Karnataka news paper

ಐಸಿಸ್ ಮುಖ್ಯಸ್ಥ ಅಬು ಇಬ್ರಾಹಿಂ ಅಲ್-ಖುರೇಷಿ ಸಾವು: ಅಮೆರಿಕಾ ಹಾಕಿದ್ದ ಸ್ಕೆಚ್ ಗೆ ಉಗ್ರ ಬಲಿಯಾದದ್ದು ಹೇಗೆ?


The New Indian Express

ಬೈರುತ್: ಸಿರಿಯಾದಲ್ಲಿ ಅಮೆರಿಕಾ ನಡೆಸಿದ ದಾಳಿಯೊಂದರಲ್ಲಿ ಇಸ್ಲಾಂಮಿಕ್ ಸ್ಟೇಟ್ ಮುಖ್ಯಸ್ಥ ಅಬು ಇಬ್ರಾಹಿಂ ಅಲ್-ಖುರೇಷಿ ಹತ್ಯೆ ನಂತರ ರಹಸ್ಯ ಕಾರ್ಯಾಚರಣೆ ಹಾಗೂ ಜಿಹಾದಿ ಸಂಘಟನೆಯ ಭವಿಷ್ಯದ ಬಗ್ಗೆ ಅನೇಕ ಕುತೂಹಲಕಾರಿ ಪ್ರಶ್ನೆಗಳು ಎದ್ದಿವೆ. 

ಖುರೇಷಿ ಹೇಗೆ ನೆಲೆಸಿದ್ದ?:  ಅತ್ಮೇಹ್ ಪಟ್ಟಣದಲ್ಲಿರುವ ಆತನ ಮನೆಯಲ್ಲಿರಬೇಕಾದರೆ ರಾತ್ರೋ ರಾತ್ರಿ ಅಮೆರಿಕ ಸೈನಿಕರು ಹೆಲಿಕಾಪ್ಟರ್ ಮೂಲಕ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಕಳೆದ ವರ್ಷ ಆತ ವಾಸಿಸುತ್ತಿರುವ ಸ್ಥಳ ಪತ್ತೆಯಾಗಿತ್ತು ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. 11 ತಿಂಗಳಿನಿಂದ ಆತ ಅಲ್ಲಿ ವಾಸಿಸುತ್ತಿದ್ದಾಗಿ ಕಟ್ಟಡದ ಮಾಲೀಕರು ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಹೇಗೆ ಖುರೇಷಿ ಹತ್ಯೆಯಾಯಿತು?: ಶ್ವೇತಭವನ ಮತ್ತು ಅಮೆರಿಕ ರಕ್ಷಣಾ ಅಧಿಕಾರಿಗಳ ಪ್ರಕಾರ, ಸೆರೆಯಾಗುವುದನ್ನು ತಪ್ಪಿಸಲು ಬಾಂಬ್ ಸ್ಫೋಟಿಸಿದಾಗ ಖುರೇಷಿ ಸಾವನ್ನಪ್ಪಿದಾಗಿ ತಿಳಿಸಿವೆ. ಶರಣಾಗುವಂತೆ ಆತನಿಗೆ ನಾವು ಹೇಳಿದ್ದರೂ ಆತನೇ ತನ್ನನ್ನು ತಾನು  ಹತ್ಯೆ ಮಾಡಿಕೊಂಡಿರುವುದಾಗಿ  ಅಮೆರಿಕ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಕೆನೇತ್ ಮೆಕೆಂಜಿ ತಿಳಿಸಿದ್ದಾರೆ.

ಮನೆಯಲ್ಲಿ ಸಂಭವಿಸಿದ ಒಂದು ಸ್ಫೋಟದಿಂದಾಗಿ ಮನೆಯ ಮೇಲ್ಛಾವಣಿಯ ಭಾಗವೊಂದು ಕುಸಿತ, ಸುಟ್ಟ ಗುರುತು ಸೇರಿದಂತೆ ಮೂರು ಅಂತಸ್ತಿನ ಮನೆ ಹಾನಿಯಾಯಿತು. ಸ್ಫೋಟದ ಶಬ್ದ ಕೇಳಿಸಿತು ಎಂದು ನೆರೆಹೊರೆಯವರು ತಿಳಿಸಿದ್ದಾರೆ. 

