Karnataka news paper

ಆಸ್ಟ್ರೇಲಿಯಾ ಮುಖ್ಯ ಕೋಚ್‌ ಹುದ್ದೆಗೆ ಹಠಾತ್‌ ರಾಜೀನಾಮೆ ಕೊಟ್ಟ ಲ್ಯಾಂಗರ್‌!


ಹೊಸದಿಲ್ಲಿ: ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಸ್ಥಾನಕ್ಕೆ ಜಸ್ಟಿನ್‌ ಲ್ಯಾಂಗರ್‌ ಹಠಾತ್‌ ರಾಜೀನಾಮೆ ಘೋಷಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇಂಗ್ಲೆಂಡ್‌ ಎದುರು ಆಸ್ಟ್ರೇಲಿಯಾ ತಂಡ ಪ್ರತಿಷ್ಠಿತ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿ ಗೆಲ್ಲುವಂತೆ ಮಾಡಲು ಲ್ಯಾಂಗರ್‌ ಬಹುಮುಖ್ಯ ಪಾತ್ರ ವಹಿಸಿದ್ದರು.

ತಾಯ್ನಾಡಿನಲ್ಲಿ ನಡೆದ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಜೋ ರೂಟ್‌ ಸಾರಥ್ಯದ ಇಂಗ್ಲೆಂಡ್‌ ಎದುರು ಪ್ಯಾಟ್‌ ಕಮಿನ್ಸ್‌ ಮುಂದಾಳತ್ವದ ಆಸ್ಟ್ರೇಲಿಯಾ ತಂಡ 4-0 ಅಂತರದ ಭರ್ಜರಿ ಜಯ ದಾಖಲಿಸಿತ್ತು. ಈಗ ಮಾರ್ಚ್‌-ಏಪ್ರಿಲ್‌ನಲ್ಲಿ ಕಾಂಗರೂ ಪಡೆ ಐತಿಹಾಸಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕೂ ಮುನ್ನ ಕೋಚ್‌ ಲ್ಯಾಂಗರ್‌ ಸೇವೆ ಕಳೆದುಕೊಂಡಿರುವುದು ತಂಡಕ್ಕೆ ಎದುರಾದ ಬಹುದೊಡ್ಡ ಹಿನ್ನಡೆ ಆಗಿದೆ.

ಕಳೆದ ವರ್ಷ ಯುಎಇ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಜಸ್ಟಿನ್‌ ಲ್ಯಾಂಗರ್‌ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ತಂಡ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಇನ್ನು ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ನಡೆಯಲಿದ್ದು, ಹೊಸ ಕೋಚ್‌ ಮಾರ್ಗದರ್ಶನದಲ್ಲಿ ಕಾಂಗರೂ ಪಡೆ ಟ್ರೋಫಿ ಉಳಿಸಿಕೊಳ್ಳಲು ಹೋರಾಡಲಿದೆ.

ಐಪಿಎಲ್‌ 2022 ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಆಸೀಸ್‌ ಆಟಗಾರರು ಅಲಭ್ಯ!

“ಆಸ್ಟ್ರೇಲಿಯಾ ಪುರುಷರ ತಂಡದ ಮುಖ್ಯ ಕೋಚ್‌ ಸ್ಥಾನಕ್ಕೆ ಜಸ್ಟಿನ್‌ ಲ್ಯಾಂಗರ್‌ ಇಂದು ಮುಂಜಾನೆ ರಾಜೀನಾಮೆ ಘೋಷಿಸಿದ್ದಾರೆ,” ಕ್ರೀಡಾ ನಿರ್ವಹಣಾ ಸಂಸ್ಥೆಯಾದ ಡಿಎಸ್‌ಇಜಿ ಹೇಳಿಕೆ ನೀಡಿದೆ. ಕ್ರಿಕೆಟ್‌ ಆಸ್ಟ್ರೇಲಿಯಾ ಕೂಡ ಈ ಸುದ್ದಿಯನ್ನು ಖಚಿತ ಪಡಿಸಿದೆ.

