Karnataka news paper

25,000ರೂ. ಬೆಲೆಯಲ್ಲಿ ಲಭ್ಯವಿರುವ ಟಾಪ್‌ ಲ್ಯಾಪ್‌ಟಾಪ್‌ಗಳ ಲಿಸ್ಟ್‌ ಇಲ್ಲಿದೆ!


Deal Of The Day

oi-Manthesh

ಇಂದಿನ ದಿನಗಳಲ್ಲಿ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಗಳು ಆಫರ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುವ ಹೆಜ್ಜೆಗಳನ್ನು ಹಾಕುತ್ತಿವೆ. ಆ ಪೈಕಿ ಅಮೆಜಾನ್ ತಾಣವು ದೈತ್ಯ ಇ ಕಾಮರ್ಸ್‌ ಕಂಪನಿ ಆಗಿ ಬಿಂಬಿತವಾಗಿದೆ. ಹಾಗೆಯೇ ಆನ್‌ಲೈನ್ ಮೂಲಕ ಖರೀದಿ ಮಾಡುವ ಗ್ರಾಹಕರಿಗೆ ಫೇವರೇಟ್ ಮಾರುಕಟ್ಟೆ ಆಗಿ ಗುರುತಿಸಿಕೊಂಡಿದೆ. ಇನ್ನು ಅಮೆಜಾನ್ ಏನಾದರೊಂದು ಕೊಡುಗೆ ನೀಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತದೆ. ಮುಖ್ಯವಾಗಿ ವಿಶೇಷ ಮಾರಾಟ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಹಾಗೂ ಲ್ಯಾಪ್‌ಟಾಪ್‌ಗಳಿಗೂ ಬೊಂಬಾಟ್ ಆಫರ್ ನೀಡಿರುತ್ತದೆ.

25,000ರೂ. ಬೆಲೆಯಲ್ಲಿ ಲಭ್ಯವಿರುವ ಟಾಪ್‌ ಲ್ಯಾಪ್‌ಟಾಪ್‌ಗಳ ಲಿಸ್ಟ್‌ ಇಲ್ಲಿದೆ!

ಇನ್ನು ಕೆಲವೊಮ್ಮೆ ಯಾವುದೇ ಮಾರಾಟ ಇಲ್ಲದಿದ್ದರೂ ಅಮೆಜಾನ್‌ ಪ್ಲಾಟ್‌ಫಾರ್ಮ್ ಆಯ್ದ ಫೋನ್‌ ಹಾಗೂ ಲ್ಯಾಪ್‌ಟಾಪ್‌ ಸೇರಿದಂತೆ ಇತರೆ ಸ್ಮಾರ್ಟ್‌ ಡಿವೈಸ್‌ಗಳಿಗೆ ಕೊಡುಗೆ ನೀಡಿರುತ್ತದೆ. ಸದ್ಯ ಅಮೆಜಾನ್‌ನಲ್ಲಿ ಕೆಲವು ಕಂಪನಿಯ ಆಯ್ದ ಲ್ಯಾಪ್‌ಟಾಪ್‌ ಸಾಧನಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ ಕಾರ್ಡ್‌ಗಳಿಂದ ಡಿಸ್ಕೌಂಟ್‌ ಸಹ ಲಭ್ಯ. ಹಾಗಾದರೇ ಅಮೆಜಾನ್ ತಾಣದಲ್ಲಿ ಅತ್ಯುತ್ತಮ ರಿಯಾಯಿತಿ ಪಡೆದ ಆಯ್ದ ಜನಪ್ರಿಯ ಲ್ಯಾಪ್‌ಟಾಪ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏಸರ್ Acer Extensa 15 ಲ್ಯಾಪ್‌ಟಾಪ್
ಏಸರ್ Extensa 15 ಲ್ಯಾಪ್‌ಟಾಪ್ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅಧಿಕ ಡಿಸ್‌ಪ್ಲೇ ಮತ್ತು ಕಡಿಮೆ ಸ್ಕ್ರೀನ್ ಟು ಬಾಡಿ ರೇಶಿಯೋ ಹೊಂದಿದೆ. ಈ ಲ್ಯಾಪ್‌ಟಾಪ್ 1.9 ಕೆಜಿ ತೂಕ ಹೊಂದಿದ್ದು, ಸುಲಭವಾಗಿ ಜೊತೆಗೆ ಒಯ್ಯಬಹುದಾಗಿದೆ. ಹಾಗೆಯೇ ಈ ಲ್ಯಾಪ್‌ಟಾಪ್ AMD 3020e ಡ್ಯುಯಲ್ ಕೋರ್ ಪ್ರೊಸೆಸರ್ ಜೊಂದಿದ್ದು, 4GB RAM, 1 TB HDD, ವಿಂಡೋಸ್ 10, ಇಂಟಿಗ್ರೇಟೆಡ್ ಗ್ರಾಫಿಕ್ಸ್ ಸೌಲಭ್ಯಗಳನ್ನು ಪಡೆದಿದೆ. 9 ಗಂಟೆಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್ ಎನ್ನಲಾಗಿದೆ. ಎರಡು ಅಂತರ್ನಿರ್ಮಿತ ಸ್ಪೀಕರ್‌ಗಳು ಮತ್ತು ಡಿಜಿಟಲ್ ಮೈಕ್ರೊಫೋನ್ ಆಯ್ಕೆ ಒಳಗೊಂಡಿದೆ. ಪರ್ಸನಲ್ ಹಾಗೂ ಬ್ಯುಸಿನೆಸ್‌ ಎರಡಕ್ಕೂ ಸೂಕ್ತ ಲ್ಯಾಪ್‌ಟಾಪ್ ಇದಾಗಿದೆ.

