ರಾಹುಲ್ ರಾಮಕೃಷ್ಣ ಟ್ವೀಟ್ ಏನು?
“2022 ಕೊನೇ. ನಾನು ಇನ್ನುಮುಂದೆ ಸಿನಿಮಾ ಮಾಡಲ್ಲ. ನಾನು ಕಾಳಜಿ ವಹಿಸುವುದಿಲ್ಲ, ಯಾರೂ ಕಾಳಜಿ ವಹಿಸಬಾರದು” ಎಂದು ಖಾರವಾಗಿ, ನೇರವಾಗಿ ರಾಹುಲ್ ರಾಮಕೃಷ್ಣ ಟ್ವೀಟ್ ಮಾಡಿದ್ದಾರೆ.
ರಾಹುಲ್ ವೃತ್ತಿ ಜೀವನ ಶುರು ಆಗಿದ್ದು ಯಾವಾಗ?
‘ಸೈನ್ಮಾ’ ಎಂಬ ಕಿರುಚಿತ್ರದ ಮೂಲಕ ನಟನಾಗಿ ಕಾಣಿಸಿಕೊಂಡ ರಾಗುಲ್ ಅವರು 2016ರಲ್ಲಿ ‘ಜಯಮ್ಮು ನಿಶ್ಚಯಮ್ಮು ರಾ’ ಚಿತ್ರದಲ್ಲಿ ಕಾಣಿಸಿಕೊಂಡರು. ಆ ಸಿನಿಮಾದಲ್ಲಿ ಶ್ರೀನಿವಾಸ್ ರೆಡ್ಡಿ, ಪೂರ್ಣಾ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಅರ್ಜುನ್ ರೆಡ್ಡಿ‘ ಸಿನಿಮಾದಲ್ಲಿನ ರಾಹುಲ್ ನಟನೆ ಭಾರೀ ಜನಪ್ರಿಯತೆ ಗಳಿಸಿತು. ಆ ಚಿತ್ರದಲ್ಲಿ ವಿಜಯ್ ದೇವರಕೊಂಡ ಸ್ನೇಹಿತನ ಪಾತ್ರದಲ್ಲಿ ರಾಹುಲ್ ಕಾಣಿಸಿಕೊಂಡರು.
ದೀಪಾವಳಿ ಹಬ್ಬದಂದು ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ ‘ಮೆಗಾ’ ಫ್ಯಾಮಿಲಿ; ಸಾಯಿ ಧರಮ್ ತೇಜ್ ಸಂಪೂರ್ಣ ಗುಣಮುಖ
ಸ್ಟಾರ್ ಸಿನಿಮಾಗಳಲ್ಲಿ ರಾಹುಲ್ ರಾಮಕೃಷ್ಣ ನಟನೆ
‘ಭರತ ಆನೆ ನೇನು’, ‘ಸಮ್ಮೋಹನಂ’, ‘ಚಿ ಲಾ ಸೌ’, ‘ಗೀತಾ ಗೋವಿಂದಂ‘, ‘ಹುಷಾರು’, ‘ಬ್ರೊಚೆವರೆವರುರ’, ‘ಅಲಾ ವೈಕುಂಠಪುರಂಲೋ’, ‘ಜತಿ ರತ್ನಲು’ ಮುಂತಾದ ಸ್ಟಾರ್ ಸಿನಿಮಾಗಳಲ್ಲಿ ರಾಹುಲ್ ಬಣ್ಣ ಹಚ್ಚಿದ್ದಾರೆ. ನಿತ್ಯಾ ಮೆನನ್ ಅವರು ‘ಸ್ಕೈಲ್ಯಾಬ್’ ಚಿತ್ರದಲ್ಲಿ ರಾಹುಲ್ ಕೊನೆಯದಾಗಿ ನಟಿಸಿದ್ದರು. ಆ ಸಿನಿಮಾದಲ್ಲಿ ಸುಬೇದಾರ್ ರಾಮ್‌ರಾವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಹುಲ್ ನಟನೆ ಜೊತೆಗೆ ಹಾಡು ಕೂಡ ಬರೆಯುತ್ತಾರೆ. ವಿಜಯ್ ದೇವರಕೊಂಡ, ರಿತು ವರ್ಮ ನಟನೆಯ ‘ಪೆಲ್ಲಿ ಚೂಪುಲು’ ಚಿತ್ರಕ್ಕೆ ರಾಹುಲ್ 2 ಹಾಡು ಬರೆದಿದ್ದರು.
