Karnataka news paper

ಬೆಳಗಾವಿ ಹಿಜಾಬ್ ವಿವಾದ : ಕೇಸರಿ ಶಾಲು ಧರಿಸಿ ತರಗತಿಗೆ ಬಂದ ವಿದ್ಯಾರ್ಥಿಗಳು, ಪ್ರವೇಶಕ್ಕೆ ನಿರ್ಬಂಧ!


ಬೆಳಗಾವಿ : ಕರಾವಳಿ ಭಾಗದಲ್ಲಿ ಭುಗಿಲೆದ್ದ ಹಿಜಾಬ್ ವಿವಾದ ಇದೀಗ ಕುಂದಾನಗರಿ ಬೆಳಗಾವಿಗೆ ಕಾಲಿಟ್ಟಿದ್ದು ರಾಮದುರ್ಗ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಬಂದ ಘಟನೆ ನಡೆದಿದ್ದು, ಇದೀಗ ಹಿಜಾಬ್ ವಿವಾದ ಬೆಳಗಾವಿಗೂ ಕಾಲಿಟ್ಟಿದೆ.

ಜಿಲ್ಲೆಯ ರಾಮದುರ್ಗ ತಾಲೂಕಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಳೆದ ಮೂರು ದಿನಗಳ ಹಿಂದೆ ಇಪ್ಪತ್ತಕ್ಕೂ ಅಧಿಕ ವಿಧ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಪೊಲೀಸರಿಂದ ವಿದ್ಯಾರ್ಥಿಗಳು ತೊಟ್ಟಿದ್ದ ಶಾಲು ತಗೆಸಲು ಮುಂದಾಗಿದ್ದು ವಿದ್ಯಾರ್ಥಿಗಳು ಶಾಲು ತಗೆಯಲು ನಿರಾಕರಿಸಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರ ಹಾಕಲಾಗಿದೆ. ರಾಜ್ಯಾದ್ಯಂತ ಹಿಜಾಬ್ ವಿವಾದ ಸದ್ದು ಮಾಡುತಿದ್ದಂತೆ ಇತ್ತ ರಾಮದುರ್ಗ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಮಧ್ಯಪ್ರವೇಶಿಸಿ ಪೊಲೀಸರ ಸಹಾಯದಿಂದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರ ಹಾಕಲಾಗಿದೆ.

ಅಷ್ಟೇ ಅಲ್ಲದೆ ಪ್ರಕರಣ ಹೊರಗೆ ಗೊತ್ತಾಗದಂತೆ ಮುಚ್ಚಿ ಹಾಕಲಾಗಿದೆ. ಆದರೆ ಘಟನೆ ನಡೆದ ಸಂದರ್ಭದಲ್ಲಿ ಮಾಡಿದ್ದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣ ಕುರಿತು ವಿವರಣೆ ನೀಡಿದ ರಾಮದುರ್ಗ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಆನಂದ ಲಾಲಸಂಗಿ., ವಿದ್ಯಾರ್ಥಿಗಳು ಹನುಮ ಮೂಲಾಧಾರಣೆ ಮಾಡಿದ್ದರು.

ಈ ಹಿನ್ನಲೆಯಲ್ಲಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಶಾಲು ತಗೆಯುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಒಪ್ಪಿದ್ದ ವಿದ್ಯಾರ್ಥಿಗಳು ಶಾಲು ತಗೆದು ತರಗತಿಗೆ ವಾಪಸ್ಸಾಗಿದ್ದರು ಎಂದು ತಿಳಿದು ಬಂದಿದೆ.



Read more

[wpas_products keywords=”deal of the day sale today offer all”]