ಲೆನೊವೊ ಐಡಿಯಾಪ್ಯಾಡ್ 3 11 ಕ್ರೋಮ್‌ಬುಕ್
ಈ ಲ್ಯಾಪ್‌ಟಾಪ್ 11.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು 1366 x 768 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಇಂಟೆಲ್ (Intel Celeron N4020) ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, 4GB LPDDR4 RAM, 64GB eMMC ಸ್ಟೋರೇಜ್, ಇಂಟೆಲ್ UHD ಗ್ರಾಫಿಕ್ಸ್ 3000, ಕ್ರೋಮ್ 2 ಗ್ರಾಫಿಕ್ಸ್ 60000 ಸೌಲಭ್ಯಗಳನ್ನು ಒಳಗೊಂಡಿದೆ. ಕ್ರೋಮ್ ಓಎಸ್‌ನಲ್ಲಿ ಕಾರ್ಯ ನಿರ್ವಹಿಸುವ ಈ ಲ್ಯಾಪ್‌ಟಾಪ್ ಹಗುರವಾದ ತೂಕವನ್ನು ಹೊಂದಿದ್ದು, ವೆಬ್‌ಕ್ಯಾಮ್ ಸೌಲಭ್ಯ ಪಡೆದಿದೆ. ಜೊತೆಗೆ ಬ್ಲೂಟೂತ್, ವೈ ಫೈ, ಯುಎಸ್‌ಬಿ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ.

Lenovo IdeaPad 3 11 Chromebook 11.6″ Laptop, 11.6″ HD (1366 x 768) Display, Intel Celeron N4020 Processor, 4GB LPDDR4 RAM, 64GB eMMC Storage, Intel UHD Graphics 600, Chrome OS, 82BA0003US, Onyx Black

₹24,480.00

₹40,000.00

39%

ಹೆಚ್‌ಪಿ ಕ್ರೋಮ್‌ಬುಕ್ (HP Chromebook)
ಹೆಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟಾಪ್ 11.6 ಇಂಚಿನ ಡಿಸ್‌ಪ್ಕೇಯನ್ನು ಪಡೆದಿದೆ. ಇದು 1366 x 768 ಪಿಕ್ಸಲ್ ರೆಸಲ್ಯೂಶನ್ ಹೊಂದಿದ್ದು, ಹಾಗೆಯೇ ಇದರ ರಚನೆಯು ತೆಳುವಾದ ಮತ್ತು ತೂಕವು ಹಗುರವಾಗಿದೆ. ಈ ಲ್ಯಾಪ್‌ಟಾಪ್ ಟಚ್‌ಸ್ಕ್ರೀನ್ ಮಾದರಿಯಲ್ಲಿದೆ. ಕೀ ಬೋರ್ಡ್‌ ಆಯ್ಕೆಯು ಇದೆ. ಹಾಗೆಯೇ 4GB/64GB, eMMC, ಕ್ರೋಮ್ OS ಸೌಲಭ್ಯಗಳನ್ನು ಪಡೆದಿದೆ. ಈ ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಅಸಿಸ್ಟೆಂಟ್ ಅಂತರ್ನಿರ್ಮಿತವಾಗಿದೆ. ಈ ಲ್ಯಾಪ್‌ಟಾಪ್ ಕ್ರೋಮ್ ಓಎಸ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. ಜನಪ್ರಿಯ ಜಿಮೇಲ್, ಯೂಟ್ಯೂಬ್, ಅಮೆಜಾನ್ ಪ್ರೈಮ್, ಸ್ಲಾಕ್, ಪ್ರಿಂಟರ್, ಲೈಟ್‌ರೂಮ್, ವಾಟ್ಸಾಪ್, ಎಮ್‌ಎಸ್‌ ಆಫೀಸ್ ನಂತಹ ಆಪ್‌ಗಳು ಆಕ್ಸಸ್‌ ಇದೆ. ಇನ್ನು ಇದು 12 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ ಎಂದು ಹೇಳಲಾಗಿದೆ.