ಸ್ಫೋಟದ ಸ್ಥಳದಲ್ಲಿ ಖುರೇಷಿ ಪಿಂಗರ್ ಪ್ರಿಂಟ್ ಗುರುತಿಸುವಿಕೆ ಮಾಡಲಾಯಿತು ಎಂದು ಅಮೆರಿಕ ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ ಹೇಳಿದರು. ಆದರೆ, ಆತನ ಮೃತದೇಹವನ್ನು ಅಮೆರಿಕ ಪಡೆ ತೆಗೆದುಕೊಂಡು ಹೋಯಿತೆ ಅಥವಾ ಅಲ್ಲಿಯೇ ಬಿಡಲಾಯಿಯೇ ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಲಿಲ್ಲ. ಐಸಿಸ್ ಮುಖಂಡನ ಮುಖವನ್ನು ಹೋಲುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಅದನ್ನು ಎಎಫ್ ಪಿ ಸುದ್ದಿಸಂಸ್ಥೆ ದೃಢೀಕರಿಸಿಲ್ಲ. ಹೇಗೆ ಆತ ಸಾವನ್ನಪ್ಪಿದ್ದ ಎಂಬುದರ ಬಗ್ಗೆಯೂ ಸ್ಪಷ್ಟ ಮಾಹಿತಿ ಒದಗಿಸಿಲ್ಲ.

ಅಲ್ಲಿ ಇತರರು ಯಾರಿದ್ದರು?: ಹೆಲಿಕಾಪ್ಟರ್ ದಾಳಿ ವೇಳೆಯಲ್ಲಿ ಕನಿಷ್ಠ ಮೂವರು ನಾಗರಿಕರು ಮೃತಪಟ್ಟಿರುವುದಾಗಿ ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಖುರೇಷಿ ಹಾಗೂ ಮನೆಯ ಹೊರಗಡೆ ಇತರ ಇಬ್ಬರು ಇದಿದ್ದಾಗಿ ತಿಳಿಸಿದ್ದಾರೆ. ಮನೆಯ ಒಳಗಡೆ ಇದ್ದ 12 ಜನರು ಸೇರಿದಂತೆ 13 ಮಂದಿ ಸಾವನ್ನಪ್ಪಿರುವುದಾಗಿ  ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ವಾರ್ ಮಾನಿಟರ್ ಹೇಳಿದೆ.

ಖುರೇಷಿ ಇಬ್ಬರು ಹೆಂಡತಿಯರನ್ನು ಹೊಂದಿದ್ದ, ಇಬ್ಬರು ಕೂಡಾ ದಾಳಿ ವೇಳೆ ಮೃತಪಟ್ಟಿದ್ದಾರೆ. ಐಸಿಸ್ ಮುಖ್ಯಸ್ಥನ ಸಹೋದರಿ ಮತ್ತು ಆಕೆಯ ಹದಿಹರೆಯದ ಹೆಣ್ಣು ಮಕ್ಕಳು ಕೂಡಾ ಸಾವನ್ನಪ್ಪಿರುವುದಾಗಿ ಅಬ್ಸರ್ವೇಟರಿ ಮುಖ್ಯಸ್ಥ ರಮಿ ಅಬ್ದೆಲ್ ರೆಹೆಮನ್ ಹೇಳಿದ್ದಾರೆ. ನಾಲ್ಕು ಮಕ್ಕಳ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆಯಲ್ಲಿ ಎರಡು ಶಿಶುಗಳು ಸೇರಿದಂತೆ ಆರು ಮಕ್ಕಳನ್ನು ರಕ್ಷಿಸಲಾಗಿದೆ. ಖುರೇಷಿಯ ಹಿರಿಯ ಸಹಚರರೊಬ್ಬರು ಕೂಡಾ ಹತ್ಯೆಯಾಗಿರುವುದಾಗಿ ಅಬ್ದೆಲ್ ರೆಹಮಾನ್ ತಿಳಿಸಿದ್ದಾರೆ. 

ಗಾಯಗೊಂಡಿದ್ದ ಖುರೇಷಿಗೆ ಸೇರಿದ ಮಗುವೊಂದಕ್ಕೆ ಸಿವಿಲ್ ಡಿಪೆನ್ಸ್ ನಿಂದ ಉಪಚರಿಸಲಾಗಿದೆ ಆದರೆ, ನಂತರ ಅಮೆರಿಕ ಸೈನಿಕರಿಂದ ಅಪರಿಚಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ತಿಳಿದುಬಂದಿದೆ.

