ಜಸ್ಟಿನ್ ಲ್ಯಾಂಗರ್ ಅವರ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ತಂಡ 2021ರ ಐಸಿಸಿ ಟಿ20 ವಿಶ್ವಕಪ್ ಹಾಗೂ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ 4-0 ಅಂತರದಲ್ಲಿ ಆಷಸ್ ಟೆಸ್ಟ್ ಸರಣಿಯಲ್ಲಿ ಗೆಲುವು ಪಡೆದುಕೊಂಡಿತ್ತು. ಆದರೆ ಕಳೆದ ಕೆಲ ತಿಂಗಳುಗಳ ಹಿಂದೆ ಲ್ಯಾಂಗರ್ ಅವರ ಕೋಚಿಂಗ್ ಶೈಲಿ ಇಲ್ಲವೆಂದು ಕೆಲ ಆಟಗಾರರ ದೂರು ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಇದೀಗ ಆಸೀಸ್ ಮಾಜಿ ಆಟಗಾರ ತಮ್ಮ ಹುದ್ದೆಯನ್ನು ತೊರೆದಿದ್ದಾರೆ.
ಜಸ್ಟಿನ್ ಲ್ಯಾಂಗರ್ ಅವರ ಮಾಜಿ ಸಹ ಆಟಗಾರ ಮ್ಯಾಥ್ಯೂ ಹೇಡನ್ ಇದೀಗ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ತಂಡದ ಈಗಿನ ಆಟಗಾರರಿಗೆ ಭಾವನಾತ್ಮಕ ಸಂದೇಶ ಕಳುಹಿಸುವ ಮೂಲಕ ಜಸ್ಟಿನ್ ಲ್ಯಾಂಗರ್ ಅವರನ್ನು ಯಾರೂಬ್ಬರೂ ಬೆಂಬಲಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಮುಖ್ಯ ಕೋಚ್ ಹುದ್ದೆಗೆ ಹಠಾತ್ ರಾಜೀನಾಮೆ ಕೊಟ್ಟ ಲ್ಯಾಂಗರ್!
“ಜಸ್ಟಿನ್ ಲ್ಯಾಂಗರ್ ಅವರನ್ನು ಯಾರೊಬ್ಬರು ಬೆಂಬಲಿಸಲಿಲ್ಲವೆಂದು ಇದೀಗ ಸ್ಪಷ್ಟವಾಗಿದೆ,” ಎಂದು ಎಬಿಸಿ ರೇಡಿಯೋದಲ್ಲಿ ಮ್ಯಾಥ್ಯೂ ಹೇಡನ್ ಹೇಳಿರುವುದನ್ನು ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ ವರದಿ ಮಾಡಿದೆ.
“ಇತರೆ ದಿನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರ ಮಾತನ್ನು ಕೇಳಿದ್ದೀರಾ? ಜಸ್ಟಿನ್ ಲ್ಯಾಂಗರ್‌ಗೆ ಬೆಂಬಲ ಅಥವಾ ಪ್ರಶಂಸೆಯ ಮಾತಾಗಲಿ ಅವರು ಹೇಳಲೇ ಇಲ್ಲ. ಇದು ನಿಜಕ್ಕೂ ನನಗೆ ತುಂಬಾ ನೋವು ತಂದಿದೆ. ಅವರು ಹೋಗುತ್ತಾರೆಂದು ನೀವು ಹೇಗೆ ಭಾವಿಸುತ್ತೀರಿ,” ಎಂದು ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ವಿರುದ್ಧ ಹೇಡನ್ ಬೇಸರ ವ್ಯಕ್ತಪಡಿಸಿದರು.
ಟೀಮ್ ಇಂಡಿಯಾ ಆಯ್ಕೆ ವಿಚಾರದಲ್ಲಿ ತಲೆ ಹಾಕಿಲ್ಲ: ಗಂಗೂಲಿ!
“ಲ್ಯಾಂಗರ್ ತಂಡ ಬಿಟ್ಟು ಹೋಗಿದ್ದಾರೆ. ಈ ಹಿಂದೆ ಕಮಿನ್ಸ್ ‘ಇದು ಹೆಚ್ಚಿನ ಕಾರ್ಯಕ್ಷಮತೆಯ ವಾತಾವರಣ ಹಾಗೂ ನಾವೆಲ್ಲರೂ ಹೆಚ್ಚಿನ ಕಾರ್ಯಕ್ಷಮತೆಯ ವಿಮರ್ಶೆಯ ಮೂಲಕ ಹೋಗುತ್ತೇವೆ’ ಎಂದು ಹೇಳಿದ್ದ ಮಾತನ್ನು ನೀವೀಗ ಸ್ಮರಿಸಿಕೊಳ್ಳಬಹುದು. ನನ್ನನ್ನು ಕ್ಷಮಿಸಿ ‘ಪ್ಯಾಟ್’ ಆದರೆ ಇದು ಕಸವಾಗಿದೆ … ಇದು ಸಂಘಟಿತವಾಗಿರುವಂತೆ ನನಗೆ ಕಾಣುತ್ತಿಲ್ಲ,” ಎಂದು ಹೇಡನ್ ಹೇಳಿದರು.
ಜಸ್ಟಿನ್ ಲ್ಯಾಂಗರ್ ಹೆಡ್ ಕೋಚ್ ತೊರೆದಿರುವ ಬಗ್ಗೆ ಆಸ್ಟ್ರೇಲಿಯಾ ತಂಡದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಕೂಡ ಬೇಸರ ಹೊರಹಾಕಿದ್ದಾರೆ. “ಕ್ರಿಕೆಟ್ ಒಳಗೆ ಹಾಗೂ ಹೊರಗೆ ಅದ್ಭುತವಾಗಿ ಕಾಣುವ ಒಬ್ಬ ವ್ಯಕ್ತಿಯನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದನ್ನು ನೋಡಲು ನನ್ನ ಮನಸಿಗೆ ತುಂಬಾ ನಿರಾಶೆಯಾಗುತ್ತಿದೆ.”
ಎಎಸ್ ಧೋನಿಯ ಅರ್ಧದಷ್ಟು ಸಾಧನೆ ರಿಝ್ವಾನ್ ಮಾಡಬಹುದೆಂದ ಬಟ್!
“ಈ ಘಟನೆಯಿಂದ ಭವಿಷ್ಯವು ಹೇಗೆ ಕಾಣುತ್ತದೆ ಎಂದು ನೀವು ಆಶ್ಚರ್ಯ ಪಡುವಂತೆ ಮಾಡುತ್ತದೆ ಹಾಗೂ ನೀವು ಆಸ್ಟ್ರೇಲಿಯನ್ ಕ್ರಿಕೆಟ್ ತಂಡಕ್ಕೆ ಏಕೆ ತರಬೇತುದಾರರಾಗಲು ಬಯಸುತ್ತೀರಿ ಎಂದು ಆಶ್ಚರ್ಯಪಡುವಂತೆ ಮಾಡುತ್ತದೆ,” ಎಂದು ಮಿಚೆಲ್ ಜಾನ್ಸನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿ ಬರೆದುಕೊಳ್ಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
Read more
[wpas_products keywords=”deal of the day sale today offer all”]