Online Desk
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಇಳಿಕೆಯಾದ ಕಾರಣ ಜಿಮ್, ಶಾಲೆ, ಕಾಲೇಜುಗಳು ಮತ್ತು ಕೋಚಿಂಗ್ ಸಂಸ್ಥೆಗಳನ್ನು ಫೆ.7 ರಿಂದ ಪುನಃ ತೆರೆಯಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿರ್ಧರಿಸಿದೆ. ಆದಾಗ್ಯೂ, ನಗರದಲ್ಲಿ ಅವಧಿಯನ್ನು ಕಡಿತಗೊಳಿಸಲಾಗಿರುವ ರಾತ್ರಿ ಕರ್ಫ್ಯೂ ಮುಂದುವರೆಯಲಿದ್ದು, ರಾತ್ರಿ 10 ರ ಬದಲಿಗೆ ರಾತ್ರಿ 11 ರಿಂದ ಪ್ರಾರಂಭವಾಗಲಿದೆ.
ಜನವರಿಯಲ್ಲಿ ಡಿಡಿಎಂಎ ವಾರಾಂತ್ಯದ ಕರ್ಫ್ಯೂ ಅನ್ನು ರದ್ದುಗೊಳಿಸಿತು ಮತ್ತು ಬಾರ್ ಮತ್ತು ರೆಸ್ಟೋರೆಂಟ್ ಗಳು ತಮ್ಮ ಆಸನ ಸಾಮರ್ಥ್ಯದ ಶೇಕಡಾ 50 ರಷ್ಟು ಕಾರ್ಯನಿರ್ವಹಿಸಲು ಅವಕಾಶ ನೀಡಿತ್ತು.
ಕಾಲೇಜುಗಳು ಮತ್ತು ಕೋಚಿಂಗ್ ಸಂಸ್ಥೆಗಳು, ಜಿಮ್ ತೆರೆಯಲು ಅವಕಾಶ ನೀಡಲಾಗುವುದು, ಕೋವಿಡ್ ಪ್ರೋಟೋಕಾಲ್ ಪ್ರಕಾರ ಹಂತ ಹಂತವಾಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, 9 ರಿಂದ 12 ನೇ ತರಗತಿಗೆ, ಫೆಬ್ರವರಿ 7 ರಂದು ಶಾಲೆಗಳು ತೆರೆಯಲ್ಪಡುತ್ತವೆ. ಲಸಿಕೆ ಹಾಕದ ಶಿಕ್ಷಕರಿಗೆ ಅನುಮತಿ ನೀಡಲಾಗುವುದಿಲ್ಲ. 15-18 ವರ್ಷ ವಯಸ್ಸಿನವರಿಗೆ ಲಸಿಕೆ ಅಭಿಯಾನವನ್ನು ಹೆಚ್ಚಿಸಬೇಕು, ರಾತ್ರಿ 10 ರಿಂದ ಬೆಳಿಗ್ಗೆ 5 ರ ಬದಲು ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗುತ್ತದೆ, 100ರಷ್ಟು ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ಕಚೇರಿಗಳಿಗೆ ಅನುಮತಿ ನೀಡಲಾಗಿದೆ, ಕಾರುಗಳಲ್ಲಿ ಒಂಟಿ ಚಾಲಕರು ಮಾಸ್ಕ್ ಧರಿಸುವ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು
ದೆಹಲಿಯು ದೈನಂದಿನ ಕೋವಿಡ್ -19 ಪ್ರಕರಣಗಳು ಮತ್ತು ಪಾಸಿಟಿವಿಟಿ ದರದಲ್ಲಿ ಸ್ಥಿರವಾದ ಕುಸಿತ ಕಂಡಿದೆ. ಗುರುವಾರ, ರಾಷ್ಟ್ರೀಯ ರಾಜಧಾನಿ 2,668 ಹೊಸ ಸೋಂಕುಗಳು ಮತ್ತು 13 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಪಾಸಿಟಿವಿಟಿ ದರವು ಶೇಕಡಾ 4.3ಕ್ಕೆ ಕುಸಿದಿದೆ.
Read more
[wpas_products keywords=”deal of the day”]