ಅವರು ದ.ಕ.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಅವರ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜತೆಯಲ್ಲಿ ಮಾತನಾಡಿ, ಶಾಲೆ ಎನ್ನುವುದು ಸರಸ್ವತಿ ಮಂದಿರ. ಶಾಲೆಯ ನಿಯಮ ಹಾಗೂ ಅನುಶಾಸನದ ಜತೆಗೆ ಕಲಿಯಬೇಕಾದದ್ದು ಧರ್ಮ.
ಅದರ ಜತೆಗೆ ಬೇರೆ ಧರ್ಮ ಬರುವುದು ಸರಿಯಲ್ಲ. ಶಾಲೆಯ ನಿಯಮದಡಿಯಲ್ಲಿಯೇ ಎಲ್ಲರೂ ಕಲಿಯಬೇಕು. ಇಲ್ಲಿ ತಾಲಿಬಾನ್ ಮಾಡಲು ಅವಕಾಶ ನೀಡೋದಿಲ್ಲ. ಮಕ್ಕಳಿಗೆ ಅವಶ್ಯಕತೆ ಇರೋದು ಶಿಕ್ಷಣ ಯಾರಿಗೆ ಈ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯ ಇಲ್ಲವೋ ಅವರು ಬೇರೆ ದಾರಿ ಹುಡುಕಬಹುದು. ಆದರೆ ಸರಕಾರ ಮಾತ್ರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ಹಿಜಾಬ್‍ಗೆ ಸರಕಾರ ಅವಕಾಶ ಕೊಡುವುದಿಲ್ಲ. ನ್ಯಾಯಾಲಯದಲ್ಲಿರುವುದರಿಂದ ಈ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದರು.
ಹಿಜಾಬ್ ವಿವಾದ: ಸಂವಿಧಾನ ನೀಡಿರುವ ಹಕ್ಕೇನು? ರಾಜ್ಯದ ಕಾನೂನು ಹೇಳುವುದೇನು?
ಗೋವುಗಳ ಕಳವು ಪ್ರಕರಣಗಳ ಹೆಚ್ಚಳದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ನಳಿನ್, ಈಗಾಗಲೇ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸಿದೆ. ಮುಖ್ಯಮಂತ್ರಿ ಸೇರಿದಂತೆ, ಗೃಹಸಚಿವರು ಎಲ್ಲ ಸಚಿವರು ಸಭೆ ನಡೆಸಿ ಸ್ವಷ್ಟ ಆದೇಶವನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಯಾವುದೇ ರೀತಿಯ ಗೋಹತ್ಯೆ, ಗೋ ಕಳವು ಪ್ರಕರಣಗಳು ಕಂಡು ಬಂದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.
ಸದ್ಯಕ್ಕೆ ಮಂತ್ರಿ ಮಂಡಲ ಪುನರ್ ರಚನೆ ಇಲ್ಲ!
ಮಂತ್ರಿ ಮಂಡಲದ ಪುನರ್ ರಚನೆ ವಿಚಾರದಲ್ಲಿ ಪ್ರತಿಕ್ರಿಯಿಸುತ್ತಾ, ಇದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಸಂದರ್ಭ ಬಂದಾಗ ರಾಷ್ಟ್ರೀಯ ನಾಯಕರ ಜತೆ ಮಾತನಾಡಿ ಮಂತ್ರಿ ಮಂಡಲದ ರಚನೆಯನ್ನು ಮಾಡುತ್ತಾರೆ. ಇದಕ್ಕೆ ಬೇರೆ ಯಾರೋ ಮಾತನಾಡುವ ಅವಶ್ಯಕತೆ ಇಲ್ಲ. ಸಮಯ ಬಂದಾಗ ನಡೆಯುತ್ತದೆ.
ಮಂತ್ರಿ ಮಂಡಲದಲ್ಲಿ ನಾನು ಇರಬೇಕು ಎಂದು ಅಪೇಕ್ಷೆ ಪಡುವುದು ತಪ್ಪಲ್ಲ. ಶಾಸಕರಾದವರು ಮಂತ್ರಿಗಳಾಗುತ್ತಾರೆ ಆದರೆ ಎಲ್ಲ ಶಾಸಕರಿಗೂ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ. ಹಿರಿಯರನ್ನು ಗಮನದಲ್ಲಿಟ್ಟುಕೊಂಡು ನಮ್ಮ ರಾಷ್ಟ್ರೀಯ ಹಿರಿಯರು ಹಾಗೂ ನಾವು ಕೂತು ಚರ್ಚೆ ಮಾಡಿ ಯಾರಿಗೆ ಅವಕಾಶ ನೀಡಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇವೆ ಎಂದರು.
Read more
[wpas_products keywords=”deal of the day sale today offer all”]