Karnataka news paper

ನೆಗೆಟಿವ್ ಕಾಮೆಂಟ್ ಹಾಕೋರಿಗೆ ಒಂದೊಂದಾಗಿಯೇ ಉತ್ತರ ಕೊಟ್ಟ ಬಿಗ್ ಬಾಸ್ ನಿವೇದಿತಾ ಗೌಡ


ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಅವರು ಅಪ್‌ಲೋಡ್ ಮಾಡುವ ಫೋಟೋ, ವಿಡಿಯೋಗಳಿಗೆ ಸಾಕಷ್ಟು ಪಾಸಿಟಿವ್, ನೆಗೆಟಿವ್ ಕಾಮೆಂಟ್ಸ್ ಬರುತ್ತಿರುತ್ತದೆ, ಅದಕ್ಕೆಲ್ಲ ಇನ್ನೊಂದು ವಿಡಿಯೋ ಮಾಡಿ ನಿವೇದಿತಾ ಉತ್ತರ ನೀಡಿದ್ದಾರೆ.

ಕನ್ನಡ ಮಾತನಾಡು, ಅಥವಾ ಇಂಗ್ಲಿಷ್ ಯುಟ್ಯೂಬ್ ಚಾನೆಲ್ ಮಾತನಾಡು

ಯುಟ್ಯೂಬ್‌ ಅನ್ನೋದು ಜಾಗತಿಕ ವೇದಿಕೆ. ಅಲ್ಲಿ ಕನ್ನಡ, ಇಂಗ್ಲಿಷ್ ಅಂತ ಯಾವುದೇ ವ್ಯತ್ಯಾಸವಿಲ್ಲ. ನನಗೆ ಬೇರೆ ಭಾಷೆಯ ಪ್ರೇಕ್ಷಕರು ಇರೋದರಿಂದ ನಾನು ಎಲ್ಲ ಭಾಷೆ ಮಿಕ್ಸ್ ಮಾಡಿ ಮಾತನಾಡುತ್ತೇನೆ. ನಾನು ಕನ್ನಡ ಮಾತನಾಡುತ್ತೇನೆ, ಅದನ್ನು ಯಾಕೆ ನೀವು ನೋಡುವುದಿಲ್ಲ. ನೀವು ಇಂಗ್ಲಿಷ್‌ನಲ್ಲಿಯೇ ಕಾಮೆಂಟ್ ಮಾಡಿದ್ದೀರಿ, ಹೀಗಾಗಿ ನಿಮ್ಮ ಕಾಮೆಂಟ್‌ಗೆ ಅರ್ಥವೇ ಇಲ್ಲ.

ಹೊಸ ವರ್ಷ ಅಂದ್ರೆ ಎಣ್ಣೆ ಹೊಡೆಯೋದಾ? ಬೇರೆ ಕೆಲಸವೇ ಇಲ್ಲ?

ನಾನು ಹೊಸ ವರ್ಷದ ದಿನ ಇಡೀ ದಿನ ಎಣ್ಣೆ ಹೊಡೆದೆ ಅಂತ ನಿಮಗೆ ಗೊತ್ತಾ? ಗೊತ್ತಿಲ್ಲದೆ ಯಾಕೆ ಕಾಮೆಂಟ್ ಮಾಡುತ್ತೀರಿ? ವೈನ್‌ನ್ನು ಯಾಕೆ ಹೇಟ್ ಮಾಡಲಾಗತ್ತೆ? ವೈನ್ ಮಾಡಲು ಏನೇನು ಪ್ರಕ್ರಿಯೆ ನಡೆಸಲಾಗತ್ತೆ? ಅಂತ ತೋರಿಸುವ ಒಂದು ರೀತಿಯ ಶೈಕ್ಷಣಿಕ ಕಂಟೆಂಟ್ ನೀಡಿದ್ದೇವೆ, ಅಲ್ಲಿ ಕಾನೂನು ಬಾಹಿರ ಕಂಟೆಂಟ್ ಇಲ್ಲ.

ಎಲ್ಲರ ಮನೆಯಲ್ಲಿ ನಿಮ್ಮ ರೀತಿಯ ಹೆಣ್ಣುಮಕ್ಕಳಿದ್ದರೆ ಅವರ ಹೊಟ್ಟೆ ತುಂಬಿದ ಹಾಗೆ..

