Karnataka news paper

ಕುಮಾರಸ್ವಾಮಿ ಅವರಿಂದಲೇ ಸುಳ್ಳು ಹುಟ್ಟಿದೆ! ನೂತನ ಕಾಂಗ್ರೆಸ್‌ MLC ಎಸ್‌ ರವಿ ವಾಗ್ದಾಳಿ


ಹೈಲೈಟ್ಸ್‌:

  • ಕುಮಾರಸ್ವಾಮಿ ಅವರಿಂದಲೇ ಸುಳ್ಳು ಹುಟ್ಟಿದೆ ಎಂದು ಎಂಎಲ್‌ಸಿ ಎಸ್‌ ರವಿ ಕಿಡಿ
  • ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಹಲವರು ಪಕ್ಷಕ್ಕೆ ಬರುತ್ತಾರೆ ಎಂದ ಎಸ್‌ ರವಿ
  • ರಾಮನಗರ-ಬೆಂಗಳೂರು ಗ್ರಾಮಾಂತರ ಪರಿಷತ್‌ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಅಭ್ಯರ್ಥಿ

ರಾಮನಗರ:ಇದು ಎಸ್.ರವಿ ಗೆಲುವಲ್ಲ. ನಮ್ಮ ನಾಯಕ ಡಿಕೆ ಶಿವಕುಮಾರ್ ಅವರ ಗೆಲುವು. ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ. ಉಪ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳೇ ಗೆಲುವು ಸಾಧಿಸುವುದು ವಾಡಿಕೆ. ಆದರೆ, ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಪಕ್ಷಕ್ಕೆ ಶುಭ ಶಕುನ ಶುರುವಾಗಿದೆ ಎಂದು ನೂತನ ವಿಧಾನ ಪರಿಷತ್‌ ಸದಸ್ಯ ಎಸ್‌ ರವಿ ಹೇಳಿದ್ದಾರೆ.

ರಾಮನಗರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತಮಗೆ ಅವಕಾಶ ನೀಡಿತ್ತು. ಎರಡು ಜಿಲ್ಲೆಗಳ ಮುಖಂಡರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ‌. 724 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದನೆ. ಎಂಟು ವಿಧಾನಸಭಾ ಕ್ಷೇತ್ರಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಮೂಲಕ ಧನ್ಯವಾದಗಳನ್ನು ಹೇಳುತ್ತಿದ್ದೆನೆ ಎಂದು ಹೇಳಿದರು.

ಡಿಕೆ ಶಿವಕುಮಾರ್‌ ಹಾಗು ಸಿದ್ದರಾಮಯ್ಯ ಅವರ ಆರ್ಶಿವಾದ ವೀರಪ್ಪಮೊಯ್ಲಿ, ಡಿಕೆ‌ ಸುರೇಶ್ ಹಾಗು ಶಾಸಕರ ನೆರವಿನಿಂದ ಗೆಲುವು ಸಾಧಿಸಿದ್ದೇನೆ. ರಾಜಕೀಯ ಪ್ರಜ್ಞಾವಂತರ ಕ್ಷೇತ್ರದ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಸಮಕ್ಕೆ ಗೆಲುವು ಸಾಧಿಸಿದೆ. ಮುಂದಿನ ಭವಿಷ್ಯಕ್ಕೆ ಕಾಂಗ್ರೆಸ್ ಪಕ್ಷ ಬೇಕು ಎಂಬುದನ್ನು ಈ ಚುನಾವಣೆ ಸ್ಪಷ್ಟವಾಗಿ ಹೇಳಿದೆ. ಎಲ್ಲರ ಸಂಘಟಿತದ ಹೋರಾಟದ ಪರವಾಗಿ ಗೆಲುವು ಸಾಧಿಸಿದ್ದನೆ. ಆಂತರಿಕ ಸಮೀಕ್ಷೆಯಲ್ಲಿ ಇಷ್ಟು ದೊಡ್ಡದ ಮತಗಳಿರಲಿಲ್ಲ. 2 ಸಾವಿರದ ಆಸುಪಾಸಿನಲ್ಲೇ ಇತ್ತು. ನಮ್ಮ ನಿರೀಕ್ಷೆಯನ್ನು ಮೀರಿ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

ಜೆಡಿಎಸ್ ವರಿಷ್ಠರ ಹೇಳಿಕೆ ಗೊಂದಲಗಳಿಗೆ ಕಾರಣವಾಗಿದೆ. ದಿನಕ್ಕೊಂದು ಹೇಳಿಕೆ ನೀಡುವ ನಾಯಕರಲ್ಲಿಯು ಗೊಂದಲ ಉಂಟಾಗಿತ್ತು. ಇಲ್ಲಿಯು ಸಹ ಬಿಜೆಪಿ ಹಾಗು ಜೆಡಿಎಸ್ ನಡುವೆ ಹೊಂದಾಣಿಕೆ ಆಗಿತ್ತು. ದೊಡ್ಡಬಳ್ಳಾಪುರ, ಹೊಸಕೋಟೆಯಲ್ಲಿ ಎಂಟಿಬಿ ನೇರವಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಚನಪಟ್ಟಣದಲ್ಲಿ ಹೊಂದಾಣಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಕೃತಜ್ಞತೆ, ಔದಾರ್ಯ ಗುಣಗಳಿಲ್ಲದ ಪಕ್ಷ, ಕತ್ತು ಕುಯ್ಯುವುದೇ ಅದರ ಸಂಸ್ಕೃತಿ: ಎಚ್‌ಡಿಕೆ
ಇಬ್ಬರು ಉಸ್ತುವಾರಿ ಸಚಿವರಿದ್ದರೂ, ಬಡಪಾಯಿ ನಾರಾಯಾಣಸ್ವಾಮಿ ಕರೆತಂದು 54 ಮತ ಹಾಕಿಸಿದ್ದಾರೆ. ಮುಂದೆ ಬಿಜೆಪಿ ಕಟ್ಟುತ್ತೇನೆ ಎಂದವರ ಪಾಡೇನು? ಇವರಿಬ್ಬರ ಸಾಮರ್ಥ್ಯ ಏನು ಎಂದು ಸಚಿವರಾದ ಅಶ್ವತ್ಥನಾರಾಯಣ, ಎಂಟಿಬಿ ನಾಗರಾಜು ಅವರಿಗೆ ಟಾಂಗ್ ನೀಡಿದರು.

