Karnataka news paper

ಕ್ರಿಪ್ಟೋ ಎಂದಿಗೂ ಕಾನೂನುಬದ್ಧ ಕರೆನ್ಸಿ ಆಗುವುದಿಲ್ಲ: ಡಿಜಿಟಲ್ ಕರೆನ್ಸಿ ಭವಿಷ್ಯದ ಕುರಿತು ಹಣಕಾಸು ಕಾರ್ಯದರ್ಶಿ


PTI

ನವದೆಹಲಿ: ಕ್ರಿಪ್ಟೋ ಕರೆನ್ಸಿ ಎಂದಿಗೂ ಕಾನೂನುಬದ್ಧ ಟೆಂಡರ್ ಆಗುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ ವಿ ಸೋಮನಾಥನ್ ಅವರು ಮಾರುಕಟ್ಟೆಯಲ್ಲಿ ಖಾಸಗಿ ಡಿಜಿಟಲ್ ಕರೆನ್ಸಿಗಳ ಕಾನೂನುಬದ್ಧತೆಯ ಅನುಮಾನಗಳಿಗೆ ಗುರುವಾರ ತೆರೆ ಎಳೆದಿದ್ದಾರೆ.

2022-23ರ ಬಜೆಟ್ ವರ್ಚುವಲ್ ಡಿಜಿಟಲ್ ಸ್ವತ್ತುಗಳ ತೆರಿಗೆಯ ಬಗ್ಗೆ ಸ್ಪಷ್ಟತೆಯನ್ನು ನೀಡಿದೆ ಮತ್ತು ಕ್ರಿಪ್ಟೋ ವಹಿವಾಟುಗಳ ಮೂಲಕ ಗಳಿಸಿದ ಲಾಭಗಳ ಮೇಲೆ ಶೇಕಡಾ 30 ರಷ್ಟು ತೆರಿಗೆಯನ್ನು ವಿಧಿಸಲು ಪ್ರಸ್ತಾಪಿಸಿದೆ.

ಇದನ್ನು ಓದಿ: ಮುಂದಿನ ವರ್ಷದ ಐಟಿ ರಿಟರ್ನ್ ಸಲ್ಲಿಸಲು ಕ್ರಿಪ್ಟೋ ಕರೆನ್ಸಿ ಆದಾಯಕ್ಕೆ ಪ್ರತ್ಯೇಕ ಕಾಲಮ್ ಇರುತ್ತದೆ: ಕೇಂದ್ರ 

ಕ್ರಿಪ್ಟೋ ಕರೆನ್ಸಿ ಚಿನ್ನ ಮತ್ತು ವಜ್ರದಂತೆಯೇ ಮೌಲ್ಯಯುತವಾಗಿದ್ದರೂ ಸಹ ಅದು ಎಂದಿಗೂ ಕಾನೂನುಬದ್ಧವಲ್ಲ. ಖಾಸಗಿ ಕ್ರಿಪ್ಟೋಕರೆನ್ಸಿಗಳು ಕಾನೂನುಬದ್ಧವಾಗುವುದಿಲ್ಲ ಎಂದು ಸೋಮನಾಥನ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಕ್ರಿಪ್ಟೋ ಎಂದಿಗೂ ಕಾನೂನುಬದ್ಧ ವಹಿವಾಟು ಆಗುವುದಿಲ್ಲ. ಕಾನೂನುಬದ್ಧ ಎಂದರೆ ಕಾನೂನಿನ ಮೂಲಕ ಸಾಲಗಳ ಇತ್ಯರ್ಥದಲ್ಲಿ ಅದನ್ನು ಸ್ವೀಕರಿಸಲಾಗುತ್ತದೆ. ಭಾರತವು ಯಾವುದೇ ಕ್ರಿಪ್ಟೋ ಆಸ್ತಿಯನ್ನು ಕಾನೂನುಬದ್ಧವಾಗಿ ಮಾಡುವುದಿಲ್ಲ. ಭಾರತದಲ್ಲಿ ರಿಸರ್ವ್ ಬ್ಯಾಂಕಿನ ‘ಡಿಜಿಟಲ್ ರೂಪಾಯಿ’ ಮಾತ್ರ ಕಾನೂನುಬದ್ಧ ಆಗಿರುತ್ತದೆ’ಸೋಮನಾಥನ್ ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾನೂನುಬದ್ಧಗೊಂಡ ಬಿಟ್‌ಕಾಯಿನ್ ಎಲ್ ಸಾಲ್ವಡಾರ್ ಹೊರತುಪಡಿಸಿ, ಬೇರೆ ಯಾವುದೇ ದೇಶವು ಕ್ರಿಪ್ಟೋವನ್ನು ಕಾನೂನು ಟೆಂಡರ್ ಆಗಿ ಮಾಡಿಲ್ಲ.



Read more…

[wpas_products keywords=”deal of the day”]