ಹೈಲೈಟ್ಸ್:
- ಬಿಗ್ ಬಾಸ್ 13 ಶೋನಲ್ಲಿ ಅರ್ಹಾನ್ ಖಾನ್, ರಶ್ಮಿ ದೇಸಾಯಿ ಭಾಗವಹಿಸಿದ್ದರು
- ಬಿಗ್ ಬಾಸ್‌ಗೆ ಬರುವ ಮುನ್ನವೇ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ರಶ್ಮಿ ದೇಸಾಯಿ, ಅರ್ಹಾನ್ ಖಾನ್
- ತನಗೆ ಮಗು ಇರುವ ವಿಚಾರವನ್ನು ಅರ್ಹಾನ್ ಮುಚ್ಚಿಟ್ಟಿದ್ದಾನೆ ಎಂದು ರಶ್ಮಿ ಆರೋಪ ಮಾಡಿದ್ದಾರೆ
ಮಾಜಿ ಬಾಯ್‌ಫ್ರೆಂಡ್ ಅರ್ಹಾನ್ ಖಾನ್ ನಿಜಾಂಶವನ್ನು ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಮನೆಯಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದು ಸಲ್ಮಾನ್ ಖಾನ್‌ಗೆ ರಶ್ಮಿ ದೇಸಾಯಿ ಅವರು ಧನ್ಯವಾದ ತಿಳಿಸಿದ್ದರು. ಆ ಮಾತು ಅರ್ಹಾನ್‌ಗೆ ಸಿಟ್ಟು ತಂದಿತ್ತು. ಈ ವಿಚಾರವಾಗಿ ಅರ್ಹಾನ್ ವಿವಾದಾತ್ಮಕ ಟ್ವೀಟ್ ಮಾಡಿ ಆಮೇಲೆ ಡಿಲಿಟ್ ಮಾಡಿದ್ದರು.
ಬಿಗ್ ಬಾಸ್ ಮನೆಯೊಳಗೆ ಏನಾಗಿತ್ತು?
ಈ ವಿಚಾರದ ಬಗ್ಗೆ ಅರ್ಹಾನ್ ಖಾನ್ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಅರ್ಹಾನ್ ಖಾನ್ ಹಾಗೂ ರಶ್ಮಿ ದೇಸಾಯಿ ಅವರು ಒಂದೂವರೆ ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಬಿಗ್ ಬಾಸ್ 13 ಶೋನಲ್ಲಿ ರಶ್ಮಿ ದೇಸಾಯಿ ಸ್ಪರ್ಧಿಯಾಗಿ ಆರಂಭದಲ್ಲಿಯೇ ಹೋಗಿದ್ದರು. ಆಮೇಲೆ ಅರ್ಹಾನ್ ಖಾನ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಆಗಿ ದೊಡ್ಮನೆಯೊಳಗಡೆ ಕಾಲಿಟ್ಟಿದ್ದರು. ಆ ವೇಳೆ ಅರ್ಹಾನ್ ಖಾನ್ ಮದುವೆ ಆಗಿ ಪತ್ನಿಯಿಂದ ದೂರ ಇರುವ ವಿಚಾರ ಹೇಳಿದ್ದರೇ ವಿನಃ ತನಗೆ ಮಗು ಇರುವ ವಿಚಾರವನ್ನು ರಶ್ಮಿಯಿಂದ ಮುಚ್ಚಿಟ್ಟಿದ್ದಾರೆ ಎಂದು ಸಲ್ಮಾನ್ ಖಾನ್ ಹೇಳಿದ್ದರು. ಅರ್ಹಾನ್ ಖಾನ್ ಎಷ್ಟೇ ಸಮರ್ಥಿಸಿಕೊಂಡರೂ ಕೂಡ ಸಲ್ಮಾನ್ ಖಾನ್ ಕೇಳಿರಲಿಲ್ಲ. ತದನಂತರದಲ್ಲಿ ರಶ್ಮಿ – ಅರ್ಹಾನ್ ಸರಿಯಾದರೂ ಕೂಡ ಮತ್ತೆ ಅವರಿಬ್ಬರ ಮಧ್ಯೆ ಮನಸ್ತಾಪ ಬಂದು ದೂರವಾದರು.
ಸಲ್ಮಾನ್ ಖಾನ್ ಜೊತೆಗೆ ಮಾಜಿ ಪ್ರೇಯಸಿ ಮಾತುಕತೆ ಕೇಳಿ ಕೆಟ್ಟದಾಗಿ ಕಾಮೆಂಟ್ ಮಾಡಿದ ನಟ!
ಅರ್ಹಾನ್ ಈಗ ಹೇಳುತ್ತಿರುವುದೇನು?
