ದೇಶಕ್ಕೆ ಒಬ್ಬನೇ ರಾಷ್ಟ್ರಪತಿ, ಒಂದು ಸಮುದಾಯಕ್ಕೆ ಒಬ್ಬನೇ ಗುರು ಎಂದು ಕೂಡಲ ಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳುವ ಮೂಲಕ ಪಂಚಮಸಾಲಿಗೆ 3ನೇ ಪೀಠ ಅಗತ್ಯವಿಲ್ಲ ಎಂದು ಮತ್ತೊಮ್ಮೆ ಪ್ರತಿಪಾದಿಸಿದರು.
‘‘ಕಷ್ಟ ಪಟ್ಟು 14 ವರ್ಷದಿಂದ ಸಮುದಾಯವನ್ನು ಒಗ್ಗೂಡಿಸಿದ್ದೇನೆ. ಕೂಡಲಸಂಗಮ ಶ್ರೀಗಳ ಪ್ರಭಾವ ಹೆಚ್ಚಾಗುತ್ತದೆ ಹಾಗೂ ಮೀಸಲಾತಿಯ ಸಂಪೂರ್ಣ ಲಾಭ ಸಚಿವ ಸಿ.ಸಿ. ಪಾಟೀಲ್, ಶಾಸಕರಾದ ಯತ್ನಾಳ್, ಬೆಲ್ಲದ್ ಅವರಿಗೆ ಸಿಗುತ್ತದೆ ಎಂಬ ಹೊಟ್ಟೆಕಿಚ್ಚಿನಿಂದ ಈ ರೀತಿಯ ಹುನ್ನಾರ ನಡೆಯುತ್ತಿದೆ. ಸದ್ಯದಲ್ಲೇ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ’’ ಎಂದರು.
‘‘ಪಂಚಮಸಾಲಿ ಪೀಠವೇ ನಮ್ಮ ಪೀಠ. ಅವರು ಬೇಕಾದರೆ ಮನೆಗೊಂದು, ಊರಿಗೊಂದು ಮಾಡಿಕೊಳ್ಳಲಿ. ನಮಗೆ 2ಎ ಮೀಸಲಾತಿ ಕೊಡಿಸುವುದಷ್ಟೇ ನಮ್ಮ ಗುರಿ. ಈ ಹೋರಾಟವನ್ನು ತಡೆಯಲು ಮಾನಸಿಕವಾಗಿ ತೊಂದರೆ ನೀಡಲಾಗುತ್ತಿದೆ. ತಲೆ ಕೆಳಗೆ ಮಾಡಿದರೂ ಈ ಹೋರಾಟ ನಿಲ್ಲಲ್ಲ’’ ಎಂದು ಹೇಳಿದರು.
ಹಿಂದೂ ಸಂಸ್ಕೃತಿ ಹಾಳಾಗಬಾರದು, ಎಲೆಕ್ಷನ್ ಟೈಂಗೆ ಸಿದ್ದರಹೀಮ್ಅಯ್ಯ ಆಗಿ ಬರ್ತಾರೆ: ಪ್ರತಾಪ್ ಸಿಂಹ ವ್ಯಂಗ್ಯ
ಸಮುದಾಯಕ್ಕೆ ಒಬ್ಬನೇ ಗುರು. 14 ವರ್ಷದಿಂದ ಕಷ್ಟಪಟ್ಟು ಮಳೆ, ಗಾಳಿ ಎನ್ನದೇ ಸಮುದಾಯವನ್ನು ಒಂದುಗೂಡಿಸಿದ್ದೇನೆ. ಕೂಡಲ ಸಂಗಮ ಶ್ರೀಗಳ ಪ್ರಭಾವ ಹೆಚ್ಚಾಗುವ ಹೊಟ್ಟೆ ಕಿಚ್ಚಿನಿಂದ ಈ ರೀತಿ ಹುನ್ನಾರ ನಡೆಯುತ್ತಿದೆ. ಮೀಸಲಾತಿಯ ಬಗ್ಗೆ ನಮ್ಮ ಹೋರಾಟಕ್ಕೆ ಸದ್ಯಕ್ಕೆ ಜಯ ಸಿಗಲಿದೆ ಎಂದರು.
