ಬೆಂಗಳೂರು: ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ’ಜೇಮ್ಸ್’ ಟೀಸರ್ ಫೆ 11 ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಈ ಮೂಲಕ ಪುನೀತ್ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಸಿಕ್ಕಂತಾಗಿದೆ.
ಅಭಿಮಾನಿಗಳು ಟೀಸರ್ ನೋಡಲು ಕಾತರರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಜೇಮ್ಸ್ ಸಿನಿಮಾಗೆ ನಿರ್ದೇಶಕ ಚೇತನ್‌ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೊಸಪೇಟೆ ಉದ್ಯಮಿ ಕಿಶೋರ್ ಪತ್ತಿಕೊಂಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ₹ 80 ಕೋಟಿ ಬಜೆಟ್ ಸಿನಿಮಾ ಎಂದು ಚಿತ್ರತಂಡ ಹೇಳಿಕೆ ನೀಡಿದೆ.
ಪುನೀತ್ ರಾಜ್‌ಕುಮಾರ್ ನಿಧನರಾಗುವುದಕ್ಕೂ ಮುನ್ನ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು. ಆದರೆ ಅವರು ಡಬ್ಬಿಂಗ್ ಮಾಡಿರಲಿಲ್ಲ, ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ.
Power level🔝#JamesTeaser releasing this Feb 11th at 11:11 AM only on @PRKAudio YT Channel.@PuneethRajkumar | @PriyaAnand | @BahaddurChethan | @AnuPrabhakar9 | @actorsrikanth | @charanrajmr2701 | @Kishorepathiko1 #BoloBoloJames pic.twitter.com/78UmGXRpM0
— James (@JamesTheMovie1) February 5, 2022
ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಆದರೆ ಪುನೀತ್ ಜನ್ಮದಿನದ ಮಾರ್ಚ್ 17 ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಈಗಾಗಲೇ ಜೇಮ್ಸ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು ಮಾರ್ಚ್ 17ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇಟ್ಟುಕೊಂಡೇ ಚಿತ್ರತಂಡ ಹಗಲಿರುಳು ಕೆಲಸ ಮಾಡುತ್ತಿದೆ. ಫೆಬ್ರುವರಿ ಮಧ್ಯಭಾಗದ ವೇಳೆಗೆ ಸಿನಿಮಾ ಸಂಪೂರ್ಣವಾಗಿ ಸಿದ್ಧವಾಗಲಿದೆ ಎನ್ನಲಾಗಿದೆ.
ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ನಟಿ ನೇಹಾ ಶೆಟ್ಟಿಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ
Read More…Source link
[wpas_products keywords=”deal of the day party wear for men wedding shirt”]