Karnataka news paper

ಟೀಮ್ ಇಂಡಿಯಾ ಆಯ್ಕೆ ವಿಚಾರದಲ್ಲಿ ತಲೆ ಹಾಕಿಲ್ಲ: ಗಂಗೂಲಿ!


ಮುಂಬೈ: ಕಳೆದ ಒಂದು ವರ್ಷ ಅವಧಿಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹಲವು ಸಮಸ್ಯೆಗಳನ್ನು ಎದುರಿಸಿದೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಮುಂದೂಡಲ್ಪಟ್ಟಿದ್ದು, ಪ್ರತಿಷ್ಠಿತ ರಣಜಿ ಟ್ರೋಫಿ ಆಯೋಜಿಸಲು ಸಾಧ್ಯವಾಗದೇ ಹೋದದ್ದು ಹಾಗೂ ವಿರಾಟ್‌ ಕೊಹ್ಲಿ ಕ್ಯಾಪ್ಟನ್ಸಿ ವಿವಾದ ಭಾರಿ ತಲೆನೋವನ್ನೇ ತಂದಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಬಾಸ್‌ ಸೌರವ್‌ ಗಂಗೂಲಿ, ಭಾರತ ಟಿ20 ಕ್ರಿಕೆಟ್‌ ತಂಡದ ಕ್ಯಾಪ್ಟನ್ಸಿಯಿಂದ ವಿರಾಟ್‌ ಕೊಹ್ಲಿ ಕೆಳಗಿಳಿದ ಬಳಿಕ ಅವರಿಂದ ಒಡಿಐ ತಂಡದ ನಾಯಕತ್ವವನ್ನು ಕಿತ್ತುಕೊಂಡದ್ದರ ಹಿಂದೆ ತಮ್ಮ ಪಾತ್ರವಿಲ್ಲ ಎಂದಿದ್ದಾರೆ. ಕಳೆದ ವರ್ಷ ಟಿ20 ತಂಡದ ನಾಯಕತ್ವ ಬಿಟ್ಟ ಬಳಿಕ ಸೌರವ್‌ ಗಂಗೂಲಿ ತಮ್ಮೊಂದಿಗೆ ಯಾವುದೇ ರೀತಿಯ ಚರ್ಚೆ ಮಾಡಿಲ್ಲ ಎಂದು ಬಾಂಬ್‌ ಸಿಡಿಸಿದ್ದರು. ಇದಕ್ಕೂ ಮೊದಲು ಸೌರವ್‌ ತಾವೇ ಖುದ್ದಾಗಿ ಕೊಹ್ಲಿ ಬಳಿ ಮಾತನಾಡಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾಗಿ ಹೇಳಿಕೊಂಡಿದ್ದರು.

“ಈ ಬಗ್ಗೆ ನಾನು ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ. ಇನ್ನು ಸೆಲೆಕ್ಷನ್‌ ವಿಚಾರದಲ್ಲಿ ಮೂಗು ತೂರಿಸಿದ್ದೇನೆ ಎಂಬ ಆರೋಪಗಳು ಆಧಾರ ರಹಿತ. ನಾನು ಬಿಸಿಸಿಐ ಅಧ್ಯಕ್ಷ. ಬಿಸಿಸಿಐ ಅಧ್ಯಕ್ಷನಾಗಿ ಯಾವ ಕೆಲಸ ಮಾಡಬೇಕು ಅದನ್ನು ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಕಳೆದ ಕೆಲ ದಿನಗಳಲ್ಲಿ ನಾನು ಸೆಲೆಕ್ಷನ್‌ ಮೀಟಿಂಗ್‌ನಲ್ಲಿ ಕುಳಿತಿದ್ದೇನೆ ಎಂಬ ಫೋಟೊಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಡಿವೆ. ಇದು ಸಲೆಕ್ಷನ್‌ ಮೀಟಿಂಗ್‌ನ ಫೋಟೊ ಅಲ್ಲವೇ ಅಲ್ಲ,” ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಫೋಟೊದಲ್ಲಿ ಸೌರವ್‌ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ ಶಾ, ಮಾಜಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಜಂಟಿ ಕಾರ್ಯದರ್ಶಿ ಜಯೇಶ್‌ ಜಾರ್ಜ್‌ ಇದ್ದರು.

ರೋಹಿತ್‌-ಮಯಾಂಕ್‌ ಓಪನರ್ಸ್‌; ಮೊದಲನೇ ಓಡಿಐಗೆ ಭಾರತ ಸಂಭಾವ್ಯ XI ಇಂತಿದೆ..

“ಜಯೇಶ್‌ ಜಾರ್ಜ್‌ ಕೂಡ ಸೆಲೆಕ್ಷನ್‌ ಕಮಿಟಿಯ ಭಾಗವಲ್ಲ. ನಾನು ಭಾರತದ ಪರ 424 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. ಈ ಬಗ್ಗೆ ಜನರಿಗೆ ತಿಳಿಸಿಕೊಡಲು ಇದಕ್ಕಿಂತಲೂ ಒಳ್ಳೆ ಸಮಯ ಮತ್ತೊಂದಿಲ್ಲ,” ಎಂದು ಸೌರವ್‌ ಹೇಳಿದ್ದಾರೆ. ಇದೇ ವೇಳೆ ಕಾರ್ಯದರ್ಶಿ ಜಯ ಶಾ ಮತ್ತು ಬಿಸಿಸಿಐ ಆಡಳಿತ ಮಂಡಳಿ ಸದಸ್ಯರೊಟ್ಟಿಗಿನ ತಮ್ಮ ಬಾಂಧವ್ಯ ಅತ್ಯುತ್ತಮವಾಗಿದೆ ಎಂದು ಸೌರವ್‌ ಸ್ಪಷ್ಟಪಡಿಸಿದ್ದಾರೆ.

‘ಹೋಗಿ ರಣಜಿ ಟ್ರೋಫಿ ಆಡಿ’ ರಹಾನೆ, ಪೂಜಾರಗೆ ಕೊನೇ ಆಯ್ಕೆ ಕೊಟ್ಟ ದಾದಾ!

“ಜೇ ಜೊತೆಗಿನ ಬಾಂಧವ್ಯ ಅದ್ಭುತವಾಗಿದೆ. ಅವರು ನನ್ನ ಅತ್ಯುತ್ತಮ ಗೆಳೆಯ ಹಾಗೂ ವಿಶ್ವಾಸದ ವ್ಯಕ್ತಿ. ನಾನು, ಜೇ, ಅರುಣ್‌ ಧುಮಾಲ್‌ ಮತ್ತು ಜಯೇಶ್‌ ಜಾರ್ಜ್‌ ಎಲ್ಲರೂ ಕಠಿಣ ಪರಿಶ್ರಮ ವಹಿಸಿ, ಕೋವಿಡ್‌-19 ಸಂಕಷ್ಟದ ಸಮಯದಲ್ಲಿ ಮಂಡಳಿಯನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದೇವೆ. ಕ್ರಿಕೆಟ್‌ ಅಡಚಣೆ ಇಲ್ಲದೆ ನಡೆಯುವಂತೆ ಮಾಡುವ ಪ್ರಯತ್ನ ನಡೆಸುತ್ತಿದ್ದೇವೆ. ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ,” ಎಂದಿದ್ದಾರೆ.



Read more

[wpas_products keywords=”deal of the day gym”]