಸಿದ್ದು ವಿರುದ್ಧ ಸಿ. ಎಂ. ಇಬ್ರಾಹಿಂ ಆಕ್ರೋಶ
”ರಾಹುಲ್ ಗಾಂಧಿ ಅವರಿಗೆ ರಾಜಕೀಯ ಬುದ್ಧಿಶಕ್ತಿ ಇಲ್ಲ. ಈ ಹಿಂದೆ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗುವ ಮೊದಲು ಅವರು ಯಾರು ಎಂಬುದೇ ರಾಹುಲ್‌ಗಾಂಧಿಗೆ ಗೊತ್ತಿರಲಿಲ್ಲ. ಅವರ ಬಗ್ಗೆ ನನ್ನ ಹತ್ತಿರ ಕೇಳಿದ್ದರು. ಅವರಿಗೆ ತಂದೆ ರಾಜೀವ್‌ಗಾಂಧಿಯವರಷ್ಟು ಚಾಣಾಕ್ಷತೆಯಿಲ್ಲ. ಯಾವ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿಲ್ಲ” ಎಂದು ತಿಳಿಸಿದರು.
”ದೇವೇಗೌಡರ ಬುದ್ಧಿವಂತಿಕೆ ಏನೆಂದರೆ ಅವರು ನೀರಿಗಾಗಿ ಅಣೆಕಟ್ಟು ನಿರ್ಮಿಸಲು ಹೋಗುವುದಿಲ್ಲ. ಬದಲಿಗೆ ಸೋರುವ ನೀರಿಗೆ ಕೊಡ ಹಿಡಿಯುತ್ತಾರೆ. ಆ ನೀರಿನಲ್ಲೇ ಕೊಡ ತುಂಬಿಸಿಕೊಳ್ಳುತ್ತಾರೆ,” ಎಂದು ಹೇಳಿದರು.
ಯಡಿಯೂರಪ್ಪ ಹೊರಬರಲಿ
”ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಸ್ಥಿತಿ ನೀರಿನಲ್ಲಿ ಬಿದ್ದ ಸೋಪ್‌ನಂತಾಗಿದೆ. ಸೋಪು ಬಳಕೆಯಾಗಲ್ಲ, ನೀರೂ ಬಳಕೆಯಾಗಿಲ್ಲ. ಹಾಗಾಗಿ ನಾನು ಧೈರ್ಯ ತೋರಿಸಿ ಪಕ್ಷದಿಂದ ಹೊರ ಬರುವಂತೆ ಅವರಿಗೆ ಸಲಹೆ ನೀಡುತ್ತೇನೆ. ಹೊರ ಬಂದರೆ ಅವರನ್ನು ಬೆಂಬಲಿಸುವ ದೊಡ್ಡ ವರ್ಗವೇ ಇದೆ” ಎಂದು ತಿಳಿಸಿದರು.
ಸಿದ್ದರಾಮಯ್ಯ ಯೋಚಿಸಲಿ
ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಕಾಂಗ್ರೆಸ್‌ನಲ್ಲಿ ನೆಮ್ಮದಿಯಾಗಿಲ್ಲ. ಅವರ ಪಕ್ಕದಲ್ಲಿ ಕೂತಿದ್ದ ಮಾಜಿ ಶಾಸಕ ಅಶೋಕ್ ಪಟ್ಟಣ್‌ಗೆ ನೋಟಿಸ್ ನೀಡಲಾಗಿದೆ. ಸಲೀಂ ಅವರನ್ನು ಅಮಾನತುಪಡಿಸಲಾಗಿದೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಎಲ್ಲಿ ಹೋದರೋ ಗೊತ್ತಾಗುತ್ತಿಲ್ಲ. ಒಂದು ಕಾಲು ಅಲ್ಲಿ ಮತ್ತೊಂದು ಕಾಲು ಇಲ್ಲಿಇಟ್ಟುಕೊಂಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರೂ ಯೋಚಿಸಲಿ” ಎಂದು ಹೇಳಿದರು.
ಸಿದ್ದರಾಮಯ್ಯಗಾಗಿ ಪ್ರಾಣ ಒತ್ತೆ ಇಟ್ಟಿದ್ದೆ, ಆದರೆ ನನಗೆ ಮೋಸ ಮಾಡಿದ್ದಾರೆ: ಸಿಎಂ ಇಬ್ರಾಹಿಂ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಪ್ರಸ್ತಾಪಿಸಿದ ಇಬ್ರಾಹಿಂ, ”ಏನದು ಬಾಡಿ ಲಾಂಗ್ವೆಜ್? ಸಲೀಂ ಅವರನ್ನು ಕಳಿಸಿಯೇ ಬಿಟ್ಟರು. ನಲಪಾಡ್ ಅವರನ್ನು ಹೇಗೆ ನಡೆಸಿಕೊಂಡರು? ಅವರಿಗೆ ಚುಪ್ ಅಂದರೆ ಗಪ್‌ಚುಪ್ ಆಗಿರಬೇಕು. ಆರೆ ಅಂದರೆ ಬರಬೇಕು. ನಾನು ಆರೆ ಎಂದರೆ ಕ್ಯಾರೆ ಎನ್ನುತ್ತೇನೆ. ಹಾಗಾಗಿ ನಾನು ಅವರಿಗೆ ಬೇಡವಾಗಿದ್ದೇನೆ” ಎಂದು ಸಿಎಂ ಇಬ್ರಾಹಿಂ ಕಿಡಿಕಾರಿದರು.
Read more
[wpas_products keywords=”deal of the day sale today offer all”]