10 ವರ್ಷಗಳಿಂದ ಕಲಬುರಗಿ ಹಲವಾರು ಠಾಣೆಗಳಲ್ಲಿ ಒಟ್ಟು 12, ಬೀದರ್ ಜಿಲ್ಲೆಯಲ್ಲಿ 1 ಸೇರಿ 13 ಕಡೆ ಮನೆ ಲೂಟಿ ಮಾಡಿದ್ದ ಈ ಗ್ಯಾಂಗ್ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿತ್ತು. 2008ರಲ್ಲಿ ಸುಲೇಪೇಟ್‌ನಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲೂ ಈ ಗ್ಯಾಂಗ್ ಕೆಲಸ ಮಾಡಿತ್ತು. ಹೀಗಾಗಿ ಈ ಪ್ರಕರಣ ಸವಾಲಿನದಾಗಿತ್ತು.
ಕಲಬುರಗಿ: ಮೈಮೇಲೆ ಹೊಲಸು ಹಾಕಿ 16.70 ಲಕ್ಷ ರೂ. ಬಂಗಾರ, ಹಣದ ಬ್ಯಾಗ್ ಲಪಟಾಯಿಸಿದ ಖದೀಮ
ಪ್ರೊಬೇಷನರಿ ಡಿವೈಎಸ್ಪಿ ವೀರಯ್ಯ ಹಿರೇಮಠ ಸತತ ಸಾಹಸ ಮತ್ತು ಚಾಕಚಕ್ಯತೆಯಿಂದ ಗ್ಯಾಂಗ್ ಬಂಧನವಾಗಿದೆ ಎಂದು ಎಸ್ಪಿ ಇಶಾ ಪಂತ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಬಂಧಿತರನ್ನು ಕಾಳಗಿ ತಾಲೂಕಿನ ಮಂಗಲಗಿಯ ಚಂದ್ರಕಾಂತ ಅಲಿಯಸ್ ತಲಾವಾರ್ ವಿಜ್ಯಾ ತಂದೆ ಬಸಣ್ಣ ಹಲಗೇನವರ್, ಜಾಮಖೇಡದ ಪರಸ್ ಚಗನ್ ಕಾಳೆ ಮತ್ತು ಖಾನಾಪುರದ ರಾಘವೇಂದ್ರ ಭೀಮಶ್ಯಾ ತೆಂಗಳಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಗ್ಯಾಂಗ್ ಕಟ್ಟಿಕೊಂಡು ಮನೆಗಳ ಕಳ್ಳತನ ಮಾಡುತ್ತಿದ್ದರು. ಅದಕ್ಕೆ ಅಡ್ಡಿಪಡಿಸಿದವರಿಗೆ ಹರಿತ ಆಯುಧಗಳಿಂದ ತಿವಿದು, ಬೆದರಿಸಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎಂದು ಪಂತ್ ತಿಳಿಸಿದರು.
ಇವರಿಂದ ಸುಮಾರು 20.40 ಲಕ್ಷ ರೂ. ಮೌಲ್ಯದ 407.88 ಗ್ರಾಂ. ಬಂಗಾರ, 7 ಕೆ.ಜಿ ಬೆಳ್ಳಿಯ ದೇವರ ಮೂರ್ತಿ ಅಂದಾಜು ಮೌಲ್ಯ 5 ಲಕ್ಷ ರೂ. ಅಲ್ಲದೇ 50 ಸಾವಿರ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ರಾಜ್ಯದ ನಾಲ್ಕು ಸಾರಿಗೆ ನಿಗಮದ ನೌಕರರಿಗೆ 3 ವರ್ಷದಿಂದ ಸಮವಸ್ತ್ರವೇ ನೀಡಿಲ್ಲ!
ಈ ವೇಳೆ ಬಂಧನಕ್ಕೆ ಶ್ರಮಿಸಿದ ಪ್ರೊಬೆಷನರಿ ಡಿಎಸ್‌ಪಿ ವೀರಯ್ಯ ಹಿರೇಮಠ, ಗ್ರಾಮೀಣ ಪಿಎಸ್‌ಐ ಶ್ರೀಮಂತ ಇಲ್ಲಾಳ, ಡಿಸಿಆರ್‌ಬಿ ಪಿಎಸ್‌ಐ ಪಿ.ಎಸ್.ವನಂಜಿಕರ, ಸಿಎನ್‌ಎಫ್ ಪಿಎಸ್‌ಐ ಚೇತನ, ಚಿತ್ತಾಪೂರ ಠಾಣೆಯ ಸಿಎಚ್‌ಸಿ ನಾಗೇಂದ್ರ, ಮಾಡಬೂಳ ಠಾಣೆಯ ಸಿಎಚ್‌ಸಿ ಜಗನ್ನಾಥ, ಮಳಖೇಡ ಠಾಣೆಯ ಸಿಎಚ್‌ಸಿ ಶಿವರಾಜ ಅಲ್ಲದೆ ವಿವಿಧ ಠಾಣೆಗಳ ಸಿಬ್ಬಂದಿಗಳಾದ ಬಲರಾಮ. ಓಂಕಾರ ರೆಡ್ಡಿ, ಅಂಬ್ರೇಶ ಬಿರಾದಾರ, ಬಸವರಾಜ ಅಲ್ಲದೇ ಗ್ರಾಮೀಣ ವೃತ್ತದ ಮಹಿಳಾ ಪೋಲಿಸ್ ಸಿಬ್ಬಂದಿಗಳು ಇದ್ದರು.
Read more
[wpas_products keywords=”deal of the day sale today offer all”]