The New Indian Express
ಶ್ರೀನಗರ: ಮಂಜುಗಡ್ಡೆಯಿಂದ ನಿರ್ಮಿಸಲ್ಪಟ್ಟ ದೇಶದ ಮೊದಲ ಈಗ್ಲೂ ಕೆಫೆ ಕಾಶ್ಮೀರದ ಗುಲ್ ಮಾರ್ಗ್ ಪ್ರವಾಸಿ ತಾಣದಲ್ಲಿ ಶುರುವಾಗಿದೆ. ಇದು ಜಗತ್ತಿನಲ್ಲೇ ಅತಿ ದೊಡ್ಡ ಈಗ್ಲೂ ಕೆಫೆ ಎಂದು ಮಾಲೀಕರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮದುವೆಯಾದ 6 ತಿಂಗಳಿಗೇ ಕೊರೊನಾದಿಂದ ಪತಿ ಸಾವು: ಕೋವಿಡ್ ಪರಿಹಾರ ನಿಧಿಗೆ 40 ಲಕ್ಷ ರೂ. ದೇಣಿಗೆ ನೀಡಿದ ವಿಧವೆ
ಈಗ್ಲೂ ಕೆಫೆಯಲ್ಲಿ ಏಕಕಾಲಕ್ಕೆ 40 ಮಂದಿ ಜನರು ಪ್ರವೇಶಿಸಮಹುದಾಗಿದೆ. ಗುಹೆಯ ಮಾದರಿಯಲ್ಲಿರುವ ಈ ಕೆಫೆ ಒಳಗೆ ಟೇಬಲ್ ಕುರ್ಛಿಗಳನ್ನು ಹಾಕಲಾಗಿದ್ದು, ಅವೆಲ್ಲವೂ ಮಂಜುಗಡ್ಡೆಯಿಂದ ಮಾಡಲ್ಪಟ್ಟಿವೆ. ಕುರ್ಚಿಗಳ ಮೇಲೆ ಕುರಿಯ ಉಣ್ಣೆಯಿಂದ ಮಾಡಲ್ಪಟ್ಟ ದಪ್ಪ ಹೊದಿಕೆಗಳನ್ನು ಹಾಕಲಾಗಿದೆ.
ಇದನ್ನೂ ಓದಿ: ಜಾರ್ಖಂಡ್: ಪಬ್ಲಿಕ್ ಗೋಡೆ ಮೇಲೆ ಸ್ವೆಟರ್, ಮಫ್ಲರ್ ಸಂಗ್ರಹ; ನಿರ್ಗತಿಕರನ್ನು ಬೆಚ್ಚಗಿಡಲು ವಿನೂತನ ಮಾರ್ಗ ‘ನೇಕಿ ಕಿ ದೀವಾರ್’
ಈ ಕೆಫೆ ನಿರ್ಮಿಸಲು ಒಂದು ತಿಂಗಳ ಕಾಲ ತಗುಲಿದೆ. ಸದ್ಯ ಜಗತ್ತಿನ ಅತಿ ದೊಡ್ಡ ಈಗ್ಲೂ ಕೆಫೆ ಸ್ವಿಜರ್ ಲೆಂಡಿನಲ್ಲಿದೆ. ಕಾಶ್ಮೀರದ ಈಗ್ಲೂ ಕೆಫೆ ಅದಕ್ಕಿಂತಲೂ ದೊಡ್ಡದಾಗಿದ್ದು ಶೀಘ್ರದಲ್ಲೆ ಗಿನ್ನೆಸ್ ವಿಶ್ವದಾಖಲೆಗೆ ಅರ್ಜಿ ಸಲ್ಲಿಸುವುದಾಗಿ ಮಾಲೀಕರು ತಿಳಿಸಿದ್ದಾರೆ.
ಇದನ್ನೂ ಓದಿ: ಸೈಕಲ್ ಪೆಡಲ್ ನಿಂದ ಓಡುವ ನೀರಿನ ಪಂಪ್ ನಿಂದ 2.5 ಎಕರೆ ಭೂಮಿಗೆ ನೀರು: ಜಾರ್ಖಂಡ್ ರೈತನ ಆವಿಷ್ಕಾರ
Read more
[wpas_products keywords=”deal of the day”]