Karnataka news paper

ಖಾಲಿಯಿರುವ 4 ಸಚಿವ ಸ್ಥಾನಕ್ಕೆ ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ: ಹೊಸ ಮುಖಗಳ ಸೇರ್ಪಡೆಗೆ ಬಿಜೆಪಿ ಚಿಂತನೆ!


The New Indian Express

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನಾರಚನೆಯ ಗದ್ದಲ ಮತ್ತೆ ಶುರುವಾಗಿದ್ದು, ಖಾಲಿಯಿರುವ 4 ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟೆ ಬೆಳೆಯುತ್ತಲೇ ಇದೆ. ಆದರೆ, ಈ ನಾಲ್ಕು ಸ್ಥಾನಕ್ಕೆ ಹೊಸ ಮುಖಗಳಿಗೆ ಸ್ಥಾನ ನೀಡಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಎಲ್ಲವೂ ಅಂದುಕೊಂಡಂತೆ ನಡೆದರೆ, ಬೊಮ್ಮಾಯಿ ಅವರ ಸಂಪುಟದಲ್ಲಿ ಹಲವು ಜಿಲ್ಲೆಗಳಿಗೆ ಪ್ರಾತಿನಿಧ್ಯವಿಲ್ಲದ ಕಾರಣ, ಪ್ರಾದೇಶಿಕ ಸಮತೋಲನವನ್ನು ಸಾಧಿಸಲು ಹೊಸ ಮುಖಗಳ ಸೇರ್ಪಡೆಗೆ ಕೇಂದ್ರ ನಾಯಕತ್ವವು ಒಪ್ಪಿಗೆ ನೀಡುವ ಸಾಧ್ಯತೆಗಳಿವೆ. 

ಇದನ್ನೂ ಓದಿ: ‘ಆಪ್ತಮಿತ್ರ’ನನ್ನು ಸಕ್ರಿಯ ರಾಜಕಾರಣಕ್ಕೆ ತರಲು ಶ್ರೀರಾಮುಲು ಸರ್ಕಸ್: ದೆಹಲಿಗೆ ತೆರಳುವ ಮುನ್ನ ತುಂಗಾ ತೀರದಲ್ಲಿ ರಹಸ್ಯ ಪೂಜೆ!

ಐದು ಬಾರಿ ಶಾಸಕರಾಗಿರುವ ಜಿ.ಎಚ್.ತಿಪ್ಪಾರೆಡ್ಡಿ (ಚಿತ್ರದುರ್ಗ), ಪೂರ್ಣಿಮಾ ಶ್ರೀನಿವಾಸ್ (ಹಿರಿಯೂರು), ದತ್ತಾತ್ರೇಯ ರೇವೂರ್ (ಗುಲ್ಬರ್ಗ ದಕ್ಷಿಣ), ಎಂ.ರೇಣುಕಾಚಾರ್ಯ (ಹೊನ್ನಾಳಿ), ಬಸನಗೌಡ ಪಾಟೀಲ್ (ವಿಜಯಪುರ) ಮತ್ತು ಎನ್ ಮಹೇಶ್ (ಕೊಳ್ಳೇಗಾಲ) ಅವರ ಹೆಸರುಗಳು ಪಟ್ಟಿಯಲ್ಲಿವೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಬಿಜೆಪಿ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. 

ಹಿರಿಯ ಶಾಸಕರಲ್ಲಿ ತಿಪ್ಪಾರೆಡ್ಡಿ ಒಬ್ಬರಾಗಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಸಿಕ್ಕಿದ್ದೇ ಆದರೆ, ಪೂರ್ಣಿಮಾ, ರೇವೂರ್ (ಕಲಬುರಗಿ), ಪಾಟೀಲ್ (ವಿಜಯಪುರ), ರೇಣುಕಾಚಾರ್ಯ (ದಾವಣಗೆರೆ) ಮತ್ತು ಮಹೇಶ್ (ಚಾಮರಾಜನಗರ) ಅವರು ತಮ್ಮ ಜಿಲ್ಲೆಗಳನ್ನು ಪ್ರತಿನಿಧಿಸಲಿದ್ದಾರೆ. ಮಹೇಶ್ ಅವರು ಈ ಹಿಂದೆ ಬಿಎಸ್’ಪಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 