 ಖುರೇಷಿ ಏಕೆ ಇಡ್ಲಿಬ್‌ ಪ್ರಾಂತ್ಯದಲ್ಲಿ ಬಚ್ಚಿಟ್ಟುಕೊಂಡಿದ್ದ?:  ಐಸಿಸ್ ಆಪರೇಷನ್ ವಲಯದಿಂದ ದೂರದಲ್ಲಿದ್ದ  ಇಡ್ಲಿಬ್ ಪ್ರಾಂತ್ಯದಲ್ಲಿ ಖುರೇಷಿ ಬಚ್ಚಿಟ್ಟುಕೊಂಡಿದದ್ದು ಆಶ್ಚರ್ಯವನ್ನುಂಟು ಮಾಡಿದೆ. ಖುರೇಷಿಗಿಂತ ಹಿಂದೆ ಐಸಿಸ್ ಮುಖ್ಯಸ್ಥನಾಗಿದ್ದ ಅಬು ಬರ್ಕಾ- ಅಲ್ ಬಾಗ್ದಾದಿ ಕೂಡಾ ಇಡ್ಲಿಬ್ ಪ್ರಾಂತ್ಯದಲ್ಲಿಯೇ 2019 ಅಕ್ಟೋಬರ್ ನಲ್ಲಿ ಹತ್ಯೆಗೀಡಾಗಿದ್ದ. ಪೂರ್ವ ಸಿರಿಯಾ ಅಥವಾ ಪಶ್ಚಿಮ ಇರಾಕ್ ಪ್ರಾಂತ್ಯಗಿಂತ ಇಡ್ಲಿಬ್ ಪ್ರಾಂತ್ಯ ಐಸಿಸ್ ಮುಖಂಡರಿಗೆ ಸುರಕ್ಷಿತವಾಗಿದೆ ಎಂದು ಐಸಿಸ್ ಕುರಿತು ಪುಸ್ತಕ ಬರೆದಿರುವ ಹಸನ್ ಹಸನ್ ಹೇಳಿದ್ದಾರೆ. 

ಐಸಿಸ್ ಮುಂದಿನ ಭವಿಷ್ಯ ಏನು?:ಎರಡು ವಾರಗಳ ಹಿಂದೆ ಘವಾರಾನ್ ಜೈಲಿನ ಮೇಲೆ ಐಸಿಸ್ ನಡೆಸಿದ ವಾರದ ಅವಧಿಯ ದಾಳಿಯು ಪುನಶ್ಚೇತನದ ಭೀತಿಯನ್ನು ಹುಟ್ಟುಹಾಕಿದೆ. ಸುಮಾರು ಮೂರು ವರ್ಷಗಳ ನಂತರ ಮೂರು ವರ್ಷಗಳ ನಂತರ ಐಸಿಸ್ ತನ್ನ ಕ್ಯಾಲಿಫೇಟ್ ನ ತುಣುಕು ಪ್ರದೇಶವನ್ನು ಕಳೆದುಕೊಂಡಿತ್ತು. ಆದಾಗ್ಯೂ,  ಜೈಲಿನ ಮೇಲಿನ ದಾಳಿ, ಕಮ್ ಬ್ಯಾಕ್ ಕಾರ್ಯತಂತ್ರದ ಭಾಗವಲ್ಲ, ಅಥವಾ ಚೇತರಿಕೆಯ ಅಂಶವಲ್ಲ ಎಂದು ಹಸನ್ ಹೇಳುತ್ತಾರೆ. 

ಐಸಿಸ್ ನ ದುರ್ಬಲತೆ ಬಹಿರಂಗವಾಗಿದೆ ಎಂದು ಅವರು ಹೇಳಿದ್ದಾರೆ. ಗುರುವಾರ ನಡೆದಿರುವ ದಾಳಿ ಅಮೆರಿಕದ ದಕ್ಷತೆ ಹಾಗೂ ಐಸಿಸ್ ಮುಖ್ಯಸ್ಥನನ್ನು ಬಲೆಗೆ ಕೆಡವಿರುವುದನ್ನು ತೋರಿಸುತ್ತದೆ. ಖುರೇಷಿ ಸತ್ತಿರುವುದು ಆತನ ಸಂಘಟನೆಗೂ ಇನ್ನೂ ಸರಿಯಾಗಿ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.  ಐಸಿಸ್ ಗುಂಪಿನ ಕೆಲ ಯಶಸ್ವಿ ಮುಖಂಡರ ಹೆಸರುಗಳಿವೆ ಆದರೆ, ಮುಂದಿನ ಐಸಿಸ್ ಮುಖ್ಯಸ್ಥ ಅದೇ ಪ್ರದೇಶದಿಂದ ಬರುವ ಸಾಧ್ಯತೆಯಿದೆ. 



Read more

[wpas_products keywords=”deal of the day”]