Karnataka news paper

ವೈರಲ್ ಇನ್ಫೆಕ್ಷನ್: ತಮಿಳು ನಟ ಸಿಂಬು ಆಸ್ಪತ್ರೆಗೆ ದಾಖಲು


ಹೈಲೈಟ್ಸ್‌:

  • ತಮಿಳು ನಟ ಸಿಂಬು ಆಸ್ಪತ್ರೆಗೆ ದಾಖಲು
  • ವೈರಲ್ ಇನ್ಫೆಕ್ಷನ್‌ನಿಂದ ಬಳಲುತ್ತಿರುವ ಸಿಂಬು
  • ಖಾಸಗಿ ಆಸ್ಪತ್ರೆಯಲ್ಲಿ ಸಿಂಬು ಚಿಕಿತ್ಸೆ ಪಡೆಯುತ್ತಿದ್ದಾರೆ

ಕಾಲಿವುಡ್‌ನ ಖ್ಯಾತ ನಟ ಸಿಂಬು ಅಲಿಯಾಸ್ ಸಿಲಂಬರಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಡಿಸೆಂಬರ್ 11) ಚೆನ್ನೈನ ಖಾಸಗಿ ಆಸ್ಪತ್ರೆಗೆ ನಟ ಸಿಂಬು ಅಡ್ಮಿಟ್ ಆಗಿದ್ದಾರೆ. ತೀವ್ರ ವೈರಲ್ ಇನ್ಫೆಕ್ಷನ್‌ನಿಂದ ಬಳಲುತ್ತಿರುವುದರಿಂದ ಚಿಕಿತ್ಸೆಗಾಗಿ ಸಿಂಬು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ. ನಟ ಸಿಂಬು ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ ಎನ್ನಲಾಗಿದೆ.

ಕಳೆದ ಕೆಲವು ದಿನಗಳಿಂದ ನಟ ಸಿಂಬು ತಮ್ಮ ಹೊಸ ಚಿತ್ರವೊಂದರ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದರು. ಸಿಂಬು ಹಾಗೂ ಗೌತಮ್ ಮೆನನ್ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರ ಮೂಡಿಬರುತ್ತಿದೆ. ಆ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದು ಔಟ್ ಅಂಡ್ ಔಟ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶೂಟಿಂಗ್ ಬಿರುಸಿನಿಂದ ಸಾಗುತ್ತಿತ್ತು. ಹೀಗಿರುವಾಗಲೇ, ನಟ ಸಿಂಬು ಅನಾರೋಗ್ಯಕ್ಕೀಡಾಗಿದ್ದಾರೆ.

ಇಂದು ಬೆಳಗ್ಗೆ (ಡಿಸೆಂಬರ್ 11) ತೀವ್ರ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ನಟ ಸಿಂಬು ಆಸ್ಪತ್ರೆಗೆ ಭೇಟಿ ನೀಡಿದರು. ವೈರಲ್ ಇನ್ಫೆಕ್ಷನ್ ಇರುವುದಿರಂದ ಮುಂಜಾಗ್ರತಾ ಕ್ರಮವಾಗಿ ಸಿಂಬು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಸಿಂಬು ಆದಷ್ಟು ಬೇಗ ಹುಷಾರಾಗಲಿ ಅಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ.



Read more

Leave a Reply

Your email address will not be published. Required fields are marked *