RRR ಸಿನಿಮಾದಲ್ಲಿಯೂ ನಟಿಸಿರುವ ರಾಹುಲ್ ರಾಮಕೃಷ್ಣ
ರಾಜಮೌಳಿ ನಿರ್ದೇಶನದ ‘RRR’, ರಾಣಾ ದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ’ ಸಿನಿಮಾದಲ್ಲಿಯೂ ರಾಹುಲ್ ನಟಿಸಿದ್ದು, ಆ ಸಿನಿಮಾಗಳು ರಿಲೀಸ್ ಆಗಬೇಕಿವೆ.
ಆಸ್ಪತ್ರೆಯಲ್ಲಿರುವ ಸಾಯಿ ಧರಮ್ ತೇಜ್ ಸಹಾಯಕ್ಕೆ ಬಂದ ‘ಮೆಗಾ ಫ್ಯಾಮಿಲಿ’; ಇದು ಫ್ಯಾನ್ಸ್‌ಗೆ ಗುಡ್ ನ್ಯೂಸ್
ರಾಹುಲ್‌ಗೆ ತಿಳಿ ಹೇಳಿದ ಆತ್ಮೀಯರು, ಅಭಿಮಾನಿಗಳು
ರಾಹುಲ್ ರಾಮಕೃಷ್ಣ ಅವರ ಟ್ವೀಟ್ ನೋಡಿದವರು ಸಾಕಷ್ಟು ಜನ ಶಾಕ್ ಆಗಿದ್ದಾರೆ. ಯಾಕೆ ಇಷ್ಟುಬೇಗ ರಾಹುಲ್ ಈ ನಿರ್ಧಾರಕ್ಕೆ ಬಂದರು ಎಂದು ತಲೆಕೆಡಿಸಿಕೊಂಡಿದ್ದಾರೆ. ಅನೇಕರು ರಾಹುಲ್‌ಗೆ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಿ, ನೀವು ಉತ್ತಮ ಕಲಾವಿದರು, ಯಾಕೆ ಈ ರೀತಿ ಗಡಿಬಿಡಿಯ ನಿರ್ಧಾರ ತೆಗೆದುಕೊಳ್ತೀರಿ ಅಂತೆಲ್ಲ ಕಾಮೆಂಟ್ ಮಾಡಿದ್ದಾರೆ. ಎಷ್ಟೋ ಜನರು ರಾಹುಲ್‌ಗೆ ಕಾಲ್ ಮಾಡಿ ಹೀಗೆಲ್ಲ ಮಾಡಬೇಡಿ ಎಂದು ತಿಳಿ ಹೇಳಿದ್ದಾರಂತೆ.
ರಾಹುಲ್ ಮಾಡಿದ್ದು ಜೋಕ್?
ಚಿತ್ರರಂಗ ತೊರೆಯುವ ಟ್ವೀಟ್ ಮಾಡಿ 20 ಗಂಟೆಗಳ ನಂತರದಲ್ಲಿ ಮತ್ತೊಂದು ಟ್ವೀಟ್ ಮಾಡಿದ “ಉತ್ತಮ ಸಂಬಳ, ವೈಭೋಗ ಜೀವನ, ಅತ್ಯುತ್ತಮ ವ್ಯವಸ್ಥೆ ಎಲ್ಲವೂ ಸಿಕ್ಕಿದ ನಂತರದಲ್ಲಿ ನಾನು ಯಾಕೆ ಚಿತ್ರರಂಗದಿಂದ ದೂರ ಸರಿಯಲಿ? ನಾನು ಇಷ್ಟು ಬೇಗ ನಿವೃತ್ತಿ ತಗೊಂಡೆ ಎಂದು ನನ್ನ ಸ್ನೇಹಿತರು ಕಾಲ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ” ಎಂದು ರಾಹುಲ್ ಮರು ಟ್ವೀಟ್ ಮಾಡಿದ್ದಾರೆ. ಇದೇನು ಏಪ್ರಿಲ್ ತಿಂಗಳಲ್ಲ, ಹೀಗಿದ್ದಾಗ್ಯೂ ರಾಹುಲ್ ಟ್ವೀಟ್ ಆಶ್ಚರ್ಯ ಮೂಡಿಸಿದೆ. ಗಂಭೀರವಾದ ವಿಷಯದ ಬಗ್ಗೆ ರಾಹುಲ್ ಯಾಕೆ ಹೀಗೆ ಟ್ವೀಟ್ ಮಾಡಿದರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಸೆಲೆಬ್ರಿಟಿಯಾಗಿದ್ದು ಸಾರ್ವಜನಿಕ ವೇದಿಕೆಯಲ್ಲಿ ಚಿತ್ರರಂಗ ತೊರೆಯುವ ಮಾತನಾಡಿದ್ದು ಯಾಕೆ ಎಂಬುದು ಕುತೂಹಲ ಮೂಡಿಸಿದೆ.
Read more
[wpas_products keywords=”deal of the day party wear dress for women stylish indian”]