The New Indian Express
ಬೆಂಗಳೂರು: ರಾಜ್ಯದಲ್ಲಿ ದೇವದಾಸಿ ಪದ್ದತಿ ನಿಷೇಧಿಸಿ ಹಲವು ದಶಕಗಳು ಕಳೆದಿದ್ದರೂ ಇನ್ನೂ ಕೆಲವೆಡೆ ಈ ಅನಿಷ್ಠ ಪದ್ಧತಿ ಜೀವಂತವಾಗಿದೆ. ರಾಜ್ಯದಲ್ಲಿ ಸುಮಾರು 80,800 ದೇವದಾಸಿ ಮಹಿಳೆಯರು ಇರುವುದಾಗಿ ವರದಿಯಾಗಿದೆ. ಇವರಲ್ಲಿ ಬಹುತೇಕ ದಲಿತ ಮಹಿಳೆಯರೇ ಆಗಿದ್ದಾರೆ.
ಇವರು ತಮ್ಮ 12-13ರ ಹದಿಹರೆಯದ ವಯಸ್ಸಿನಲ್ಲಿ ತಮ್ಮ ತಾಯಿಯಂದರ ಸಮ್ಮುಖದಲ್ಲಿಯೇ ದೇವಾಲಯದ ಮುಂಭಾಗ ತಮ್ಮ ಜೀವನವನ್ನು ಬಲವಂತದಿಂದ ವೇಶ್ಯಾವಾಟಿಕೆಗೆ ಸಮರ್ಪಿಸಿಕೊಂಡಿರುತ್ತಾರೆ. ಮಾಜಿ ದೇವದಾಸಿಯರು ಮತ್ತಿತರ ಹಿರಿಯ ದೇವದಾಸಿಯರ ಮಕ್ಕಳೇ ಹೆಚ್ಚಾಗಿರುತ್ತಾರೆ. 1984ರಲ್ಲಿ ದೇವದಾಸಿ ( ಸಮರ್ಪಣಾ ನಿಷೇಧ) ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಈ ಸಾಮಾಜಿಕ ಅನಿಷ್ಠ ಪದ್ಧತಿಯನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ.
ದುರ್ಬಲ ದಲಿತ ಕುಟುಂಬಕ್ಕೆ ಸೇರಿದ ಹೆಣ್ಣು ಮಕ್ಕಳನ್ನು ದೇವಾಲಯ ಹೊರಗಡೆ ವೇಶ್ಯಾವಾಟಿಕೆಗೆ ಸಮರ್ಪಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಆದರೆ, ಮನೆಗಳಲ್ಲಿ ಇನ್ನೂ ನಡೆಯುತ್ತಿದೆ ಎಂದು ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಸ್ನೇಯ ಸ್ವಯಂ ಸೇವಾ ಸಂಸ್ಥೆಯೊಂದರ ಪ್ರಾಜೆಕ್ಟ್ ಡೈರೆಕ್ಟರ್ ಟಿ. ರಾಮಾಂಜುನೇಯ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರು ಭೇಟಿ ನೀಡಿದ್ದು, ಕೆಲ ಮಾಜಿ ದೇವದಾಸಿಯರು ಹಾಗೂ ಅವರ ಮಕ್ಕಳನ್ನು ಭೇಟಿಯಾಗಿದ್ದಾರೆ. ವೇಶಾವ್ಯಾಟಿಕೆ ಸಮರ್ಪಿಸಿಕೊಳ್ಳುವುದು ಇನ್ನೂ ನಿಂತಿಲ್ಲ, ಆದರೆ, ಈಗ ಮನೆಗಳಲ್ಲಿಯೇ ನಡೆಯುತ್ತಿದೆ. ಕಳೆದ ವರ್ಷ ತಾಲೂಕಿನಲ್ಲಿ ಇಬ್ಬರು ಇಂತಹ ಪದ್ಧತಿಗೆ ಒಳಗಾಗಿದ್ದಾರೆ. ಮಾಹಿತಿ ಬಹಿರಂಗವಾದ ನಂತರ ಅವರು ತಲೆಮರೆಸಿಕೊಂಡರು ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು.
ಇದನ್ನೂ ಓದಿ: ರಾಯಚೂರು: ದೇವದಾಸಿ ಮಾಡುವುದಾಗಿ ಪೋಷಕರ ಬೆದರಿಕೆಗೆ ಅಂಜಿ ಮನೆ ಬಿಟ್ಟು ಹೋದ ಯುವತಿ!
ಅನೇಕ ಸಂದರ್ಭಗಳಲ್ಲಿ ತಮ್ಮ ಮಕ್ಕಳನ್ನು ಅವರ ಕುಟುಂಬ ಸದಸ್ಯರೇ ಬಚ್ಚಿಡುತ್ತಾರೆ. ಕೆಲವರು ಗರ್ಭಿಣಿಯಾದಾಗ ಹೊರಗೆ ಬರುತ್ತಾರೆ ಎಂದು ಮತ್ತೊಂದು ಮೂಲ ಹೇಳಿದೆ. ಸ್ನೇಹದಂತಹ ಸ್ವಯಂ ಸೇವಾ ಸಂಸ್ಥೆಗಳು ದೇವದಾಸಿ ಮಹಿಳೆಯರ ಸಬಲೀಕರಣಕ್ಕಾಗಿ ನೆರವು ನೀಡುತ್ತಿವೆ ಎಂದು ಮಕ್ಕಳ ಹಕ್ಕುಗಳ ಟ್ರಸ್ಟ್ ನ ವಾಸುದೇವ್ ಶರ್ಮಾ ತಿಳಿಸಿದರು.
2008-09ರಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ನಡೆಸಿದ ಸರ್ವೇ ಪ್ರಕಾರ ರಾಜ್ಯದಲ್ಲಿ 46, 600 ದೇವದಾಸಿಯರು ಇದ್ದರು. ಅಕ್ಕಮಹಾದೇವಿ ಮಹಿಳಾ ವಿವಿ ಮತ್ತು ಸ್ನೇಹ ಸ್ವಯಂ ಸೇವಾ ಸಂಸ್ಥೆ 2017ರಲ್ಲಿ ನಡೆಸಿದ ಸಂಶೋಧನೆ ಪ್ರಕಾರ, ದೇವದಾಸಿಯರ ಸಂಖ್ಯೆ ದುಪ್ಪಟ್ಟಾಗಿದೆ ಮತ್ತು ಸರ್ಕಾರ ಮತ್ತೆ ಸರ್ವೆ ನಡೆಸುವಂತೆ ಹೇಳಿದ್ದು, ಮುಂದಿನ ವರ್ಷ ಮತ್ತೊಂದು ಸರ್ವೆ ನಡೆಯುವ ಸಾಧ್ಯತೆಯಿರುವುದಾಗಿ ಅಧಿಕೃತ ಮೂಲಗಳು ಹೇಳಿವೆ.
ಪ್ರಸ್ತುತ 45 ವರ್ಷದ 30, 200 ಮಾಜಿ ದೇವದಾಸಿಯರಿಗೆ ಸರ್ಕಾರದಿಂದ ಪಿಂಚಣಿ ಸೌಲಭ್ಯ ದೊರೆಯುತ್ತಿದೆ. ಅವರು ಪ್ರತಿ ತಿಂಗಳು 1, 500 ರೂಪಾಯಿಯನ್ನು ನೇರ ನಗದು ವರ್ಗಾವಣೆ ಮೂಲಕ ಆರ್ಥಿಕ ನೆರವು ಪಡೆಯುತ್ತಿದ್ದಾರೆ.
Read more
[wpas_products keywords=”deal of the day”]