ಭಾನುವಾರ ಲುಧಿಯಾನಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆ ಇದೆ. ಪಕ್ಷದ ಮುಖಂಡರು ಹಾಗೂ ಜನರಿಂದ ಶಕ್ತಿ ಆ್ಯಪ್ ಮೂಲಕ ಹೈಕಮಾಂಡ್ ಅಭಿಪ್ರಾಯ ಸಂಗ್ರಹಿಸಿದ್ದು, ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಪರ ಅಭಿಪ್ರಾಯ ವ್ಯಕ್ತವಾಗಿದೆ. ಇದರ ಮಾಹಿತಿ ಸಿಧು, ”ಪಕ್ಷದ ವರಿಷ್ಠರಿಗೆ ತಮ್ಮ ತಾಳಕ್ಕೆ ಕುಣಿಯುವ ದುರ್ಬಲ ಮುಖ್ಯಮಂತ್ರಿ ಬೇಕಾಗಿದ್ದಾರೆ” ಎಂದು ಕಿಡಿಕಾರಿದ್ದರು.
ಹೈಕಮಾಂಡ್‌ಗೆ ತಾಳಕ್ಕೆ ತಕ್ಕಂತೆ ಕುಣಿಯುವ ಸಿಎಂ ಬೇಕು ಎಂದ ಸಿಧು: ಪಂಜಾಬ್‌ನಲ್ಲಿ ಬಂಡಾಯ ಖಚಿತ?
ಮರುದಿನವೇ ವರಸೆ ಬದಲಿಸಿ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸಿಧು ಮತ್ತು ಚನ್ನಿ ಇಬ್ಬರೂ ತಾವೇ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
”ನಾನು ರಾಜ್ಯದ ಪರಿವರ್ತನೆಗಾಗಿ ರಾಜಕೀಯ ಪ್ರವೇಶಿಸಿದ್ದೇನೆಯೇ ಹೊರತು ಅಧಿಕಾರದ ಹಂಬಲದಿಂದ ಅಲ್ಲ. ಹೀಗಾಗಿ ಪಕ್ಷ ಯಾರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೂ ಒಪ್ಪಿಕೊಳ್ಳುತ್ತೇನೆ” ಎಂದು ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ.
60 ಶಾಸಕರ ನಿರ್ಧಾರ
ಮತ್ತೊಂದೆಡೆ, ಶನಿವಾರ ಚಂಡೀಗಢದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಧು, ”ಕಾಂಗ್ರೆಸ್ ಅಥವಾ ಯಾವುದೇ ಪಕ್ಷ ಇರಲಿ. ಆ ಪಕ್ಷದ 60 ಶಾಸಕರು ಗೆದ್ದ ಬಳಿಕವೇ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ” ಎಂದು ಹೇಳಿದ್ದಾರೆ.
”ಜನರ ವಿಶ್ವಾಸ ಗಳಿಸಿರುವ ಹಾಗೂ ಪಂಜಾಬ್ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಹೊಂದಿರುವ ವ್ಯಕ್ತಿಯನ್ನು ಆ 60 ಶಾಸಕರು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ. ಸದ್ಯ ನಾವು ಸರಳ ಬಹುಮತದ ಕುರಿತು ಯೋಚಿಸಬೇಕೇ ಹೊರತು ಮುಖ್ಯಮಂತ್ರಿ ಅಭ್ಯರ್ಥಿ ಕುರಿತಾಗಿ ಅಲ್ಲ” ಎಂದು ಹೇಳಿದ್ದಾರೆ.
ಅವರು ಹೆಸರಿಗಷ್ಟೇ ಸಮಾಜವಾದಿಗಳು, ಆದರೆ 100% ಪರಿವಾರವಾದಿಗಳು : ಪ್ರಧಾನಿ ಮೋದಿ ಟೀಕೆ
ಆಮ್ ಆದ್ಮಿ ಪಾರ್ಟಿಯು ಸಂಸದ ಭಗವಂತ್ ಮಾನ್ ಅವರನ್ನು, ಶಿರೋಮಣಿ ಅಕಾಲಿದಳವು ಸುಖಬೀರ್ ಸಿಂಗ್ ಬಾದಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿವೆ. ಬಿಜೆಪಿ, ಕ್ಯಾ. ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ ಹಾಗೂ ಶಿರೋಮಣಿ ಅಕಾಲಿದಳ (ಸಂಯುಕ್ತ) ಮೈತ್ರಿಕೂಟ ಹಾಗೂ ಕಾಂಗ್ರೆಸ್‌ಗಳು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಸರಳ ಬಹುಮತದ ಸಂಖ್ಯೆ 59.

ನವಜೋತ್ ಸಿಂಗ್ ಸಿಧು
Read more
[wpas_products keywords=”deal of the day sale today offer all”]