ಇದನ್ನೂ ಓದಿ: ಸೌಜನ್ಯದ ಭೇಟಿಯಷ್ಟೇ, ರಾಜಕೀಯ ಉದ್ದೇಶವಿಲ್ಲ: ಡಿಕೆ ಶಿವಕುಮಾರ್ ಭೇಟಿ ಬಗ್ಗೆ ಆನಂದ್ ಸಿಂಗ್ ಸ್ಪಷ್ಟನೆ

ಏತನ್ಮಧ್ಯೆ, ಸಚಿವ ಸ್ಥಾನಕ್ಕೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಎಂಎಲ್‌ಸಿ ಎನ್.ರವಿಕುಮಾರ್ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರುಗಳೂ ಕೂಡ ಕೇಳಿ ಬರುತ್ತಿವೆ. 

ಈ ಬಾರಿಯ ಸಚಿವ ಸಂಪುಟದಿಂದ ಹಿರಿಯ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಜೆ.ಸಿ.ಮಾಧುಸ್ವಾಮಿ ಅವರನ್ನು ಕೈಬಿಡುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದಕ್ಕೆ ಕೆಲ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದನದಲ್ಲಿ ಹಲವು ವಿಚಾರಗಳಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಸದನದಲ್ಲಿ ಹಿರಿಯ ಸದಸ್ಯರ ಅಗತ್ಯವಿರುವುದರಿಂದ ನಾಯಕರು ಒಲವು ತೋರುತ್ತಿಲ್ಲ ಎನ್ನಲಾಗುತ್ತಿದೆ. 

ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸೇರ್ಪಡೆಗೊಳಿಸಿದರೆ, ಶಶಿಕಲಾ ಜೊಲ್ಲೆ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. 

ಇದನ್ನೂ ಓದಿ: ಸಿಎಂ ದೆಹಲಿ ಭೇಟಿ: ಸಚಿವಾಕಾಂಕ್ಷಿಗಳಲ್ಲಿ ಗರಿಗೆದರಿದ ಕನಸು; ವಿಜಯೇಂದ್ರಗೆ ಸಿಗುವುದೇ ಅವಕಾಶ?

ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಮಾರ್ಚ್ ಎರಡನೇ ವಾರದಲ್ಲಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮಾರ್ಚ್ 10ರ ಬಳಿಕ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. 

ಈ ಹಿಂದೆ ಸೋಮವಾರ ದೆಹಲಿಗೆ ಭೇಟಿ ನೀಡುವುದಾಗಿ ಬೊಮ್ಮಾಯಿ ಹೇಳಿದ್ದರು. ಬೊಮ್ಮಾಯಿಯವರ ಈ ಹೇಳಿಕೆ ಬಳಿಕ ಸಚಿವಾಕಾಂಕ್ಷಿಗಳು ದೆಹಲಿಗೆ ಭೇಟಿ ನೀಡುತ್ತಿದ್ದು, ಕೇಂದ್ರೀಯ ನಾಯಕರನ್ನು ಭೇಟಿಯಾಗುವುದರಲ್ಲಿ ಬಿಝಿಯಾಗಿದ್ದಾರೆ. ಈಗಾಗಲೇ ಸಚಿವ ಬಿ.ಶ್ರೀರಾಮುಲು ಅವರು ದೆಹಲಿಗೆ ಭೇಟಿ ನೀಡಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಶೀಘ್ರದಲ್ಲಿಯೇ ದೆಹಲಿಗೆ ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ. 



Read more

[wpas_products keywords=”deal of the day”]