ಮೀಸಲಾತಿಯ ಸಂಪೂರ್ಣ ಲಾಭ ಯತ್ನಾಳ್, ಸಿ ಸಿ ಪಾಟೀಲ್ ಹಾಗೂ ಬೆಲ್ಲದ್ ಅವರಿಗೆ ಸಿಕ್ಕುತ್ತದೆ ಎಂಬ ಹೊಟ್ಟೆ ಕಿಚ್ಚಿನಿಂದ ಈ ರೀತಿ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಲು ಯಾರಿಂದಲು ಸಾಧ್ಯವಿಲ್ಲ.ಪಂಚಮಸಾಲಿ ಪೀಠವೇ ನಮ್ಮ ಪೀಠ, ಯಾರು ಬೇಕಾದರೂ ಮನೆಗೊಂದು, ಊರಿಗೊಂದು ಪೀಠ ಮಾಡಿಕೊಳ್ಳಲಿ. ಪಂಚಮಸಾಲಿಗೆ 2ಎ ಮೀಸಲಾತಿ ಕೊಡಿಸುವುದಷ್ಟೇ ನಮ್ಮ ಗುರಿ.. ನಮ್ಮ ಹೋರಾಟವನ್ನ ಯಾರು ತಲೆಕೆಳಗೆ ಮಾಡಿದರೂ ನಿಲ್ಲಿಸಲು ಸಾದ್ಯವಿಲ್ಲ ಎಂದು ತಿಳಿಸಿದರು.
ಯಾರನ್ನು ಕರೆಯುವುದಿಲ್ಲ, ಅವರು ಬೇಕಾದರೆ ಬಂದು ಮಾತನಾಡಲಿ. ಧರ್ಮ ಗುರುಗಳು ಯಾರನ್ನು ಕರೆದು ಮಾತನಾಡುವುದಿಲ್ಲ. ಗುರುಗಳನ್ನು ಭೇಟಿ ಮಾಡಲು ಎಲ್ಲರಿಗೂ ಅವಕಾಶವಿರುತ್ತದೆ. ನಮ್ಮಿಬ್ಬರ ಸಂಬಂಧ ಗುರು-ಶಿಷ್ಯರ ಸಂಬಂಧ. ಗುರುವನ್ನು ಭೇಟಿ ಮಾಡಲು ಮಠಕ್ಕೆ ಬರಬಹುದು ಎಂದು ಹೇಳಿದರು.
ಕಾಣಿಕೆ ಕೊಟ್ಟವರು ಶಾಶ್ವತವಲ್ಲ, ಮಠ ಮಾತ್ರ ಶಾಶ್ವತ : ಸಚಿವ ಮುರುಗೇಶ್ ನಿರಾಣಿ
ನಿರಾಣಿಗೆ ಕೌಂಟರ್..!
ನಿರಾಣಿ ಅವರು ಕೊಟ್ಟ ವಸ್ತುಗಳನ್ನ ವಾಪಸ್ ನೀಡುವ ವಿಚಾರದಲ್ಲಿ ನಾನು ಈಗಲೂ ಆ ಹೇಳಿಕೆಗೆ ಬದ್ದ. ನಾವು ಸ್ವಾಭಿಮಾನಕ್ಕೆ ಬದುಕಿದ್ದೇವೆ. ಅದಕ್ಕೆ ಧಕ್ಕೆಯಾಗಿದೆ, ಧಕ್ಕೆಯಾದರೆ ನಾವು ಏನು ಮಾಡುವುದು ಎಂದು ಸಚಿವ ಮುರುಗೇಶ್ ನಿರಾಣಿಗೆ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತೊಮ್ಮೆ ತಿರುಗೇಟು ನೀಡಿದರು.
Read more
[wpas_products keywords=”deal of the day sale today offer all”]