Karnataka news paper

ಮತ್ಸ್ಯಕನ್ಯೆಯಾಗಿ ಬದಲಾದ ನಟಿ ನೋರಾ ಫತೇಹಿ: ವೈರಲ್ ಫೋಟೊ!


ಬೆಂಗಳೂರು: ಬಾಲಿವುಡ್ ಚಿತ್ರಗಳನ್ನು ಮತ್ತು ಐಟಂ ಸಾಂಗ್ ಇಷ್ಟಪಡುವವರು ನೀವಾಗಿದ್ದರೆ ಖಂಡಿತವಾಗಿಯೂ ನೋರಾ ಫತೇಹಿ ಹೆಸರು ಕೇಳಿರುತ್ತೀರಿ.

ಮೂಲತಃ ಕೆನಡಾದವರಾದ ನೋರಾ ಫತೇಹಿ, ಮಾಡೆಲಿಂಗ್, ನೃತ್ಯ, ಗಾಯನ ಮತ್ತು ನಟನೆ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು.

ನೋರಾ ಅವರು ಗುರು ರಾಂಧವ ಅವರ ‘ಡ್ಯಾನ್ಸ್ ಮೇರಿ ರಾಣಿ‘ ಅಲ್ಬಂ ಸಾಂಗ್‌ಗಾಗಿ ಹೊಸ ಅವತಾರ ತಾಳಿದ್ದಾರೆ.

ಮತ್ಸ್ಯಕನ್ಯೆಯಾಗಿ ಬದಲಾಗಿರುವ ನೋರಾ ಅವರು, ಜಾನಥನ್ ಮಾರಿಯೋ ವಿನ್ಯಾಸಗೊಳಿಸಿರುವ ಸುಮಾರು 15 ಕೆಜಿ ತೂಕದ ಉಡುಪನ್ನು ಧರಿಸಿದ್ದಾರೆ.

ನೋರಾ ಅವರು ಮತ್ಸ್ಯಕನ್ಯೆಯಾಗಿ ಬದಲಾಗಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ಸ್ಯಕನ್ಯೆ ಅವತಾರದಲ್ಲಿ ನೋರಾ ಅವರ ಫೋಟೊ ವೈರಲ್ ಆಗಿದೆ.





Read More…Source link