ಜನರ ಖರೀದಿ ಸಾಮರ್ಥ್ಯ ಕಸಿದ ಕೊರೊನಾ: ಶೇ.1ರಷ್ಟು ಶ್ರೀಮಂತರ ಆದಾಯ ಶೇ.70..!
ಹೌದು, ಕಮ್ಮಾರಿಕೆ, ಕುಂಬಾರಿಕೆ, ಚಮ್ಮಾರಿಕೆ ಇವುಗಳು ನಿಜಕ್ಕೂ ಕಲೆ, ಇವರು ಕಲಾವಿದರು. ಆಧುನಿಕೆಯಿಂದ ಕಸುಬುಗಳಿಕೆ ಬೇಡಿಕೆ ಕುಸಿದಿದ್ದರಿಂದ ಈ ಸಮುದಾಯ ಬೇರೆ ಕಸುಬಿನತ್ತ ಹೊರಳುತ್ತಿದೆ. ಆದರೆ ಕೆಲ ಕುಂಬಾರ ಕುಟುಂಬಗಳು ತಮ್ಮ ಕಸುಬನ್ನೇ ಒಂದಿಷ್ಟು ಅಪ್‌ಗ್ರೇಡ್ ಮಾಡಿಕೊಂಡು ಮಣ್ಣಿನ ಬಸಿ ಪೈಪ್ ತಯಾರಿಕೆಯಲ್ಲಿ ತೊಡಗಿವೆ.

ಕುಂಬಾರಿಕೆ ಕುಟುಂಬ
ದಾವಣಗೆರೆ ತಾಲೂಕು ಆನಗೋಡು ಹೋಬಳಿ ನರಗನಹಳ್ಳಿ ಗ್ರಾಪಂ ವ್ಯಾಪ್ತಿಯ ಬಾವಿಹಾಳ್ ಗ್ರಾಮದಲ್ಲಿ 12 ಕುಂಬಾರ ಜನಾಂಗದ ಕುಟುಂಬಗಳಿವೆ. ತಲಾತಲಾಂತರದಿಂದ ತಮ್ಮ ಕುಲ ಕುಸುಬಾದ ಕುಂಬಾರಿಕೆ ಮಾಡಿಕೊಂಡು ಬರುತ್ತಿವೆ. ಮನೆಗಳಿಗೆ, ಕಪ್ಪು ಹಂಚು, (ನಾಡ ಹಂಚುಗಳು) ಮಡಕೆ, ಕುಡಿಕೆ, ಗುಡಾಣ, ಕುಂಬ, ಸ್ವಾರೆ, ಹೂ ಕುಂಡ, ಪಾತ್ರೆ ಸೇರಿ ಹಲವು ರೀತಿಯ ಮಣ್ಣಿನ ಪರಿಕರ ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆಧುನಿಕ ಕಾಲದಲ್ಲಿಇವುಗಳಿಗೆ ಬೇಡಿಕೆ ಕುಸಿದಾಗ ತಯಾರಿಕೆ ನಿಲ್ಲಿಸಿದಾಗ ಬದುಕು ಕಷ್ಟವಾಯಿತು. ನಮಗೆ ಗೊತ್ತಿದ್ದು ಇದೊಂದೆ ಕಸುಬಾದ್ದರಿಂದ ಬಸಿ ಪೈಪ್ ತಯಾರಿಕೆಯಲ್ಲಿ ನಿರತರಾಗಿದ್ದೇವೆ ಎಂದು ಕುಂಬಾರ ಕುಟುಂಬದ ಮುಖ್ಯಸ್ಥರಾದ ಮಲ್ಲೇಶಪ್ಪ. ನಟರಾಜ್, ಶಿವಕುಮಾರ್.
