ಪಶ್ಚಿಮ ಉತ್ತರಪ್ರದೇಶದಲ್ಲಿ ಬಿಜೆಪಿ ಆಯೋಜಿಸಿದ್ದ ‘ಜನ್ ಚೌಪಾಲ್’ ವರ್ಚ್ಯುವಲ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ”ಒಂದು ವಾರದಲ್ಲಿ ಚುನಾವಣೆ ಆರಂಭಗೊಳ್ಳಲಿದೆ. ಈ ಹಂತದಲ್ಲಿ ರಾಜ್ಯದ ಜನ ಎಲ್ಲವನ್ನೂ ನಿರ್ಧರಿಸಿಯಾಗಿದೆ. ತಮ್ಮ ಆಯ್ಕೆ ಯಾವುದು ಅನ್ನುವುದನ್ನು ತೀರ್ಮಾನಿಸಿದ್ದಾರೆ. ಗಲಭೆಕೋರರು, ದಾಳಿಕೋರರು ಮತ್ತು ಮಾಫಿಯಾಗಳ ತೆಕ್ಕೆಗೆ ರಾಜ್ಯ ಒಪ್ಪಿಸಬಾರದು ಎಂದು ನಿರ್ಧರಿಸಿದ್ದಾರೆ. ಇದು ಅತ್ಯಂತ ಬುದ್ಧಿವಂತಿಕೆಯ ನಿರ್ಧಾರ,” ಎಂದು ಎದುರಾಳಿಯನ್ನು ತಿವಿಯುತ್ತಲೇ ಮತದಾರರ ಓಲೈಕೆ ಮಾಡಿದರು.
”ಅವರು ಹೆಸರಿಗಷ್ಟೇ ಸಮಾಜವಾದಿಗಳು… ಆದರೆ 100% ಪರಿವಾರವಾದಿಗಳು. ಎಲ್ಲವೂ ನಕಲಿ. ಕುಟುಂಬದ ಕಡು ವ್ಯಾಮೋಹಿಗಳಿಗೆ ಸಮಾಜ ಎನ್ನುವುದು ಎರಡನೇ ದರ್ಜೆ ವಸ್ತು. ಸದ್ಯ ಅಧಿಕಾರ ಹಿಡಿಯುವ ಹುನ್ನಾರದಿಂದ ಇಲ್ಲ ಸಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಅಪ್ಪಿತಪ್ಪಿ ಅವರಿಗೆ ಅಧಿಕಾರವೇನಾದರೂ ಸಿಕ್ಕರೆ, ಜನರ ಬದುಕು ಬೀದಿಪಾಲಾಗುತ್ತದೆ.
ಯೋಗಿ ಆದಿತ್ಯನಾಥ್ ನಾಮಪತ್ರ ಸಲ್ಲಿಕೆ : ರಿವಾಲ್ವರ್,ರೈಫಲ್ ಸೇರಿ 1.5 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ
ತಮ್ಮ ನಿಜ ರೂಪ ಏನು ಎನ್ನುವುದನ್ನು ಆತ್ಮವಿಮರ್ಶೆ ಮಾಡಿ ನೋಡಿಕೊಳ್ಳದ ಅವರು, ವಂಚನೆಯನ್ನೇ ಬದುಕಾಗಿಸಿಕೊಂಡಿದ್ದಾರೆ. ತಾವು ಹೇಳಿದ್ದೆಲ್ಲವನ್ನೂ ಜನ ನಂಬುತ್ತಾರೆ ಎನ್ನುವ ಭ್ರಮೆ ಅವರಿಗಿದೆ. ಆದರೆ, ಕಳೆದ ಐದು ವರ್ಷಗಳ ಹಿಂದೆಯೇ ಈ ಮಾಫಿಯಾದವರನ್ನು ದೂರು ಇಟ್ಟಿರುವ ಜನ ಇನ್ನೆಂದೂ ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಬಿಜೆಪಿ ಬಳಿಯೇ ಅಧಿಕಾರ ಉಳಿಸುವುದು ಖಚಿತ,” ಎಂದು ಭವಿಷ್ಯ ನುಡಿದರು.
”ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಅತ್ಯುತ್ತಮ ಸಾಧನೆ ಮಾಡಿದೆ. ರಾಜ್ಯದಲ್ಲಿ ಮೊದಲ ಬಾರಿ ಕಾನೂನು ಸುವ್ಯವಸ್ಥೆ ನೆಲೆಗೊಳ್ಳುವಂತೆ ನೋಡಿಕೊಂಡಿದ್ದಾರೆ. 21ನೇ ಶತಮಾನದಲ್ಲಿ ಸರಕಾರ ದ್ವಿಗುಣ ವೇಗದಲ್ಲಿ ನಿರಂತರ ಕೆಲಸ ಮಾಡುವ ಅಗತ್ಯ ಇದೆ. ಡಬಲ್ ಎಂಜಿನ್ ಸರಕಾರ ಇದ್ದರೆ ಮಾತ್ರ ಅಂತಹದ್ದೊಂದು ವೇಗದ ಅಭಿವೃದ್ಧಿ ಸಾಧ್ಯ,” ಎಂದು ಪ್ರತಿಪಾದಿಸಿದರು. ಫೆಬ್ರವರಿ 10ರಿಂದ ಮಾರ್ಚ್ 7ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಉತ್ತರಾಖಂಡ ರ‍್ಯಾಲಿ ರದ್ದು!
ವಿಧಾನ-ಸಭೆ ಚುನಾವನೆ ನಡೆಯಲಿರುವ ಮತ್ತೊಂದು ರಾಜ್ಯ ಉತ್ತರಾಖಂಡ-ದಲ್ಲಿಯೂ ಪ್ರಧಾನಿ ಶುಕ್ರವಾರ ವರ್ಚ್ಯುವಲ್ ರ‍್ಯಾಲಿ ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣದಿಂದ ಕೊನೆ ಕ್ಷಣದಲ್ಲಿ ರಾರಯಲಿ ರದ್ದಾಯಿತು.
Read more
[wpas_products keywords=”deal of the day sale today offer all”]