ಅರ್ಹಾನ್ ಖಾನ್ ಜೊತೆ ತಾನು ಇಲ್ಲ ಎಂದು ದೊಡ್ಮನೆಯಿಂದ ಹೊರಬಂದಮೇಲೂ ಕೂಡ ರಶ್ಮಿ ದೇಸಾಯಿ ಹೇಳಿಕೊಂಡಿದ್ದರು. ಅರ್ಹಾನ್‌ರಿಂದ ಮೋಸವಾಗಿದೆ ಎಂದು ರಶ್ಮಿ ಹೇಳಿದ್ದರು. ಈ ಎಲ್ಲ ಆರೋಪಗಳನ್ನು ಕೇಳಿದ ನಂತರದಲ್ಲಿ ಅರ್ಹಾನ್ ಖಾನ್ ಪ್ರತಿಕ್ರಿಯೆ ನೀಡಿದ್ದು, “ಬಿಗ್ ಬಾಸ್ ಮನೆಗೆ ಹೋಗುವ ಕೆಲ ದಿನಗಳ ಮುಂಚೆ ರಶ್ಮಿ ನಾನು ಭೇಟಿ ಆಗಿದ್ದೇವೆ ಅಂತ ಟಿವಿ ಶೋನಲ್ಲಿ ಹೇಳಿದರು. ಬಿಗ್ ಬಾಸ್‌ಗೆ ಹೋಗುವ ಒಂದೂವರೆ ವರ್ಷದಿಂದ ಜೊತೆಗಿದ್ದೆವು. ಆ ಶೋನಲ್ಲಿ ನನಗೆ ಮಗು ಇರೋದು ಗೊತ್ತಿಲ್ಲ ಅಂತ ರಶ್ಮಿ ಸುಳ್ಳು ಹೇಳಿದ್ದಾಳೆ. ಆದರೆ ಅವಳಿಗೆ ಈ ಸತ್ಯ ಗೊತ್ತಿತ್ತು. ಇಷ್ಟೆಲ್ಲ ಸಮಯ ಜೊತೆಗಿದ್ದಾಗ ನನ್ನ ಫೋನ್‌ನ್ನು ಅವಳು ಯಾವಾಗ ಬೇಕಾದರೂ ನೋಡಬಹುದು, ಮಗು ಇರುವ ವಿಷಯ ಮುಚ್ಚಿಡಲು ಆಗಲ್ಲ. ಟಿವಿಯಲ್ಲಿ ರಶ್ಮಿ ಮರ್ಯಾದೆ ಹೋಗಬಾರದು ಅಂತ ನಾನು ಸುಮ್ಮನಿದ್ದೆ” ಎಂದು ಅರ್ಹಾನ್ ಖಾನ್ ಹೇಳಿದ್ದಾರೆ.
ಖ್ಯಾತ ಶೋನಿಂದ ಬಹಿರಂಗವಾಯ್ತು ಧಾರಾವಾಹಿ ನಟಿಯ ಪ್ರಿಯಕರ ಮುಚ್ಚಿಟ್ಟ ಕಹಿ ಸತ್ಯ!
ಬಿಗ್ ಬಾಸ್‌ಗೆ ಹೋಗಿ ತಪ್ಪು ಮಾಡಿದೆ ಎಂದ ನಟ ಅರ್ಹಾನ್ ಖಾನ್
ರಶ್ಮಿ ಬಿಗ್ ಬಾಸ್‌ನಲ್ಲಿ ನಮ್ಮ ಭೇಟಿ ಬಗ್ಗೆ, ನಾನು ಮಗು ಬಗ್ಗೆ ಹೇಳಿಲ್ಲ ಅಂತ ಸುಳ್ಳು ಹೇಳಿದ್ದಾಳೆ. ಇದಕ್ಕೆಲ್ಲ ನನ್ನ ಮನೆಯವರಿಗೂ ನಾನು ಉತ್ತರ ಕೊಡಬೇಕಿದೆ. ಬಿಗ್ ಬಾಸ್‌ನಿಂದ ಹೊರಗಡೆ ಬಂದಮೇಲೆ ರಶ್ಮಿಯನ್ನು ಭೇಟಿ ಮಾಡೋಣ ಅಂತ ಅಂದುಕೊಂಡಾಗ ಆಗಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅವಳು ನಡೆದುಕೊಂಡ ರೀತಿ ಬಗ್ಗೆ ನಾನು ಅವಳಿಗೆ ಪ್ರಶ್ನೆ ಮಾಡುವೆ ಎಂದು ಅವಳು ನನ್ನ ಭೇಟಿ ಮಾಡಲು ಹಿಂಜರಿಯುತ್ತಿದ್ದಾಳೆ. ನಾನು ಬಿಗ್ ಬಾಸ್ ಮನೆಯಲ್ಲಿ ಸುಮ್ಮನೆ ಇದ್ದಿದ್ದಕ್ಕೆ ತುಂಬ ಪಶ್ಚಾತ್ತಾಪ ಪಡುತ್ತಿದ್ದೇನೆ. ಬಿಗ್ ಬಾಸ್‌ಗೆ ಹೋಗಿ ತಪ್ಪು ಮಾಡಿದೆ, ಅಲ್ಲಿ ನನ್ನ ವೈಯಕ್ತಿಕ ವಿಷಯಗಳ ಬಗ್ಗೆಯೇ ಜಾಸ್ತಿ ಗಮನ ಹೋಗಿ ಈಗ ನನಗೆ ಬೇಕಾದಂತೆ ಅವಕಾಶ ಕೂಡ ಸಿಗುತ್ತಿಲ್ಲ” ಎಂದಿದ್ದಾರೆ.