ಐಪಿಎಲ್ 2022 ಟೂರ್ನಿಯು ಮಾರ್ಚ್ 27ಕ್ಕೆ ಶುರುವಾಗಿ ಮೇ ಎರಡನೇ ವಾರದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಣ ಸರಣಿ ಏಪ್ರಿಲ್ 15ಕ್ಕೆ ಅಂತ್ಯಗೊಳ್ಳಲಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಅಂದಹಾಗೆ ಪಾಕ್ ಪ್ರವಾಸ ಮುಗಿಸಿ ಭಾರತಕ್ಕೆ ಬರುವ ಆಟಗಾರರು ಕನಿಷ್ಠ 5 ದಿನಗಳ ಐಸೊಲೇಷನ್‌ಗೆ ಒಳಪಡಬೇಕಾಗುತ್ತದೆ.
ವೇಳಾಪಟ್ಟಿಯ ಅನುಗುಣವಾಗಿ ಪ್ಯಾಟ್ ಕಮಿನ್ಸ್ ಸಾರಥ್ಯದ ಆಸ್ಟ್ರೇಲಿಯಾ ತಂಡ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ತಲುಪಲಿದೆ. ಮಾರ್ಚ್ 4ರಿಂದ 25ರವರೆಗೆ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಭಾಗವಾಗಿ 3 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆತಿಥೇಯರ ಸವಾಲು ಎದುರಿಸಲಿದೆ. ಬಳಿಕ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಪಂದ್ಯಗಳು ಮಾರ್ಚ್ 29, 31 ನತ್ತು ಏಪ್ರಿಲ್ 2ರಂದು ನಡೆಯಲಿದೆ. ಏಕಮಾತ್ರ ಟಿ20 ಕ್ರಿಕೆಟ್ ಪಂದ್ಯ ಏಪ್ರಿಲ್ 5ರಂದು ಜರುಗಲಿದೆ.
ಟೀಮ್ ಇಂಡಿಯಾ ಆಯ್ಕೆ ವಿಚಾರದಲ್ಲಿ ತಲೆ ಹಾಕುವುದಿಲ್ಲ: ಗಂಗೂಲಿ!
ಪಾಕಿಸ್ತಾನ ಪ್ರವಾಸಕ್ಕೆ ಆಸ್ಟ್ರೇಲಿಯಾ ತನ್ನ ತಂಡ ಪ್ರಕಟಿಸುವುದು ಬಾಕಿ ಇದೆ. “ಪಾಕಿಸ್ತಾನಕ್ಕೆ ಬಲಿಷ್ಠ ತಂಡವನ್ನು ಕಳುಹಿಸಿಕೊಡುವ ಸಾಧ್ಯತೆ ಇದೆ. ತಂಡ ರಚಿಸುವ ಬಗ್ಗೆ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಹಲವು ಮಾಹಿತಿ ಕಲೆಹಾಕಲಾಗಿದ್ದು, ಕೆಲಸ ಶುರುವಾಗಿದೆ. ಅಲ್ಲಿನ ಸುರಕ್ಷತೆ, ಭದ್ರತಾವ್ಯವಸ್ಥೆ, ಬಯೋ ಬಬಲ್ ಎಲ್ಲವನ್ನೂ ಪರಿಶೀಲಿಸಲಾಗಿದ್ದು, ಅದ್ಭುತವಾಗಿದೆ ಎಂದು ತಿಳಿದುಬಂದಿದೆ,” ಎಂದು ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
“ಒಂದೆರಡು ಆಟಗಾರರಿಗೆ ಇನ್ನಷ್ಟು ಮಾಹಿತಿ ಬೇಕಿದೆ. ಉಳಿದವರು ಸರಣಿಯಲ್ಲಿ ಪಾಲ್ಗೊಳ್ಳಲು ಬಹಳಾ ಉತ್ಸುಕರಾಗಿದ್ದಾರೆ. ಯಾರಿಗಾದರೂ ಈ ಪ್ರವಾಸದಿಂದ ಹೊರಗುಳಿಯಬೇಕೆಂದರೆ ಅದರಲ್ಲಿ ಯಾವುದೇ ತೊಂದರೆ ಇಲ್ಲ. ಅವರಿಗೆ ತಂಡದ ಸಂಪೂರ್ಣ ಬೆಂಬಲ ಇರಲಿದೆ,” ಎಂದಿದ್ದಾರೆ.
ಐಪಿಎಲ್‌ಗಾಗಿ ಪಾಕಿಸ್ತಾನ್ ಸೂಪರ್ ಲೀಗ್‌ನ ಅರ್ಧಕ್ಕೆ ಬಿಟ್ಟು ಬಂದ ಫ್ಲವರ್!
ಇನ್ನು ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪ್ಯಾಟ್ ಕಮಿನ್ಸ್ ಕೂಡ ಪಾಲ್ಗೊಳ್ಳಲಿದ್ದು, ಭಾರಿ ಬೆಲೆ ಗಿಟ್ಟಿಸುವ ಸಾಧ್ಯತೆ ಇದೆ. ಅವರ ಹೊರತಾಗಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಜಾಶ್ ಹೇಝಲ್‌ವುಡ್ ಮತ್ತು ಆರೊನ್ ಫಿಂಚ್ ಅವರಂತಹ ಸ್ಟಾರ್‌ಗಳು ಕೂಡ ಹರಾಜಿನಲ್ಲಿ ಇದ್ದಾರೆ. ಅಂದಹಾಗೆ 2019ರಲ್ಲೂ ಪಾಕಿಸ್ತಾನ ವಿರುದ್ಧದ ಸರಣಿ ಬಳಿಕ ಆಸ್ಟ್ರೇಲಿಯಾ ಆಟಗಾರರು ಐಪಿಎಲ್‌ಗೆ ಆಗಮಿಸಿದ್ದರು.
ಐಪಿಎಲ್ 2022 ಟೂರ್ನಿ ಸಲುವಾಗಿ ಬೆಂಗಳೂರಿನಲ್ಲಿ ಫೆಬ್ರವರಿ 12-13ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಒಟ್ಟು 590 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದು, ಎಲ್ಲಾ 10 ತಂಡಗಳು ಹಣದ ಹೊಳೆ ಹರಿಸಲು ಸಜ್ಜಾಗಿವೆ.
Read more
[wpas_products keywords=”deal of the day sale today offer all”]