ಮತ್ತೆ ಮಾರುಕಟ್ಟೆ ಸಮಸ್ಯೆ
ಭತ್ತ, ಕಬ್ಬಿನ ಗದ್ದೆಗಳಲ್ಲಿ ಹಾಗೂ ನೀರಾವರಿ ಪ್ರದೇಶಗಳಲ್ಲಿ ಜಾಸ್ತಿ ಬಳಕೆ ಮಾಡಲ್ಪಡುವ ನೀರಿನ ಬಸಿ ಪೈಪ್ ತಯಾರಿಕೆ ಮಾಡುತ್ತಿದ್ದೇವೆ. ಆರೇಳು ವರ್ಷದ ಹಿಂದೆ ಕೃಷಿ ಇಲಾಖೆಯವರು ಖರೀದಿ ಮಾಡಿಕೊಂಡು ಉತ್ತರ ಕರ್ನಾಟಕದ ಮಾನ್ವಿ, ಸಿಂಧನೂರು, ಸಿರುಗುಪ್ಪ, ಬಳ್ಳಾರಿ, ರಾಯಚೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ರವಾನಿಸಿ ನಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸರಕಾರ ಕೃಷಿ ಇಲಾಖೆಗೂ ಪ್ಲಾಸ್ಟಿಕ್ ಪೈಪ್ ಖರೀದಿ ಮಾಡಲು ಸೂಚಿಸಿದ್ದರಿಂದ ಮಣ್ಣಿನ ಪೈಪ್ ಮಾರಾಟ ಸಮಸ್ಯೆಯಾಗಿದೆ. ದುಬಾರಿ ವೆಚ್ಚದಲ್ಲಿ ಮಾರಾಟ ಮಾಡುವ ಈ ಪೈಪ್‌ಗಳನ್ನು ನಾವು ಅಕ್ಕಪಕ್ಕ ಊರುಗಳಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ನಟರಾಜ್, ರುದ್ರಪ್ಪ, ಕಲ್ಲಪ್ಪ ಹೇಳುತ್ತಾರೆ.
ಕುಂಬಾರ ಕುಟುಂಬಗಳು ತಮ್ಮ ಕಸುಬನ್ನು ಅಪ್‌ಗ್ರೇಡ್ ಮಾಡಿಕೊಂಡರು ಸಂಕಷ್ಟದಲ್ಲಿವೆ, ಸರಕಾರ ನೆರವಿಗೆ ಬರಬೇಕು, ಮಾರುಕಟ್ಟೆ ಜತೆ ಸೂಕ್ತ ಸವಲತ್ತು ಒದಗಿಸಬೇಕು.
ಡಿ.ಎಂ. ಪ್ರದೀಪ್, ಅಂತರಾಷ್ಟ್ರೀಯ ರೇಖಾ ಚಿತ್ರ ಕಲಾವಿದ
ಕೆರೆಯ ಒಂದು ಟ್ರ್ಯಾಕ್ಟರ್ ಲೋಡ್ ಮಣ್ಣಿಗೆ ಮೂರು ಸಾವಿರ ರೂ. ಬೆಲೆಯಿದೆ. ತಯಾರು ಮಾಡಿದ ಪರಿಕರಗಳನ್ನು ಆವಿಗೆಯಲ್ಲಿ ಸುಡಲು ಕಟ್ಟಿಗೆ ಕೊಳ್ಳಬೇಕು, ಕೂಲಿ ಕಾರ್ಮಿಕರು ಮನೆಯಲ್ಲಿನ ಮಹಿಳೆಯರು ಮಕ್ಕಳು ಎಲ್ಲರು ಶ್ರಮ ಪಡುತ್ತೇವೆ, ಆದರೆ ಮಾರುಕಟ್ಟೆ ಇಲ್ಲದಂತಾಗಿದೆ. ನಮ್ಮ ನೆರವಿಗೆ ಯಾವ ಸರಕಾರ, ರಾಜಕಾರಣಿಯೂ ಬರುತ್ತಿಲ್ಲಎಂದು ಈ ಸಮುದಾಯ ಅಲವತ್ತುಕೊಳ್ಳುತ್ತಿದೆ.
ಈ ಕುಟುಂಬಗಳಿಗೆ ಜಮೀನಿಲ್ಲ, ವಾಸಿಸಲು ಸುಸಜ್ಜಿತ ಮನೆಗಳೂ ಇಲ್ಲದ ಸ್ಥಿತಿಯಲ್ಲಿವೆ. ನಾವು ಲಿಂಗಾಯತ ಕುಂಬಾರರಾಗಿದ್ದು ಪಂಚಮಸಾಲಿ ಜನಾಂಗಕ್ಕೆ ಸೇರುತ್ತೇವೆ. ಪಂಚಮಸಾಲಿಗೆ ಪ್ರವರ್ಗ 2 ಎ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ ಮೀಸಲಾತಿ ಸಿಕ್ಕರೆ ಮಕ್ಕಳಿಗೆ ಶಿಕ್ಷಣಕ್ಕೇ ನೆರವಾಗಬಹುದು ಎಂದುಕೊಂಡಿದ್ದೇವೆ ಎನ್ನುತ್ತಾರೆ ಮಲ್ಲೇಶಪ್ಪ, ಕಾಂತರಾಜ್, ಶಿವಕುಮಾರ್.
Read more
[wpas_products keywords=”deal of the day sale today offer all”]