ಈ ಚುನಾವಣೆಗೆ ಭಾಷಣ, ತತ್ವ ಸಿದ್ದಾಂತದ ಈ ಚುನಾವಣೆಗೆ ಸೀಮಿತವಲ್ಲ. ಅದಕ್ಕೆ ಬೇಕಿರುವ ಮದ್ದುಗುಂಡುಗಳನ್ನು ಸಮರ್ಥವಾಗಿ ಪೂರೈಸುತ್ತೇವೆ ಎಂದು ಹಣದ ಹೊಳೆಯನ್ನೆ ಜೆಡಿಎಸ್ ಹರಿಸಿತ್ತು. ಆದರೆ , ಇದು ಫಲ ನೀಡಲಿಲ್ಲ. ನಮ್ಮದು ಎರಡು ಸಾವಿರ ಮತಗಳಷ್ಟೇ. ಆದರೆ, ಅನ್ಯ ಪಕ್ಷಗಳು ಮತ ಹಾಕಿವೆ. ಈಗ 2023ರಲ್ಲಿ ಬಿಜೆಪಿ ಹಾಗು ಜೆಡಿಎಸ್ ಸಹವಾಸವೇ ಬೇಡ ಎನ್ನುತ್ತಿವೆ ಎಂದು ಕುಟುಕಿದರು.

‘ಗೂಳಿ’ ತಿವಿತಕ್ಕೆ ದಳ ವಿಲವಿಲ, ಜೆಡಿಎಸ್‌ ಭದ್ರಕೋಟೆ ಮಂಡ್ಯದಲ್ಲೇ ಗೆದ್ದು ಬೀಗಿದ ಕಾಂಗ್ರೆಸ್‌!
ಅಪವಿತ್ರ ಮೈತ್ರಿ, ಹಣದ ಹೊಳೆ ಮದ್ದುಗುಂಡುಗಳು ಸಹ ಕೆಲಸ ಮಾಡಿಲ್ಲ. ಇಂತಹ ಅತ್ಯಧಿಕ ಮತ ಯಾವತ್ತು ಬಂದಿರಲಿಲ್ಲ. ಈ ಚುನಾವಣೆ ಮೂಲಕ ಕಾಂಗ್ರೆಸ್‌ಗೆ ಈ ಜಿಲ್ಲೆ ಭದ್ರಕೋಟೆ ಎಂಬುದು ಸಾಬೀತಾಗಿದೆ ಎಂದರು.

ಸುಳ್ಳೇಶ್ವರ ಕುಮಾರಸ್ವಾಮಿ
ಕುಮಾರಸ್ವಾಮಿ ಅವರಿಂದಲೇ ಸುಳ್ಳು ಹುಟ್ಟಿದೆ. ನಮಗೆ ಸುಳ್ಳಿನ ಅವಶ್ಯಕತೆ ಇಲ್ಲ. ಬಿಜೆಪಿ ನಮ್ಮ ಜತೆ ಬರಲು ಸಾಧ್ಯವೇ ಇಲ್ಲ‌. ಜೆಡಿಎಸ್ ಹೇಗಾದರೂ ಬರುತ್ತೆ. ಒಟ್ಟಿನಲ್ಲಿ ಬಿಜೆಪಿ ಮತಗಳು ಸಹ ನಮಗೆ ಬಂದಿವೆ ಎಂದ ಅವರು, ಡಿಕೆಶಿ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಮಂದಿ ಕಾಂಗ್ರೆಸ್‌ಗೆ ಬರುತ್ತಾರೆ. ಸಮರ್ಥರ ಹೊಳೆಯೇ ಪಕ್ಷಕ್ಕೆ ಹರಿಯುತ್ತದೆ. ಸಿಪಿ ಯೋಗೀಶ್ವರ್‌ ಜೆಡಿಎಸ್ ವಿರೋಧಿ. ಹೀಗಾಗಿ ಸಹಜವಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಎಂದರು.

‘ಹಣಬಲದ ಅಬ್ಬರದಲ್ಲಿ ಜನಬಲಕ್ಕೆ ಸೋಲು’: ಜೆಡಿಎಸ್ ವೈಫಲ್ಯಕ್ಕೆ ಕುಮಾರಸ್ವಾಮಿ ಬೇಸರ



Read more