ಎಲ್ಲ ಕೆಲಸವನ್ನು ಹೆಣ್ಣು ಮಕ್ಕಳೇ ಮಾಡಬೇಕಾ? ಅಡುಗೆ ಕೆಲಸ ಮಾಡೋದು? ಮಕ್ಕಳನ್ನು ನೋಡಿಕೊಳ್ಳೋದು ಹೆಣ್ಣು ಮಕ್ಕಳು ಮಾತ್ರಾನಾ? ಎಲ್ಲ ಕೆಲಸವನ್ನು ಗಂಡು, ಹೆಣ್ಣು ಮಕ್ಕಳು ಮಾಡಬೇಕು.

ಮಾಸ್ಟರ್ ಆನಂದ್ ಪುತ್ರಿ-ನಿವೇದಿತಾ ಗೌಡ ನಡುವೆ ಮಾತಿನ ಜಟಾಪಟಿ; ವಂಶಿಕಾ ಮಾತಿಗೆ ಸುಸ್ತಾದ ಜಡ್ಜ್‌ಸ್

ಪ್ರಚಾರಕ್ಕಾಗಿ ವಿಡಿಯೋ ಮಾಡುತ್ತೀರಿ?
ನಾನು ಕೆಲ ಪ್ರಾಡಕ್ಟ್‌ಗಳನ್ನು ಬಳಸಿ ನೋಡುತ್ತೇನೆ, ಇಷ್ಟ ಆದರೆ ಮಾತ್ರ ನಾನು ವಿಡಿಯೋ ಮಾಡಿ ಅಪ್‌ಲೋಡ್ ಮಾಡುತ್ತೇನೆ. ನಿಮಗೆ ಇಷ್ಟ ಆದರೆ ಆ ಪ್ರಾಡಕ್ಟ್ ಬಳಸಿ, ಇಷ್ಟ ಆಗಿಲ್ಲ ಅಂದ್ರೆ ಬಳಸಬೇಡಿ

ಮದುವೆ ಆಯ್ತು, ಚಂದನ್ ಅವರಿಗೆ ಬೆಂಬಲ ನೀಡಿ
ಮದುವೆ ಆದರೆ ಹೆಣ್ಣು ಮಕ್ಕಳು ಅಡುಗೆ ಮಾಡಿಕೊಂಡು, ಪಾತ್ರೆ ತೊಳೆದುಕೊಂಡು ಇರಬೇಕಾ? 21ನೇ ಶತಮಾನದಲ್ಲಿ ಹುಡುಗಿಯರು ಸ್ವತಂತ್ರರಾಗಿ ಇರಬೇಕು, ನಾವು ದುಡಿದು ನಮ್ಮ ಖರ್ಚನ್ನು ನಾವು ನೋಡಿಕೊಳ್ಳಬೇಕು

ಪ್ರೇಮ ನಿವೇದನೆ ಮಾಡಿದ ಕ್ಷಣ ನೆನಪಿಸಿಕೊಂಡು ಕಣ್ಣೀರು ಹಾಕಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ!

ಕೆಲಸ ಇಲ್ಲ, ಬಡವರಿಗೆ ಸಹಾಯ ಮಾಡಿ
ನನಗೆ ಕೆಲಸ ಇಲ್ಲ ಅಂತ ಹೇಳುತ್ತಾರಾ? ಯುಟ್ಯೂಬ್ ವಿಡಿಯೋ ಮಾಡಿ ನಾನು ಹಣ ಗಳಿಸುತ್ತೇನೆ, ನಾನು ಕೆಲ ಶೋಗಳಲ್ಲಿಯೂ ಭಾಗವಹಿಸುತ್ತೇನೆ. ಬಡವರಿಗೆ ಮಾಡಿದ ಸಹಾಯವನ್ನು ನಾನು ತೋರಿಸಿಕೊಳ್ಳುವುದಿಲ್ಲ. ನಾವು ಲಾಕ್‌ಡೌನ್ ಟೈಮ್‌ನಲ್ಲಿ ಕೆಲಸಗಾರರಿಗೆ ಸಂಬಳ ನೀಡಿದ್ದೇವೆ, ಅನೇಕರಿಗೆ ಸಹಾಯ ಮಾಡಿದ್ದೇವೆ. ಬೇರೆಯವರಿಗೆ ಗೌರವ ಕೊಡೋದು, ವಿಧೇಯತೆಯಿಂದ ಇರೋದು ಮೊದಲ ಸಹಾಯ. ಆರ್ಥಿಕ ಸಹಾಯಕ್ಕಿಂತ ಮೊದಲು ಭಾವನಾತ್ಮಕವಾಗಿ ಸಹಾಯ ಮಾಡಿ

