Online Desk
ಬೆಂಗಳೂರು: ಸಿವಿಲ್ ಇಂಜಿನಿಯರ್ ಓರ್ವರನ್ನು ಅಪಹರಣ ಮಾಡಿದ್ದ 6 ಮಂದಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಹಣಕಾಸು ವಿಚಾರವಾಗಿ ವಿವಾದ ಉಂಟಾಗಿ ಸಿವಿಲ್ ಇಂಜಿನಿಯರ್ ನ್ನು ಅಪಹರಣ ಮಾಡಿ 30 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿತ್ತು.
ಸಂತ್ರಸ್ತರ ನೌಕರರು ಹಾಗೂ ದಾರಿಹೋಕರು ಮಾಹಿತಿ ನೀಡಿದ ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿ ಅಪಹರಣಗೊಂಡ ವ್ಯಕ್ತಿಯನ್ನು ಮೂರು ಗಂಟೆಗಳಲ್ಲಿ ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತರನ್ನು ನಂದಗೋಪಾಲ್ (31) ಸುನಿಲ್ ಸೀನಪ್ಪ (32) ಅಶೋಕ್ ಲಿಂಗಪ್ಪ (31) ವಿಘ್ನೇಶ್ ಅನಂತರಾಮ್ (21) ಮನೋನ್ ಶ್ರೀನಿವಾಸ್ (24) ಶದಾಬ್ ಅಹ್ಮದ್ (24) ಎಂದು ಗುರುತಿಸಲಾಗಿದೆ.
ಲಭ್ಯವಾದ ಮಾಹಿತಿಯ ಆಧಾರದಲ್ಲಿ ಪೊಲೀಸರು ಅಪಹರಣಕ್ಕೆ ಬಳಕೆ ಮಾಡಲಾದ ವಾಹನದ ಚಲನವಲನಗಳನ್ನು ಪತ್ತೆ ಮಾಡಿದರು, ಹೊಸಕೋಟೆ ಬಳಿ ತೆರಳುತ್ತಿದ್ದಾಗ ಕಿಡ್ನ್ಯಾಪ್ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಒಡಿಶಾ ಮೂಲದ ಇಂಜಿನಿಯರ್ ಮನಸ್ ಎಂದು ಗುರುತಿಸಲಾಗಿದೆ. ಯಲಹಂಕಾದಲ್ಲಿ ನಿರ್ಮಾಣ ಸಂಸ್ಥೆಯನ್ನು ಮನಸ್ ನಡೆಸುತ್ತಿದ್ದಾರೆ.
Read more
[wpas_products keywords=”deal of the day”]