Karnataka news paper

ಫೆ.21ಕ್ಕೆ ಫರ್ಹಾನ್‌ ಅಖ್ತರ್‌ – ಶಿಬಾನಿ ದಂಡೇಕರ್‌ ವಿವಾಹ: ಜಾವೇದ್‌ ಅಖ್ತರ್‌


ಮೂರು ವರ್ಷಗಳಿಂದ ಪ್ರೇಮಿಗಳಾಗಿದ್ದ ನಟ ಫರ್ಹಾನ್‌ ಅಖ್ತರ್‌ ಮತ್ತು ನಟಿ ಶಿಬಾನಿ ದಂಡೇಕರ್‌ ವಿವಾಹವಾಗುತ್ತಿದ್ದಾರೆ. ಫೆಬ್ರುವರಿ 21ರಂದು ‘ವಿವಾಹ ನೋಂದಣಿ’ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಫರಾನ್‌ ಅವರ ತಂದೆ ಗೀತೆ ರಚನೆಕಾರ, ಕವಿ ಜಾವೇದ್‌ ಅಖ್ತರ್‌ ಅವರು ದೃಢ ಪಡಿಸಿದ್ದಾರೆ.

ವಿವಾಹ ನೋಂದಣಿ ನಂತರ ಖಂಡಲಾದಲ್ಲಿರುವ ಮನೆಯಲ್ಲೇ ಸಂಬಂಧಿಗಳು ಮತ್ತು ಆತ್ಮೀಯರಿಗೆ ಔತಣಕೂಟ ಏರ್ಪಡಿಸಲಾಗಿದೆ.

‘ಕೊರೊನಾ ಕಾರಣದಿಂದ ದೊಡ್ಡಮಟ್ಟದ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿಲ್ಲ. ಕೆಲವೇ ಜನರನ್ನು ಒಳಗೊಂಡಂತೆ ಸರಳವಾಗಿ ಮದುವೆ ನಡೆಯಲಿದೆ. ಮದುವೆ ಆಮಂತ್ರಣ ಪತ್ರಿಕೆಯನ್ನು ಇನ್ನೂ ಯಾರಿಗೂ ಕೊಟ್ಟಿಲ್ಲ’ ಎಂದು ಜಾವೇದ್‌ ಅಖ್ತರ್‌ ಅವರು ‘ಬಾಂಬೆ ಟೈಮ್ಸ್‌’ಗೆ ತಿಳಿಸಿದ್ದಾರೆ.

ಶಿಬಾನಿ ಅವರು ಸೊಸೆಯಾಗಿ ಮನೆಗೆ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜಾವೇದ್‌, ‘ತುಂಬ ಒಳ್ಳೆಯ ಹುಡುಗಿ. ನಮ್ಮೆಲ್ಲರಿಗೂ ಇಷ್ಟವಾಗಿದ್ದಾಳೆ. ಎಲ್ಲದಕ್ಕಿಂತ ಹೆಚ್ಚಾಗಿ ಫರಾನ್‌ ಮತ್ತು ಶಿಬಾನಿ ತುಂಬ ಚೆನ್ನಾಗಿ ಹೊಂದಿಕೊಂಡಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.



Read More…Source link

[wpas_products keywords=”deal of the day party wear for men wedding shirt”]