Karnataka news paper

Karnataka Covid Update: 12,009 ಹೊಸ ಪ್ರಕರಣ, 50 ಸಾವು


ಬೆಂಗಳೂರು: 24 ಗಂಟೆಗಳಲ್ಲಿ ರಾಜ್ಯದಲ್ಲಿ 12,009 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.ಇದೇ ಅವಧಿಯಲ್ಲಿ 50 ಸೋಂಕಿತರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಸದ್ಯ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 1,09,203ರಷ್ಟಿದೆ. ಒಂದೇ ದಿನ 25,854 ಮಂದಿ ಚೇತರಿಸಿಕೊಂಡಿದ್ದಾರೆ.

ಕೋವಿಡ್ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 38,87‌,733ಕ್ಕೆ ಏರಿದ್ದು, ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 39,300ಕ್ಕೆ ಏರಿದೆ.

ರಾಜ್ಯದ ಕೋವಿಡ್ ಪಾಸಿಟಿವಿಟಿ ದರ ಶೇಕಡ 9.04ರಷ್ಟಿದೆ. ಮರಣ ಪ್ರಮಾಣ ಶೇಕಡ 0.41ರಷ್ಟಿದೆ.

ಬೆಂಗಳೂರು ನಗರದಲ್ಲಿ ಇಂದು 4,532 ಪ್ರಕರಣಗಳು ದಾಖಲಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ 1,028 ಪ್ರಕರಣಗಳೂ ದೃಢಪಟ್ಟಿವೆ.



Read more from source

[wpas_products keywords=”deal of the day sale today kitchen”]