Karnataka news paper

‘ಸಾಮಿ ಸಾಮಿ’ ಹಾಡಿಗೆ ರೀಲ್ ವಿಡಿಯೊ ಮಾಡಿದ ರಶ್ಮಿಕಾ


ಬೆಂಗಳೂರು: ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿರುವ ‘ಪುಷ್ಪ’ಸಿನಿಮಾದ ‘ಸಾಮಿ ಸಾಮಿ’ಟೈಟಲ್ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳ್ಳಿ ಸೊಗಡಿನ ಹಾಡಿಗೆ ರಶ್ಮಿಕಾ ಕುಣಿದಿರುವ ಬಗೆ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದೀಗ, ಅದೇ ಹಾಡಿಗೆ ರಶ್ಮಿಕಾ ರೀಲ್ ವಿಡಿಯೊ ಮಾಡಿ ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿದ್ದಾರೆ.

ಚಿತ್ರದ ಹಾಡಿನಲ್ಲಿ ದೇಸಿ ಉಡುಗೆ ತೊಟ್ಟಿರುವ ರಶ್ಮಿಕಾ, ರೀಲ್‌ನಲ್ಲಿ ಮಾಡರ್ನ್ ಉಡುಗೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

‘ಈ ಹಾಡಿಗೆ ನಿಮ್ಮಲ್ಲಿ ಹಲವರು ರೀಲ್ ವಿಡಿಯೊ ಮಾಡಿದ್ದನ್ನು ನಾನು ನೋಡಿದ್ದೆ. ಈಗ ಆ ಸಮುದಾಯಕ್ಕೆ ನಾನೂ ಸೇರಿಕೊಳ್ಳುವ ಇಚ್ಛೆಯಿಂದ ಈ ರೀಲ್ ಮಾಡುತ್ತಿದ್ದೇನೆ. ಮತ್ತಷ್ಟು ಜನ ಈ ಮಾಸ್ ಪಾರ್ಟಿಗೆ ಸೇರಿಕೊಳ್ಳುವುದಾಗಿ ನಂಬುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ, ತೆಲುಗು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಗೀತ ಗೋವಿಂದಂ, ಸರಿಲೇರು ನೀಕೆವ್ವರು ಚಿತ್ರಗಳು ರಶ್ಮಿಕಾಗೆ ಭಾರಿ ಹೆಸರು ತಂದು ಕೊಟ್ಟಿದ್ದವು. ಪುಷ್ಪ ಸಿನಿಮಾ ಸಹ ಅದೇ ಹಾದಿಯಲ್ಲಿ ಸಾಗುವ ಲಕ್ಷಣಗಳು ಕಾಣುತ್ತಿವೆ.

ರಕ್ತಚಂದನ ಚೋರರ ಕಥೆಯುಳ್ಳ ತೆಲುಗು ಸಿನಿಮಾ ‘ಪುಷ್ಪ’ ಡಿಸೆಂಬರ್ 17ರಂದು ತೆರೆ ಕಾಣುತ್ತಿದೆ. ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಐಎಂಡಿಬಿಯ ಪರಿಷ್ಕೃತ ಪಟ್ಟಿಯಲ್ಲಿ ಮೊದಲನೇ ಸ್ಥಾನ ಅಲಂಕರಿಸಿದೆ.





Read More…Source link