ಮೈಮುಚ್ಚಿಕೊಳ್ಳುವ ರೀತಿ ಬಟ್ಟೆ ಹಾಕಿಕೊಳ್ಳಿ

ಬಟ್ಟೆ ಅನ್ನೋದು ಅವರವರ ವೈಯಕ್ತಿಕ ಆಯ್ಕೆ. ನನಗೆ ಇಷ್ಟ ಬಂದಂತೆ ನಾನು ಬಟ್ಟೆ ಹಾಕಿಕೊಳ್ಳುವೆ. ನೀವು ಒಳ್ಳೆಯ ದೃಷ್ಟಿಯಲ್ಲಿ ನೋಡಿದರೆ ಒಳ್ಳೆಯದಾಗಿ ಕಾಣತ್ತೆ, ಕೆಟ್ಟ ದೃಷ್ಟಿಯಲ್ಲಿ ನೋಡಿದರೆ ಕೆಟ್ಟದಾಗಿ ಕಾಣತ್ತೆ. ನಿಮ್ಮ ಬಟ್ಟೆ ಚೆನ್ನಾಗಿಲ್ಲ ಅಂತ ನಾನು ಹೇಳುತ್ತೀನಾ? ಡ್ರೆಸ್ ಅನ್ನೋದು ಈಗ ಬಂದಿರುವ ಫ್ಯಾಷನ್.

ಬಡವರಿಗೆ ಸಹಾಯ ಮಾಡಿ

ನನಗೆ ಎಷ್ಟು ಸಂಬಳ ಬರತ್ತೆ ಅನ್ನೋದು ನಿಮಗೆ ಗೊತ್ತಿಲ್ಲ. ಬೇರೆಯವರಿಗೆ ಸಹಾಯ ಮಾಡಿ ಅನ್ನೋ ಬದಲು ಮೊದಲು ನೀವು ಸಹಾಯ ಮಾಡಿ

ನಿಮ್ಮ ಶೂಗಳು Antique

ನಾನು ತುಂಬ ಹೊಸ ಹೊಸ ಶೂಗಳನ್ನು ಇಟ್ಟುಕೊಂಡಿದ್ದೇನೆ. ಆದರೆ ನೀವು ಹೇಳಿರೋದು ಬೇಸರ ತಂದಿದೆ. ನಾನು ಇಂಡಸ್ಟ್ರಿಯಲ್ಲಿ ಇರೋದರಿಂದ ನಾನು ಹಾಕಿರುವ ಬಟ್ಟೆ, ಶೂಗಳನ್ನು ಮತ್ತೆ ಮತ್ತೆ ಹಾಕಲಾಗದು. ನೀವು ಏನೇ ಒಂದು ನೆಗೆಟಿವ್ ಹಾಕುವ ಮುಂಚೆ ನಿಮಗೆ ಈ ರೀತಿ ಕಾಮೆಂಟ್ ಬಂದ್ರೆ ಹೇಗೆ ಆಗತ್ತೆ ಅಂತ ನೋಡಿ. ಪಾಸಿಟಿವ್ ಕಾಮೆಂಟ್ ಹಾಕಿ ನೋಡಿ. ಇಂದಿನ ಸಂದರ್ಭ ತುಂಬ ಕಷ್ಟವಾಗಿದೆ. ನಾನು ಕೂಡ ಸಾಕಷ್ಟು ಕಷ್ಟ ನೋಡಿದ್ದೇನೆ, ಅಂತೆ ಬೇರೆಯವರು ಕೂಡ ಏನೇನೋ ಸಮಸ್ಯೆ ಎದುರಿಸುತ್ತಿರುತ್ತಾರೆ. ನನ್ನನ್ನು ದ್ವೇಷ ಮಾಡುವವರಿಗೆ ಧನ್ಯವಾದಗಳು, ನಿಮ್ಮಿಂದ ನನಗೆ ಒಂದು ವೀಕ್ಷಣೆ, ಕಾಮೆಂಟ್ ಸಿಗುತ್ತಿದೆ.ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಬರುವ ನೆಗೆಟಿವ್ ಕಾಮೆಂಟ್ಸ್‌ಗಳಿಗೆ ಉತ್ತರ ನೀಡಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.



Read more

[wpas_products keywords=”deal of the day party wear dress for women stylish indian”]