ಆಸುಸ್ (ASUS EeeBook 12) ಲ್ಯಾಪ್‌ಟಾಪ್
ಆಸುಸ್ ಕಂಪನಿಯ ಈ ಲ್ಯಾಪ್‌ಟಾಪ್ 11.6 ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ಇದರ ಡಿಸ್‌ಪ್ಲೇಯು 250 nits ಬ್ರೈಟ್ನೆಸ್‌ ಒಳಗೊಂಡಿದ್ದು, ಸ್ಕ್ರೀನ್‌ ಟು ಬಾಡಿ ನಡುವಿನ ಅಂತರ 73% ಆಗಿದೆ. ಇದು INTEL ಸೆಲೆರಾನ್ ಡ್ಯುಯಲ್ ಕೋರ್ N4020 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ 64GB EMMC + 4GB RAM DDR4 ಸ್ಟೋರೇಜ್ ಆಯ್ಕೆಯನ್ನು ಪಡೆದಿದೆ. ಜೊತೆಗೆ ಇಂಟೆಲ್ ಇಂಟಿಗ್ರೇಟೆಡ್ UHD 600 ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ವೈ ಫೈ, ಯುಎಸ್‌ಬಿ, ಹೆಚ್‌ಡಿಎಮ್‌ಐ ಆಯ್ಕೆಗಳು ಇವೆ. ಪಿಕಾಕ್ ಬ್ಲೂ ಬಣ್ಣದ ಆಯ್ಕೆ ಇದೆ. ವಿಂಡೋಸ್ 10 ಸಪೋರ್ಟ್‌ ಪಡೆದಿದೆ.

ಲೆನೊವೊ ಐಡಿಯಾಪ್ಯಾಡ್ 3 ಕ್ರೋಮ್‌ಬುಕ್ ಲ್ಯಾಪ್‌ಟಾಪ್
ಲೆನೊವೊ ಐಡಿಯಾಪ್ಯಾಡ್ 3 ಕ್ರೋಮ್‌ಬುಕ್ ಲ್ಯಾಪ್‌ಟಾಪ್ 11.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು ಉತ್ತಮ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಇಂಟೆಲ್ ‎2.5 GHz ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, 4GB RAM, 64GB eMMC ಸ್ಟೋರೇಜ್ ಸೌಲಭ್ಯಗಳನ್ನು ಒಳಗೊಂಡಿದೆ. ಕ್ರೋಮ್ ಓಎಸ್‌ನಲ್ಲಿ ಕಾರ್ಯ ನಿರ್ವಹಿಸುವ ಈ ಲ್ಯಾಪ್‌ಟಾಪ್ 1.2ಕೆ.ಜಿ ತೂಕವನ್ನು ಹೊಂದಿದ್ದು, 28.5 x 20.5 x 1.8 ಸೆ.ಮೀ ಸುತ್ತಳತೆಯನ್ನು ಹೊಂದಿದೆ. ಜೊತೆಗೆ ಬ್ಲೂಟೂತ್, ವೈ ಫೈ, ಯುಎಸ್‌ಬಿ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ. 250 nits ಬ್ರೈಟ್ನೆಸ್‌ ಒಳಗೊಂಡಿದ್ದು, ಆಂಯಟಿ ಗ್ಲೇರ್ (Anti-glare) ಆಯ್ಕೆಗಳನ್ನು ಪಡೆದಿದೆ.

ಆಸುಸ್ ಲ್ಯಾಪ್‌ಟಾಪ್ (E210MA-GJ002T)
ಆಸುಸ್‌ ಸಂಸ್ಥೆಯ ಈ ಲ್ಯಾಪ್‌ಟಾಪ್ 11.6 ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ಇದರ ಡಿಸ್‌ಪ್ಲೇಯು ಹೆಚ್‌ಡಿ LED ಮಾದರಿಯಲ್ಲಿದ್ದು, ಉತ್ತಮ ಬ್ರೈಟ್ನೆಸ್‌ ಒಳಗೊಂಡಿದೆ. ಈ ಲ್ಯಾಪ್‌ಟಾಪ್ ಇಂಟೆಲ್ ಪ್ರೊಸೆಸರ್‌ ಅನ್ನು ಪಡೆದಿದ್ದು, ವಿಂಟೋಸ್ 10 ಓಎಸ್ ಸಪೋರ್ಟ್‌ ಅನ್ನು ಒಳಗೊಂಡಿದೆ. ಹಾಗೆಯೇ ಇದು 4GB RAM ಮತ್ತು 128 GB eMMC ಸ್ಟೋರೇಜ್ ಆಯ್ಕೆ ಪಡೆದಿದೆ. ಇನ್ನು ಈ ಲ್ಯಾಪ್‌ಟಾಪ್ 1ಕೆ.ಜಿ 690 ಗ್ರಾಂ ತೂಕವನ್ನು ಹೊಂದಿದ್ದು, 27.91 x 12.12 x 1.69 ಸೆ.ಮೀ ಸುತ್ತಳತೆಯನ್ನು ಪಡೆದಿದೆ. ಹಾಗೆಯೇ ವೈ ಫೈ, ಯುಎಸ್‌ಬಿ, ಹೆಚ್‌ಡಿಎಮ್‌ಐ ಆಯ್ಕೆಗಳು ಇವೆ.

Disclaimer: This site contains affiliate links to products. We may receive a commission for purchases made through these links. However, this does not influence or impact any of our articles, such as reviews, comparisons, opinion pieces and verdicts.



Read more…