The New Indian Express
ದಾವಣಗೆರೆ: ಸಮಾನತೆಯನ್ನು ಬೋಧಿಸುವ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಕೆಲವು ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ಸಹಿಸಲು ಸಾಧ್ಯವಿಲ್ಲ, ಏಕೆಂದರೆ ಇದು ಮೂಲಭೂತವಾದಿ ಮನಸ್ಥಿತಿಯಾಗಿದೆ. ಶಿಕ್ಷಣ ಸಂಸ್ಥೆಗಳು ಧರ್ಮ, ಜಾತಿ ಮತ್ತು ಇತರ ಅಂಶಗಳಿಗೆ ಆದ್ಯತೆ ನೀಡದ ಕೇಂದ್ರಗಳಾಗಿವೆ. ಡ್ರೆಸ್ ಕೋಡ್ ಮತ್ತು ಸಮವಸ್ತ್ರವು ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ತರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಧರ್ಮ ಪಾಲಿಸಲು ಯಾರೂ ಶಾಲೆಗೆ ಬರಬಾರದು: ಹಿಜಾಬ್ ವಿವಾದ ಕುರಿತು ಆರಗ ಜ್ಞಾನೇಂದ್ರ ಹೇಳಿಕೆ
“ಹಿಜಾಬ್ ಧರಿಸುವುದು ಸಂವಿಧಾನ ಒದಗಿಸಿರುವ ಹಕ್ಕು ಎಂದು ಸಮಾಜದ ಒಂದು ವರ್ಗ ಹೇಳುತ್ತಿದೆ. ಅದೇ ಸಂವಿಧಾನವು ಭಾರತದ ಎಲ್ಲಾ ನಿವಾಸಿಗಳು ಸಮಾನರು ಎಂದು ಹೇಳುತ್ತದೆ, ಆದ್ದರಿಂದ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಉಡುಗೆ-ತೊಡುಗೆಗಳ ವ್ಯತ್ಯಾಸ ಇರಬಾರದು ಎಂದು ತಿಳಿಸಿದ್ದಾರೆ.
Read more
[wpas_products keywords=”deal of the day”]