Karnataka news paper

ಮತ್ತೆ ಕುಸಿತದ ಹಾದಿ ಹಿಡಿದ ಮುಂಬೈನ ಷೇರುಮಾರುಕಟ್ಟೆ


News

|

ಮುಂಬೈ, ಫೆಬ್ರವರಿ 4: ಬಜೆಟ್‌ ಬಳಿಕ ಚೇತರಿಕೆ ಕಂಡಿದ್ದ ಮುಂಬೈ ಷೇರು ಮಾರುಕಟ್ಟೆ, ಮತ್ತೆ ಕುಸಿತದ ಹಾದಿಯನ್ನು ಹಿಡಿದೆ. ವಾರಾಂತ್ಯದ ವಹಿವಾಟಿಗೆ ಅಂದರೆ ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ನಲ್ಲಿ 143.20ಸೂಚ್ಯಂಕ ಇಳಿಕೆಯಾಗಿದ್ದು, 58,848.2ಕ್ಕೆ ಇಳಿಕೆಯಾಗಿದೆ.

ನಿಫ್ಟಿಯಲ್ಲೂ 43.90 ಅಂಕ ಇಳಿಕೆಯಾಗಿ, 13,516.30 ಆಗಿದೆ. ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟು, ಅಮೆರಿಕದ ಫೆಡರಲ್‌ ರಿಸರ್ವ್‌ ನಿರೀಕ್ಷೆಗಿಂತ ಹೆಚ್ಚಿನ ಬಿಗಿಯಾದ ನೀತಿ ಜಾರಿಗೊಳಿಸುವ ಭಯ ಮತ್ತು ಬ್ರೆಂಟ್ ಕಚ್ಚಾ ತೈಲ ಬೆಲೆಯಲ್ಲಿನ ತೀವ್ರ ಏರಿಕೆಯು ಕಳವಳಕಾರಿ ಅಂಶಗಳಾಗಿ ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ತೀವ್ರ ಏರಿಳಿತಕ್ಕೆ ಒಳಗಾಗುತ್ತಿದೆ.

ಚಿಲ್ಲರೆ ಹೂಡಿಕೆದಾರರು ನಿರಾಶಾವಾದಿಗಳಾಗಿದ್ದರೆ, ನಿನ್ನೆ ಡಿಐಐಗಳು ಮಾರುಕಟ್ಟೆಯಿಂದ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ಪರಿಣಾಮ ಶುಕ್ರವಾರ ಬೆಳಗ್ಗೆ ಭಾರತೀಯ ಮಾರುಕಟ್ಟೆಗಳು ಕೆಂಪು ಬಣ್ಣದೊಂದಿಗೇ ಅಂದರೆ ಕುಸಿತದೊಂದಿಗೆ ವಹಿವಾಟು ಆರಂಭಿಸಿವೆ.

ಮತ್ತೆ ಕುಸಿತದ ಹಾದಿ ಹಿಡಿದ ಮುಂಬೈನ ಷೇರುಮಾರುಕಟ್ಟೆ

ನಿಫ್ಟಿ 50 ಸೂಚ್ಯಂಕ ಕೂಡ ಕುಸಿತದಲ್ಲೇ ಇದ್ದು ಶೇ. 0.05 ಇಳಿಕೆ ಕಂಡು 17,552.00ರಲ್ಲಿ ವಹಿವಾಟು ಮುಂದುವರಿಸಿದೆ. ಇದೇ ರೀತಿ ನಿಫ್ಟಿ ಬ್ಯಾಂಕ್‌ 10 ಅಂಕ ಕುಸಿದು 38,999.65ಕ್ಕೆ ಇಳಿಕೆಯಾಗಿದ್ದರೆ, ನಿಫ್ಟಿ ಮಿಡ್‌ಕ್ಯಾಪ್‌ 38 ಅಂಕ ಕುಸಿದು 7,582.05. ಮಟ್ಟದಲ್ಲಿ ವಹಿವಾಟು ಮುಂದುವರಿಸಿದೆ.

ನಿಫ್ಟಿ 50 ಸೂಚ್ಯಂಕದಲ್ಲಿ ಹಿಂಡಾಲ್ಕೊ ಇಂಡಸ್ಟ್ರೀಸ್‌, ದಿವೀಸ್‌ ಲ್ಯಾಬೊರೇಟರಿ, ಒಎನ್‌ಜಿಸಿ, ಟಾಟಾ ಸ್ಟೀಲ್‌ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್‌ ಇಂದಿನ ಬೆಳಗ್ಗಿನ ಅವಧಿಯಲ್ಲಿ ಗಳಿಕೆ ದಾಖಲಿಸಿವೆ. ಇದೇ ವೇಳೆ ಹೀರೋ ಮೋಟೋಕಾರ್ಪ್‌, ಬಜಾಜ್‌ ಆಟೋ, ಐಷರ್‌ ಮೋಟಾರ್ಸ್‌, ಸಿಪ್ಲಾ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಕುಸಿತ ದಾಖಲಿಸಿವೆ.

ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 89 ಅಂಕ ಇಳಿಕೆ ಕಂಡು 58,698.89 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾಸ್ಯುಟಿಕಲ್ಸ್, ಇಂಡಸ್‌ಇಂಡ್‌ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಲಾಭ ಗಳಿಸಿವೆ. ಇದೇ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ವಿಪ್ರೋ, ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೋಸಿಸ್ ಷೇರುಗಳು ಕುಸಿತ ಕಂಡಿವೆ.

English summary

Stock Market Closing: Nifty, Sensex End 0.25% lower; Realty, PSU Bank and Auto Stocks Drag

Extending the losses to second day, the Indian markets ended last trading day of the week in the red amid volatility and pressure from Realty, PSU Bank and auto sectors on Friday.

Story first published: Friday, February 4, 2022, 17:40 [IST]



Read more…

[wpas_products keywords=”deal of the day”]