ಓಡಿಐ ಸರಣಿ ಆರಂಭಕ್ಕೂ ಮೊದಲೇ ಟೀಮ್ ಇಂಡಿಯಾಗೆ ಕೋವಿಡ್-19 ದೊಡ್ಡ ಹೊಡೆತ ನೀಡಿದೆ. ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ಋತುರಾಜ್ ಗಾಯಕ್ವಾಡ್‌ಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಮತ್ತೊಂದೆಡೆ ಮೊದಲನೇ ಓಡಿಐ ಪಂದ್ಯಕ್ಕೆ ಕೆ.ಎಲ್ ರಾಹುಲ್ ಅಲಭ್ಯರಾಗಿದ್ದಾರೆ. ಹಾಗಾಗಿ ಆರಂಭಿಕ ಒಡಿಐಗೆ ತಂಡದಲ್ಲಿ ಹಲವು ಬದಲಾವಣೆಯಾಗಲಿದೆ.
ಟೀಮ್ ಇಂಡಿಯಾದಲ್ಲಿನ ಬೆಳವಣಿಗೆಗಳ ಬಗ್ಗೆ ಇಂಡಿಯಾ ನ್ಯೂಸ್ ಜೊತೆ ಚರ್ಚೆ ನಡೆಸಿದ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಸಬಾ ಕರೀಮ್, ವೆಸ್ಟ್ ಇಂಡೀಸ್ ವಿರುದ್ಧದ ಓಡಿಐ ಸರಣಿಯಲ್ಲಿ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವುದು ರೋಹಿತ್ ಶರ್ಮಾ ಮತ್ತು ಹೆಡ್ ಕೋಚ್ ರಾಹುಲ್ ದ್ರಾವಿಡ್‌ಗೆ ತಲೆ ನೋವಾಗಲಿದೆ ಎಂದು ಹೇಳಿದರು.
ರೋಹಿತ್-ಮಯಾಂಕ್ ಓಪನರ್ಸ್; ಮೊದಲನೇ ಓಡಿಐಗೆ ಭಾರತ ಸಂಭಾವ್ಯ XI ಇಂತಿದೆ..
“ಇಶಾನ್ ಕಿಶನ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬೇಕಾ? ಅಥವಾ ಕೆ.ಎಲ್ ರಾಹುಲ್ ಬರುವವರೆಗೂ ಬೇರೆ ಯಾರಿಗಾದರೂ ಅವಕಾಶ ನೀಡಬೇಕಾ? ಎಂಬ ಬಗ್ಗೆ ರೋಹಿತ್ ಶರ್ಮಾ ಯೋಚಿಸಬೇಕಾಗಿದೆ. ಆದ್ದರಿಂದ ಇಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀವಿಲ್ಲಿ ನೋಡಬಹುದು. ಸೆಟ್ ಆಗಿರುವ ಆಟಗಾರರೊಂದಿಗೆ ಆಡುವುದು ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್‌ಗೆ ತುಂಬಾ ಕಠಿಣ,” ಎಂದು ಕರೀಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಹೆಡ್ ಕೋಚ್ ರಾಹುಲ್ ದ್ರಾವಿಡ್‌ಗೆ ಸಾಕಷ್ಟು ಸವಾಲು ಎದುರಾಗಲಿದೆ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
ರಾಹುಲ್ ತೆಗೆದುಕೊಂಡಿದ್ದ ಈ ನಿರ್ಧಾರದಿಂದ ಬೇಸರವಾಗಿದೆ ಎಂದ ಅಗರ್ಕರ್!
“ಎರಡನೇ ಸಂಗತಿ ಏನೆಂದರೆ ವೆಸ್ಟ್ ಇಂಡೀಸ್ ತಂಡ ಸಂಪೂರ್ಣ ಯುವ ಆಟಗಾರರೊಂದಿಗೆ ಕಣಕ್ಕೆ ಇಳಿಯುತ್ತಿದೆ. ಅವರು ಯುವ ಆಟಗಾರರ ಮೇಲೆ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಅದರಂತೆ ಈ ಎಲ್ಲಾ ಆಟಗಾರರು ಮುಕ್ತ ಮನಸಿನಿಂದ ಆಡುತ್ತಾರೆ. ಈ ಕಾರಣದಿಂದಾಗಿ ಈ ಸರಣಿಯು ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್‌ಗೆ ಸವಾಲುದಾಯಕವಾಗಿದೆ,” ಎಂದರು.
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಭರ್ಜರಿ ಗೆಲುವು ಪಡೆಯುವ ಮೂಲಕ ಕೈರೊನ್ ಪೊಲಾರ್ಡ್ ನಾಯಕತ್ವ ವೆಸ್ಟ್ ಇಂಡೀಸ್ ಸೀಮಿತ ಓವರ್‌ಗಳ ತಂಡ ಭಾರತ ಪ್ರವಾಸ ಮಾಡಿದೆ. ಹಾಗಾಗಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪ್ರವಾಸಿಗರನ್ನು ಹಗುರವಾಗಿ ಪರಿಗಣಿಸಬಾರದು.
ಸಚಿನ್-ಗಂಗೂಲಿ ದಾಖಲೆ ಸರಿಗಟ್ಟುವ ಸನಿಹದಲ್ಲಿ ರೋಹಿತ್-ಕೊಹ್ಲಿ ಜೋಡಿ!
ರಾಹುಲ್ ದ್ರಾವಿಡ್ ಬುದ್ದಿವಂತರು: ರಾಜ್‌ಕುಮಾರ್ ಶರ್ಮಾ
ಟೀಮ್ ಇಂಡಿಯಾ ಹೆಡ್ ಕೋಚ್ ಹುದ್ದೆ ಅಲಂಕರಿಸಿದ ದಿನದಿಂದ ಇಲ್ಲಿಯವರೆಗೂ ರಾಹುಲ್ ದ್ರಾವಿಡ್ ಎದುರಿಸಿರುವ ಸವಾಲುಗಳನ್ನು ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ವಿವರಿಸಿದ್ದಾರೆ.
“ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿ ಭಾರತ ತಂಡಕ್ಕೆ ಸೇರ್ಪಡೆಯಾದ ಬಳಿಕ ಅವರ ಎದುರು ಅನಿರೀಕ್ಷಿತವಾಗಿ ಕಠಿಣ ಸಂಗತಿಗಳು ಎದುರಾಗಿವೆ. ಆದರೆ ದ್ರಾವಿಡ್ ತುಂಬಾ ಬುದ್ದಿವಂತರಾಗಿದ್ದಾರೆ ಹಾಗೂ ಕಠಿಣ ಸಂಗತಿಗಳಿಗೆ ಹೇಗೆ ಕೌಂಟರ್ ನೋಡಬೇಕೆಂದು ಅವರಿಗೆ ತುಂಬಾ ಚೆನ್ನಾಗಿ ತಿಳಿದಿದೆ,” ಎಂದು ಅವರು ಹೇಳಿದ್ದಾರೆ.
ಈ ಸ್ಟಾರ್ ಆಟಗಾರನಿಂದ ಪಂತ್ ಸ್ಥಾನಕ್ಕೆ ಕುತ್ತು ಬರಲಿದೆ ಎಂದ ಚೋಪ್ರಾ!
Read more
[wpas_products keywords=”deal of the day sale today offer all”]