Karnataka news paper

ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಹಿಜಾಬ್ ಮೊದಲಿನಿಂದಲೂ‌ ಹಾಕ್ತಿದ್ರು: ಸಿದ್ದರಾಮಯ್ಯ ಆಕ್ರೋಶ


Online Desk

ಬೆಂಗಳೂರು: ಉಡುಪಿಯಲ್ಲಿಯ ಹಿಜಾಬ್ ಮತ್ತು ಕೇಸರಿ ಸಂಘರ್ಷದ ಕುರಿತು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ  ಕಿಡಿಕಾರಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಕುಂದಾಪುರ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಗೇಟ್ ಹಾಕುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳನ್ನ ಕಾಲೇಜಿಗೆ ತಡೆದಿದ್ದಾರೆ. ಕೇಸರಿ ಶಾಲು  ಹಾಕಿ ಬಿಜೆಪಿ  ಬೇಕೆಂದೇ ಮಾಡಿದೆ. ವಿಷಯಾಂತರ ಮಾಡೋಕೆ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

ಹೆಣ್ಣು ಮಕ್ಕಳನ್ನು ವಿದ್ಯೆಯಿಂದ ವಂಚಿತ ಮಾಡುವ ಹುನ್ನಾರ ಇದಾಗಿದೆ. ಸ್ಕಾರ್ಫ್ ಹಾಕೋದು ಅವರ ಧಾರ್ಮಿಕ ನಿಯಮ. ಎಷ್ಟೋ ವರ್ಷಗಳಿಂದ ನಡೆಯುತ್ತಾ ಬರ್ತಿದೆ. ಈಗ ಯಾಕೆ ಇದನ್ನ ತಂದಿರೋದು. ಸರ್ಕಾರಿ ಕಾಲೇಜ್ ಪ್ರಿನ್ಸಿಪಾಲ್ ತಡೆಯೋದು ಸರಿಯೇ ಎಂದು ಪ್ರಶ್ನೆ ಮಾಡಿದರು. ಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡೋ ಪ್ರಯತ್ನ ಮಾಡಲಾಗುತ್ತಿದೆ. ಅವನ್ಯಾರೋ ರಘುಪತಿ ಭಟ್  ಹೇಳಿದ ಅಂತ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಹಿಜಾಬ್ ಮೊದಲಿನಿಂದಲೂ‌ ಹಾಕುತ್ತಿದ್ದರು. ಕೋರ್ಟ್ ನಲ್ಲಿ ವಿಚಾರಣೆಯಿದೆ.  ನಾನು ಲಾಯರ್,ಪ್ರತಿಪಕ್ಷ ನಾಯಕನಾಗಿಯೇ ಹೇಳ್ತಿದ್ದೇನೆ. ಕೇಸರಿ ಶಾಲು ಹಾಕೋದು ನಿನ್ನೆ, ಮೊನ್ನೆಯಿಂದ ಬಂದಿರೋದು. ಹಿಜಾಬ್ ಹಿಂದಿನಿಂದಲೂ ಇದೆ. ಸಂಘ ಪರಿವಾರದ ಪ್ರಯೋಗಾಲಯ ಕರಾವಳಿ ಪ್ರದೇಶ, ಎಲೆಕ್ಷನ್ ಹತ್ತಿರ ಬಂದಾಗ ಇಂತಹ ವಿಷಯಗಳನ್ನು ಮುನ್ನಲೆ ತರಲಾಗುತ್ತದೆ. ಕೊರ್ಟ್ ನ ಡಿಸಿಷನ್ ನೋಡಿಕೊಂಡು ನಾವು ಅಸೆಂಬ್ಲಿಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.

 



Read more

[wpas_products keywords=”deal of the day”]