ಕೊರೊನಾ ವೈರಸ್ ಸೋಂಕಿಗೆ ಒಳಪಟ್ಟಿದ್ದರಿಂದ ಜನವರಿ ಆರಂಭದಲ್ಲಿ ಲತಾ ಮಂಗೇಶ್ಕರ್ ಅವರು ಆಸ್ಪತ್ರೆಗೆ ಸೇರಿದ್ದರು. ಆನಂತರದಲ್ಲಿ ನ್ಯೂಮೋನಿಯಾ ಸೋಂಕು ಕೂಡ ತಗುಲಿದೆ. ಐಸಿಯುವಿನಲ್ಲಿ ಲತಾ ಚಿಕಿತ್ಸೆ ಪಡೆದಿದ್ದು, ಆರೋಗ್ಯ ಕೂಡ ಸುಧಾರಿಸಿತ್ತು. ಜನವರಿ 28ರಂದು ವೆಂಟಿಲೇಟರ್‌ನಿಂದ ತೆಗೆದು ಹಾಕಲಾಗಿತ್ತು.
ಲತಾ ಮಂಗೇಶ್ಕರ್ ಆಸ್ಪತ್ರೆಗೆ ಸೇರಿದಾಗಿನಿಂದ ಆಶಾ ಭೋಸ್ಲೆ ಅವರು ನಿತ್ಯ ಲತಾ ಆರೋಗ್ಯದ ಬಗ್ಗೆ ಅಪ್‌ಡೇಟ್ ಮಾಡುತ್ತಾರೆ. “ಆಸ್ಪತ್ರೆಯವರು ಯಾರನ್ನೂ ಒಳಗಡೆ ಬಿಡುತ್ತಿಲ್ಲ. ಕಾಂಪೌಂಡ್‌ವೊಳಗೆ ನನ್ನನ್ನು ಬಿಟ್ಟಿಲ್ಲ. ಕೊರೊನಾ ವೈರಸ್ ಸೋಂಕು ಇರೋದರಿಂದ ಆಸ್ಪತ್ರೆಯಲ್ಲಿ ನೀತಿ, ನಿಯಮಗಳಿವೆ. ಅವನ್ನು ಎಲ್ಲರೂ ಪಾಲಿಸಬೇಕು. ಗಾಯಕಿಯಾಗಿದ್ದು lung capacity ಇರೋದರಿಂದ ಅವರ ಆರೋಗ್ಯ ಸುಧಾರಿಸುತ್ತಿದೆ. ಎಲ್ಲದಕ್ಕೂ ಮಿಗಿಲಾಗಿ ಲತಾ ಮಂಗೇಶ್ಕರ್ ಅವರು ಫೈಟರ್” ಎಂದು ಮಾಧ್ಯಮದವರಿಗೆ ಆಶಾ ಬೋಸ್ಲೆ ಹೇಳಿದ್ದಾರೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ಲತಾ ಮಂಗೇಶ್ಕರ್‌ಗೆ ಚಿಕಿತ್ಸೆ ನೀಡುತ್ತಿದ್ದಾರೆ. 36 ಭಾರತೀಯ ಭಾಷೆಗಳು, ವಿದೇಶಿ ಭಾಷೆಗಳಲ್ಲಿಯೂ ಲತಾ ಮಂಗೇಶ್ಕರ್ ಕೂಡ ಹಾಡಿದ್ದಾರೆ. ಅದರಲ್ಲೂ ಹಿಂದಿ, ಮರಾಠಿ ಭಾಷೆಯಲ್ಲಿಯೇ ಹೆಚ್ಚು ಹಾಡಿದ್ದಾರೆ. ಬಂಗಾಳಿಯಲ್ಲಿ 185 ಹಾಡು ಹಾಡಿದ್ದಾರೆ, ದಾದಾಸಾಹೇಬ್ ಫಾಲ್ಕೆ, ಭಾರತ ರತ್ನ, ರಾಷ್ಟ್ರ ಪ್ರಶಸ್ತಿ ಸೇರಿ ಸಾಕಷ್ಟು ಪ್ರಶಸ್ತಿಗಳನ್ನು ಲತಾ ಮಂಗೇಶ್ಕರ್ ಪಡೆದುಕೊಂಡಿದ್ದಾರೆ. ಲತಾ ಮಂಗೇಶ್ಕರ್ ಸಹೋದರಿಯರು ಕೂಡ ಗಾಯಕಿಯರು.
Read more
[wpas_products keywords=”deal of the day party wear dress for women stylish indian”]