Source : PTI
ನವದೆಹಲಿ: ಡಿಸೆಂಬರ್ 20ರಿಂದ ‘ಹೈ-ರಿಸ್ಕ್’ ದೇಶಗಳಿಂದ ಬರುವವರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿ: ದೇಶದಲ್ಲಿ ಒಮಿಕ್ರಾನ್ ಶೇ.20ರಷ್ಟು ಹೆಚ್ಚಳ; ಸೋಂಕಿತರ ಸಂಖ್ಯೆ 53ಕ್ಕೇರಿಕೆ
ಓಮಿಕ್ರಾನ್ ಸೋಂಕು ಮತ್ತು ಕೊರೊನಾ ಸೋಂಕಿನ ಹೆಚ್ಚಿನ ಸೋಂಕಿನಿಂದ ದೇಶಕ್ಕೆ ಬರುವ ವಿದೇಶಿ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಆರ್ ಟಿ ಪಿಸಿ ಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಈ ತಿಂಗಳ 20 ರಿಂದ ದೇಶದ 6 ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಬೂಸ್ಟರ್ ಡೋಸ್ ಕುರಿತು ಸರ್ಕಾರದ ಅನುಮತಿಗೆ ಕಾಯಲಾಗುತ್ತಿದೆ: ಪೂನಾವಾಲ
ಬೆಂಗಳೂರು, ಕೋಲ್ಕತ್ತಾ, ಮುಂಬೈ, ದೆಹಲಿ, ಮುಂಬೈ ,ಕೋಲ್ಕತ್ತಾ,ಚೆನ್ನೈ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಿಗೆ ಬರುವ ಎಲ್ಲಾ ಪ್ರಯಾಣಿಕರಿಗೆ ಆರ್ ಟಿ ಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ ಕೇಂದ್ರ ವಿಮಾನಯಾನ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ರಾಜ್ಯಗಳ ಬಳಿ ಬಳಕೆಯಾಗದ ಸುಮಾರು 17.06 ಕೋಟಿಗೂ ಅಧಿಕ ಕೋವಿಡ್-19 ಲಸಿಕೆ ಲಭ್ಯವಿದೆ: ಕೇಂದ್ರ ಸರ್ಕಾರ
ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಆರ್ ಟಿ ಪಿಸಿಆರ್ ಪರೀಕ್ಷೆಯ ಮುಂಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ದೇಶದ 6 ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾಯಾನ ನಿರ್ದೇಶನಾಲಯ ತಿಳಿಸಿದೆ. ಏರ್ ಸುವಿಧಾ ಪೋರ್ಟಲ್ ನಲ್ಲಿ ವಿದೇಶಿ ಪ್ರವಾಸಿಗರು ಇದರ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: 90 ನಿಮಿಷಗಳಲ್ಲಿ ಓಮಿಕ್ರಾನ್ ಪತ್ತೆ ಹಚ್ಚುವ ವಿಧಾನ: ದೆಹಲಿ ಐಐಟಿ ಸಂಶೋಧಕರ ಸಾಧನೆ
ಅತಿ ಹೆಚ್ಚು ಸೋಂಕು ಇರುವ ದೇಶಗಳಲ್ಲಿ ದೇಶಕ್ಕೆ ಬರುವ ಪ್ರಯಾಣಿಕರು 14 ದಿನಗಳ ಕಾಲ ಕ್ವಾಂರಟೈನ್ ನಲ್ಲಿ ಇರಬೇಕು ಎಂದು ಸೂಚಿಸಲಾಗಿದೆ. ಜಗತ್ತಿನ ಹಲವು ದೇಶಗಳು ಭಾರತದ ಕೋವಿಡ್ ಲಸಿಕಾ ಪ್ರಮಾಣಪತ್ರವನ್ನು ಸ್ವೀಕರಿಸಿವೆ.