ಈ ನಡುವೆ ಲ್ಯಾಂಗರ್‌ ಹಠಾತ್‌ ರಾಜಿನಾಮೆಗೆ ಮುಖ್ಯ ಕಾರಣ ಏನೆಂಬುದು ಬಹಿರಂಗವಾಗಿಲ್ಲ. ಅವರ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್‌ ಆಂಡ್ರೂ ಮೆಕ್‌ಡೊನಾಲ್ಡ್‌ ತಂಡದ ಕೋಚಿಂಗ್‌ ಜವಾಬ್ದಾರಿ ಹೊರುವ ಸಾಧ್ಯತೆ ಇದೆ.

ಅಚ್ಚರಿ ಹೊರಹಾಕಿದ ರಿಕಿ ಪಾಂಟಿಂಗ್‌
ಜಸ್ಟಿನ್‌ ಲ್ಯಾಂಗರ್‌ ಕೆಲ ಆಟಗಾರರಿಗೆ ಬೆಂಬಲಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ಕೋಚ್‌ ಸ್ಥಾನದಿಂದ ಕಿತ್ತೊಗೆಯಲಾಗಿದೆ ಎಂದು ಆಸೀಸ್‌ನ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ.

“ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಇದು ಅತ್ಯಂತ ಕೆಟ್ಟ ಸುದ್ದಿ. ಕಳೆದ ಆರು ತಿಂಗಳಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ ವ್ಯಕ್ತಿ ನಿರ್ವಹಣೆಯಲ್ಲಿ ಅತ್ಯಂತ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ಟಿಮ್‌ ಪೇಯ್ನ್‌ ಬಳಿಕ ಜಸ್ಟಿನ್‌ ಲ್ಯಾಂಗರ್‌ ಅವರನ್ನು ನಡೆಸಿಕೊಂಡ ರೀತಿ ಸರಿಯಲ್ಲ,” ಎಂದು ಎಬಿಸಿ ರೇಡಿಯೋದಲ್ಲಿ ಪಾಂಟಿಂಗ್‌ ಹೇಳಿದ್ದಾರೆ.

ವಾರ್ನರ್‌ಗೆ 4 ಕೋಟಿಗಿಂತ ಹೆಚ್ಚಿನ ಬೆಲೆ ಸಿಗಲಾರದು: ಬ್ರಾಡ್‌ ಹಾಗ್!

“ಲ್ಯಾಂಗರ್‌ಗೆ ಮಂಡಳಿಯಿಂದ ಸಂಪೂರ್ಣ ಬೆಂಬಲ ಲಭ್ಯವಿರಲಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗುತ್ತದೆ. ಜಸ್ಟಿನ್‌ ಬಗ್ಗೆ ನನಗೆ ಗೊತ್ತಿರುವ ಪ್ರಕಾರ ಕೋಚ್‌ ಸ್ಥಾನದಲ್ಲಿ ಮುಂದುವರಿಯಲು ಅವರು ಬಹಳಾ ಉತ್ಸುಕರಾಗಿದ್ದರು. ಅವರ ಕೋಚಿಂಗ್‌ ವೃತ್ತಿಬದುಕಿನ ಶ್ರೇಷ್ಠ ದಿನಗಳ ಬಳಿಕ ಅವರೇ ಈ ಸ್ಥಾನದಲ್ಲಿ ಮುಂದುವರಿಯಬೇಕಿತ್ತು. ಅವರ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ ಗೆದ್ದು ಈಗ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಜಯ ದಾಖಲಿಸಿದೆ. ಹೀಗಿರುವಾಗ ಕೋಚ್‌ ಸ್ಥಾನ ಬಿಟ್ಟಿರುವುದು ಬಹಳಾ ವಿಚಿತ್ರ ಸಂಗತಿ,” ಎಂದು ಪಂಟರ್‌ ವಿವರಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗರಾದ ಮ್ಯಾಥ್ಯೂ ಹೇಡೆನ್‌, ಡೇಮಿಯೆನ್‌ ಮಾರ್ಟಿನ್‌, ಮಿಚೆಲ್‌ ಜಾನ್ಸನ್‌ ಕೂಡ ಈ ಸುದ್ದಿ ತಿಳಿದು ಅಚ್ಚರಿ ಹೊರಹಾಕಿದ್ದಾರೆ.



Read more

[wpas_products keywords=”deal of the day gym”]