ಶನಿವಾರ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಹಿಜಾಬ್ (Hijab) ಧರಿಸಿದ ಮಕ್ಕಳಿಗೆ ತರಗತಿಯೊಳಗೆ ಪ್ರವೇಶ ನೀಡದ ಕಾಲೇಜು ಸಿಬ್ಬಂದಿಯ ನಿರ್ಧಾರವನ್ನು ಖಂಡಿಸಿದ್ದಾರೆ. ‘ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ದೋಚುತ್ತಿದ್ದೇವೆ’ ಎಂದು ಕಿಡಿಕಾರಿದ್ದಾರೆ.
ಹಿಜಾಬ್ ವಿವಾದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಯುದ್ಧಭೂಮಿ ಆಗಲು ಬಿಡಲ್ಲ: ಬಿಸಿ ನಾಗೇಶ್
‘ವಿದ್ಯಾರ್ಥಿಗಳ ಶಿಕ್ಷಣದ ನಡುವೆ ಹಿಜಾಬ್ ಪ್ರವೇಶಿಸಲು ಬಿಡುವ ಮೂಲಕ ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ದೋಚುತ್ತಿದ್ದೇವೆ. ಸರಸ್ವತಿ ಮಾತೆ ಎಲ್ಲರಿಗೂ ಜ್ಞಾನವನ್ನು ನೀಡಲಿ. ಆಕೆ ಭೇದ ಮಾಡುವುದಿಲ್ಲ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ವಾಗ್ದಾಳಿ
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಶನಿವಾರ ಮತ್ತೆ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
‘ಸಂವಿಧಾನವು ಯಾವುದೇ ಧರ್ಮವನ್ನು ಆಚರಿಸುವ ಹಕ್ಕು ನೀಡಿದೆ. ಅದರ ಅರ್ಥ ತಮ್ಮ ಧರ್ಮಕ್ಕೆ ಅನುಗುಣವಾಗಿ ಜನರು ಯಾವುದೇ ಬಟ್ಟೆಯನ್ನು ಧರಿಸಬಹುದು. ಹಿಜಾಬ್ ತೊಟ್ಟ ವಿದ್ಯಾರ್ಥಿಗಳನ್ನು ಶಾಲೆ ಪ್ರವೇಶಿಸದಂತೆ ತಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಹಿಜಾಬ್ ವಿವಾದ: ಸಂವಿಧಾನ ನೀಡಿರುವ ಹಕ್ಕೇನು? ರಾಜ್ಯದ ಕಾನೂನು ಹೇಳುವುದೇನು?
‘ಹಿಜಾಬ್ ಹೆಸರಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ನಿರಾಕರಿಸುವುದು ಸಂಘ ಪರಿವಾರದ ಮುಖ್ಯ ಅಜೆಂಡಾ ಆಗಿದೆ. ನರೇಂದ್ರ ಮೋದಿ ಅವರು ಬೇಟಿ ಬಚಾವೋ, ಬೇಟಿ ಪಡಾವೋ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಈ ಘಟನೆಯ ಬಗ್ಗೆ ಗೊತ್ತಾಗಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
‘ಹಿಜಾಬ್ ಹೆಸರಿನಲ್ಲಿ ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಡಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿವೆ. ಇದಕ್ಕೆ ಕೂಡಲೇ ತಡೆ ಹಾಕಬೇಕು ಮತ್ತು ಜನರನ್ನು ಪ್ರಚೋದಿಸುತ್ತಿರುವವರನ್ನು ಬಂಧಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಶಿಕ್ಷಣ ಸಂಸ್ಥೆಗಳು ಎರಡು ಸಮುದಾಯದ ನಡುವಿನ ಯುದ್ಧಭೂಮಿಗಳಾಗಲು ನಾವು ಬಿಡುವುದಿಲ್ಲ. ಶಿಕ್ಷಣ ಸಂಸ್ಥೆಯೆಂಬುದು ಪ್ರತಿ ವಿದ್ಯಾರ್ಥಿಯೂ ಸಮಾನ ಎಂಬ ಭಾವ ನೀಡುವ ಪವಿತ್ರ ಸ್ಥಳ. ಈ ವಿವಾದದ ಬಗ್ಗೆ ನಾವು ಸ್ಪಷ್ಟವಾಗಿದ್ದು, ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಈ ರೀತಿ ಗಲಾಟೆಯಾಗಬಾರದು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.
ಹಿಜಾಬ್ ವಿವಾದ ರಾಜ್ಯದ ಇತರೆ ಭಾಗಗಳಿಗೂ ವ್ಯಾಪಿಸುವ ಸೂಚನೆ ಕಾಣಿಸುತ್ತಿದೆ. ಬೆಳಗಾವಿಯ ರಾಮದುರ್ಗ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುವುದರ ವಿರುದ್ಧ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಬಂದ ಘಟನೆ ವರದಿಯಾಗಿದೆ.
Read more
[wpas_products keywords=”deal of the day sale today offer all”]