Karnataka news paper

ಎನ್‌ಟಿಆರ್‌ 30: ಮತ್ತೊಂದು ತೆಲುಗು ಚಿತ್ರದಲ್ಲಿ ಆಲಿಯಾ ಭಟ್‌


ಮುಂಬರುವ ತೆಲುಗು ಚಿತ್ರ ‘ಎನ್‌ಟಿಆರ್‌ 30’ರಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ ಅಭಿನಯಿಸಲು ಮುಂದಾಗಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜೂನಿಯರ್‌ ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿದ್ದಾರೆ.

‘ನಟ ತಾರಕ್‌ ಅವರ ‘ಎನ್‌ಟಿಆರ್‌ 30’ ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಹೆಚ್ಚು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಇಷ್ಟವಿದೆ ಎಂದಿರುವ ಆಲಿಯಾ ಭಟ್‌, ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಟಾಲಿವುಡ್‌ನಲ್ಲಿ ಆಲಿಯಾ ಭಟ್‌ ನಟನೆಯ ಎರಡನೇ ಚಿತ್ರವಾಗಲಿದೆ.


ನಟಿ ಆಲಿಯಾ ಭಟ್‌ (ಚಿತ್ರ: ಎಎಫ್‌ಪಿ)

ಚಿತ್ರದ ಹೆಸರೇ ಹೇಳುವಂತೆ ನಟ ತಾರಕ್‌ ಅವರ 30ನೇ ಚಿತ್ರ ಇದಾಗಿದೆ. 

ಎಸ್‌ ಎಸ್‌ ರಾಜಮೌಳಿ ನಿರ್ದೇಶನದ ‘ರೈಸ್‌ ರೋರ್‌ ರಿವೋಲ್ಟ್‌’ (ಆರ್‌ಆರ್‌ಆರ್‌) ಸಿನಿಮಾ ಆಲಿಯಾ ಭಟ್‌ ಅವರ ಮೊದಲ ತೆಲುಗು ಸಿನಿಮಾ. ಇದರಲ್ಲಿ ತಾರಕ್‌ ಮತ್ತು ರಾಮ್‌ ಚರಣ್‌ ತೇಜಾ ಸಮನಾಂತರ ಪಾತ್ರಗಳ ಮೂಲಕ ತೆರೆ ಮೇಲೆ ಅಬ್ಬರಿಸಲಿದ್ದಾರೆ. ನಟ ಅಜಯ್‌ ದೇವಗನ್‌ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರವು ಮಾರ್ಚ್‌ 25ಕ್ಕೆ ಬಿಡುಗಡೆಯಾಗಲಿದೆ.

‘ಆರ್‌ಆರ್‌ಆರ್’ ಚಿತ್ರಕ್ಕೂ ಮೊದಲು ಆಲಿಯಾ ಭಟ್‌ ಅವರ ಬಹುನಿರೀಕ್ಷಿತ ಚಿತ್ರ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಿಡುಗಡೆಯಾಗಲಿದೆ. ಫೆಬ್ರುವರಿ 25ಕ್ಕೆ ಸಿನಿಮಾ ತೆರೆಗೆ ಬರಲಿದೆ. ರಣಬೀರ್‌ ಕಪೂರ್‌ ಜೊತೆಗಿನ ಸಿನಿಮಾ ‘ಬ್ರಹ್ಮಾಸ್ತ್ರ’ ಇದೇ ವರ್ಷ ಬಿಡುಗಡೆಗೊಳ್ಳಲಿದೆ.

‘ಎನ್‌ಟಿಆರ್‌ 30’ ಕೊರಟಾಲ ಶಿವ ಮತ್ತು ನಟ ತಾರಕ್‌ ಜೊತೆಯಾಗಿ ಕೆಲಸ ಮಾಡಿದ 2ನೇ ಚಿತ್ರವಾಗಿದೆ. 2016ರಲ್ಲಿ ತೆರೆಕಂಡ ‘ಜನತಾ ಗ್ಯಾರೇಜ್‌’ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಬಾಕ್ಸ್‌ ಆಫೀಸ್‌ನಲ್ಲೂ ಭರ್ಜರಿ ಗಳಿಕೆ ಮಾಡಿತ್ತು.

ಆರಂಭದಲ್ಲಿ ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶನದಲ್ಲಿ ‘ಎನ್‌ಟಿಆರ್‌ 30’ ಸಿನಿಮಾ ಮೂಡಿಬರಲಿದೆ ಎನ್ನಲಾಗಿತ್ತು. ರಾಜಕೀಯ ಕಥಾಹಂದರವನ್ನು ಹೊಂದಿರುವ ಸಿನಿಮಾದಲ್ಲಿ ಸಾಮಾಜಿಕ ಸಂದೇಶವೂ ಒಳಗೊಂಡಿದೆ ಎನ್ನಲಾಗಿದೆ.



Read More…Source link

[wpas_products keywords=”deal of the day party wear for men wedding shirt”]